ಬೆಂಗಳೂರು: ಇಂದು ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪ್ರಶಾಂತ್ ಸಂಬರಗಿಗೆ ನೋಟಿಸ್ ನೀಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಸುಮಾರು 10 ಗಂಟೆ ನಂತರ ಸಿಸಿಬಿ ಕಚೇರಿಗೆ ಪ್ರಶಾಂತ್ ಸಂಬರಗಿ ಬರಲಿದ್ದಾರೆ. ಆದರೆ ಇದರಿಂದ ನಟಿ ಸಂಜನಾ ಮತ್ತು ಶಾಸಕ ಜಮೀರ್ ಅಹ್ಮದ್‍ಗೆ ಟೆನ್ಶನ್ ಶುರುವಾಗಿದೆ. ಇದನ್ನೂ ಓದಿ: ಕೋರ್ಟ್ ಆದೇಶ ಹೊರಬರುತ್ತಿದ್ದಂತೆ ರಾಗಿಣಿ-ಸಂಜನಾ ಕಣ್ಣೀರು
Advertisement
ಪ್ರಶಾಂತ್ ಸಂಬರಗಿ ನಟಿ ಸಂಜನಾ ಮತ್ತು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಆರೋಪ ಮಾಡಿದ್ದರು. ಬಾಲಿವುಡ್ ಸೇರಿದಂತೆ ಸ್ಯಾಂಡಲ್‍ವುಡ್ ಡ್ರಗ್ಸ್ ಮಾಫಿಯಾ ಹಿಂದೆ ಶಾಸಕರ ಕೈವಾಡವಿದೆ ಎಂದು ಆರೋಪ ಮಾಡಿದ್ದರು. ಹೀಗಾಗಿ ನಿಮ್ಮ ಬಳಿ ಇರುವ ದಾಖಲೆ ಸಹಿತ ವಿಚಾರಣೆ ಬನ್ನಿ ಎಂದು ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದರು. ಇದನ್ನೂ ಓದಿ: ಸಿಕ್ಕಾಕೊಂಡ್ರರೆ ನಾವು ಮತ್ತೆ ಜೈಲಿಗೆ ಹೋಗ್ಬೇಕಾಗುತ್ತೆ- ಆಸ್ಪತ್ರೆಯಲ್ಲಿ ನಟಿ ರಾಗಿಣಿ ಕಿರಿಕ್
Advertisement
Advertisement
ಡ್ರಗ್ಸ್ ಜಾಲದಲ್ಲಿ ಯಾರ‍್ಯಾರು ನಂಟು ಹೊಂದಿದ್ದಾರೆಂಬ ಮಾಹಿತಿ ಕೋರಿ ನೋಟಿಸ್ ನೀಡಲಾಗಿದೆ. ಆದ್ದರಿಂದ ದಾಖಲೆ ಸಮೇತ ಸಿಸಿಬಿಗೆ ಹಾಜರಾಗಲು ಸಂಬರಗಿ ಸಿದ್ಧತೆ ಮಾಡಿಕೊಂಡಿದ್ದಾರೆ. ಹೀಗಾಗಿ ಸಂಬರಗಿ ಯಾವ ದಾಖಲೆ ನೀಡಲಿದ್ದಾರೆ ಎಂದು ನಟಿ ಸಂಜನಾ ಮತ್ತು ಶಾಸಕ ಜಮೀರ್ ಆತಂಕಗೊಂಡಿದ್ದಾರೆ. ಸಂಬರಗಿಗೆ ಸಿಸಿಬಿ ನೋಟಿಸ್ ವಿಚಾರ ಕೇಳಿ ಸಂಜನಾಗೆ ಟೆನ್ಶನ್ ಮಾಡಿಕೊಂಡು ರಾತ್ರಿಯಿಡೀ ನಿದ್ದೆ ಮಾಡಲಿಲ್ಲ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಸಂಜನಾ ಜೊತೆ ಕೊಲಂಬೋಗೆ ಹೋಗಿದ್ದು ಸಾಬೀತಾದ್ರೆ ನನ್ನ ಆಸ್ತಿಯೆಲ್ಲ ಸರ್ಕಾರಕ್ಕೆ ಬರೆದುಕೊಡ್ತೀನಿ: ಜಮೀರ್
Advertisement
