ಶಿವಮೊಗ್ಗ: ಸಂಸತ್ತು ಅಧಿವೇಶನ ಸುಗಮವಾಗಿ ನಡೆಯಲು ಕಾಂಗ್ರೆಸ್ ಸೇರಿದಂತೆ ಇತರೆ ವಿಪಕ್ಷಗಳು ಅಡ್ಡಿಪಡಿಸುತ್ತಿವೆ ಎಂದು ಸಂಸದ ಬಿ.ವೈ.ರಾಘವೇಂದ್ರ ಆರೋಪಿಸಿದ್ದಾರೆ.
Advertisement
ಶಿವಮೊಗ್ಗದಲ್ಲಿ ಈ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಪೆಗಾಸಿಸ್ ವಿಚಾರ ಮುಂದಿಟ್ಟುಕೊಂಡು ಸದನ ನಡೆಯಲು ಬಿಡದೇ ವಿಪಕ್ಷಗಳು ಕಾಲಹರಣ ಮಾಡುತ್ತಿವೆ. ಪೆಗಾಸಿಸ್ ಹಗರಣವನ್ನೇ ದೊಡ್ಡ ಪ್ರಕರಣ ಎಂದು ಬಿಂಬಿಸಲು ಹೊರಟಿದೆ. ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳು ಫಲಾಯನವಾದ ಮಾಡುವ ಕೆಲಸ ಮಾಡುತ್ತಿವೆ. ಆ ಮೂಲಕ ಪ್ರಧಾನಿ ಮೋದಿಯವರ ಸಾಧನೆಯನ್ನ ಬೇರೆ ಕಡೆ ಡೈವರ್ಟ್ ಮಾಡಲು ಹೊರಟಿವೆ. ವಿಪಕ್ಷಗಳ ಈ ಸಂವಿಧಾನ ವಿರೋಧಿ ನಡೆಯನ್ನ ಬಿಜೆಪಿ ಖಂಡಿಸುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಬ್ಲೂಟೂತ್ ಇಯರ್ ಫೋನ್ ಸ್ಫೋಟ ಯುವಕ ಸಾವು
Advertisement
Advertisement
ಸಂಸತ್ತಿನಲ್ಲಿ ಕೋವಿಡ್ 3 ನೇ ಅಲೆ, ಗಡಿ ಸಮಸ್ಯೆ, ಮೇಕೆದಾಟು ಯೋಜನೆ, ನೂತನ ಮಸೂದೆಗಳು ಸೇರಿದಂತೆ ದೇಶದ ಸಮಸ್ಯೆಗಳ ಬಗ್ಗೆ ಆರೋಗ್ಯಕರ ಚರ್ಚೆ ನಡೆಸಬೇಕಿದೆ. ಈಗಾಗಿ ಸುಗಮ ಕಲಾಪ ನಡೆಯಲು ವಿಪಕ್ಷಗಳು ಈಗಲಾದರೂ ಸಹಕಾರ ನೀಡಬೇಕು. ಪ್ರಜಾಪ್ರಭುತ್ವ ವಿರೋಧಿ ಧೋರಣೆಯನ್ನು ಕೈ ಬಿಡಬೇಕು ಎಂದು ಸಂಸದ ರಾಘವೇಂದ್ರ ಮನವಿ ಮಾಡಿದ್ದಾರೆ.
Advertisement