ಸಂಜನಾ ರಾಜಕಾರಣಿ ಜೊತೆ ಶ್ರೀಲಂಕಾ ಕ್ಯಾಸಿನೋಗೆ ಹೋಗಿದ್ದರು ಎಂದು ಸಂಬರಗಿ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಪ್ರಶಾಂತ್ ಸಂಬರಗಿ ಸಿಸಿಬಿ ಮುಂದೆ ಮಹತ್ವದ ದಾಖಲೆಗಳನ್ನು ಒದಗಿಸುವ ಸಾಧ್ಯತೆ ಇದೆ. ಸಿಸಿಬಿ ಪೊಲೀಸರಿಗೆ ಸಂಜನಾಗೆ ಸಂಬಂಧಪಟ್ಟ ಫೋಟೋಗಳು ಹಾಗೂ ವಿಡಿಯೋ ನೀಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮತ್ಯಾವ ಸಾಕ್ಷ್ಯ ಬಿಚ್ಚಿಡುತ್ತಾರೋ ಎಂದು ರಾಗಿಣಿ ಜೊತೆಯೂ ಮಾತನಾಡದೆ ಮೌನವಾಗಿದ್ದರು ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಇತ್ತ ಜಮೀರ್ ವಿರುದ್ಧ ಹಲವು ವಿಚಾರಗಳನ್ನು ಪ್ರಸ್ತಾಪ ಮಾಡಿದ್ದರು. ಹೀಗಾಗಿ ಸಂಬರಗಿ ಹೇಳಿಕೆ ವಿರುದ್ಧ ಎಫ್‍ಐಆರ್ ದಾಖಲು ಮಾಡುವಂತೆ ಜಮೀರ್ ಕೋರ್ಟ್ ಮೊರೆ ಹೋಗಿ ಕೇಳಿಕೊಂಡಿದ್ದರು. ಅದರಂತೆಯೇ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ನಟಿ ಸಂಜನಾ ಅವರ ವಿಚಾರದಲ್ಲಿ ತಮ್ಮ ವಿರುದ್ಧ ಕೇಳಿ ಬಂದ ಆರೋಪಗಳ ಕುರಿತು ಎರಡು ದಿನಗಳ ಹಿಂದೆ ಮಾತನಾಡಿದ್ದ ಜಮೀರ್ ಅವರು, ಸಂಜನಾ ಹಾಗೂ ನಾನು ಕೊಲಂಬೋಗೆ ಹೋಗಿರುವ ಬಗ್ಗೆ ಖುದ್ದು ಸಿಎಂ ತನಿಖೆ ಮಾಡಲಿ ಎಂದು ಮನವಿ ಮಾಡುತ್ತೇನೆ. ನಾನು ತನಿಖೆ ಎದುರಿಸಲು ತಯಾರಿದ್ದೇನೆ ಎಂದಿದ್ದರು.
ನಾನು ಆಕೆ ಒಂದೇ ಹೋಟೆಲ್‍ನಲ್ಲಿ ಉಳಿದುಕೊಂಡಿದ್ದರೆ ಅಲ್ಲಿ ಪಾಸ್‍ಪೋರ್ಟ್ ಕೊಡಬೇಕಾಗುತ್ತೆ. ಅದನ್ನು ಪರಿಶೀಲಿಸಲಿ. ನಾನು ಸಂಜನಾ ಕೊಲಂಬೋಗೆ ಹೋದರೆ ಒಂದೇ ವಿಮಾನದಲ್ಲಿ ತಾನೇ ಹೋಗಬೇಕು. ಆ ಕುರಿತಾದ ಫ್ಲೈಟ್ ಮಾಹಿತಿಗಳನ್ನು ಪರಿಶೀಲನೆ ನಡೆಸಲಿ. ವಿದೇಶಗಳ ಹೋಟೆಲ್‍ಗಳಲ್ಲಿ ಹೋಟೆಲ್ ಸಿಸಿ ಕ್ಯಾಮರಾ ದೃಶ್ಯಗಳನ್ನು 10 ವರ್ಷ ಇಡಬೇಕು. ಅದನ್ನೂ ಚೆಕ್ ಮಾಡಲಿ ಎಂದು ತಿಳಿಸಿದ್ದರು.
ಅಲ್ಲಿರುವ ಸಿಸಿಟಿವಿ ಪರಿಶೀಲನೆ ಮಾಡಿದರೆ ನಾನು ಸಂಜನಾ ಅವರೊಂದಿಗೆ ಉಳಿದುಕೊಂಡಿದ್ದರೆ ಖಂಡಿತ ಗೊತ್ತಾಗುತ್ತೆ. ಈಗ ನಮ್ಮ ಸರ್ಕಾರ ಇಲ್ಲ. ಬಿಜೆಪಿ ಸರ್ಕಾರನೇ ಇರುವುದರಿಂದ ಅವರೇ ಎಲ್ಲವನ್ನೂ ಪರಿಶೀಲನೆ ಮಾಡಲಿ. ಒಂದೊಮ್ಮೆ ನನ್ನ ಮೇಲಿನ ಆರೋಪ ಸಾಬೀತು ಆದರೆ ನನ್ನ ಆಸ್ತಿಯನ್ನು ಸರ್ಕಾರಕ್ಕೆ ಬರೆದುಕೊಡುತ್ತೇನೆ. ಆದರೆ ಆರೋಪ ಸುಳ್ಳಾದರೆ ಪ್ರಶಾಂತ್ ಸಂಬರಗಿ ಏನು ಮಾಡುತ್ತೀರಾ ನೀವೇ ಹೇಳಿ ಎಂದು ಸರ್ಕಾರಕ್ಕೆ ಸವಾಲು ಹಾಕಿದ್ದರು.