ಹಾವೇರಿ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮುಂದಿನ ಸಂಪುಟ ವಿಸ್ತರಣೆ ವೇಳೆ ಅವಕಾಶ ಕಲ್ಪಿಸಿಕೊಡುವ ಭರವಸೆ ನೀಡಿದ್ದಾರೆ. ನಾನು ಅದಕ್ಕೆ ಒಪ್ಪಿಕೊಂಡಿದ್ದೇನೆ. ನಮ್ಮ ಸಮುದಾಯಕ್ಕೆ ಅವಕಾಶ ಸಿಕ್ಕಿಲ್ಲ ಎನ್ನುವ ಬೇಸರ ಉಂಟಾಗಿತ್ತು. ಆಗಿರುವ ಅನ್ಯಾಯವನ್ನು ಸರಿಪಡಿಸುವ ಭರವಸೆ ನೀಡಿದ್ದಾರೆ ಎಂದು ಹಾವೇರಿ ಶಾಸಕ ನೆಹರು ಓಲೇಕಾರ ಹೇಳಿದ್ದಾರೆ.
Advertisement
ಹಾವೇರಿ ನಗರದ ತುಳಸಿ ಐಕಾನ್ ಲೇಔಟ್‍ನಲ್ಲಿರುವ ಶಾಸಕ, ಮನೆಗೆ ಸಚಿವ ಬಿ.ಸಿ.ಪಾಟೀಲ್ ಭೇಟಿ ನೀಡಿ ಮಾತನಾಡಿದರು. ಈ ವೇಳೆ ಸಚಿವ ಸ್ಥಾನ ಸಿಗದ್ದಕ್ಕೆ ಬೊಮ್ಮಾಯಿ ವಿರುದ್ಧ ನೆಹರು ಓಲೇಕಾರ ಅಸಮಾಧಾನ ಹೊರ ಹಾಕಿದ್ದರು.
Advertisement
Advertisement
ಪಾಟೀಲ್, ಬೊಮ್ಮಾಯಿಯವರ ಜೊತೆ ಮಾತನಾಡಿಸಿದ್ದಾರೆ. ನನಗೆ, ನಮ್ಮ ಸಮುದಾಯಕ್ಕೆ ಅನ್ಯಾಯ ಆಗಿರುವುದನ್ನು ಸಿಎಂ ಕೂಡ ಒಪ್ಪಿಕೊಂಡಿದ್ದಾರೆ. ಜಿಲ್ಲೆಗೆ ಸಿಎಂ ಸ್ಥಾನದ ಅವಕಾಶ ಸಿಕ್ಕಿದೆ. ಸಹಕಾರ ನೀಡುವಂತೆ ಕೇಳಿಕೊಂಡಿದ್ದಾರೆ. ಬೊಮ್ಮಾಯಿ ಅವರಿಗೆ ಸಹಕಾರ ನೀಡುತ್ತೇನೆ. ನಾವೆಲ್ಲರೂ ಕೂಡಿಯೇ ಇದ್ದವರು. ಜಿಲ್ಲೆಯ ಅಭಿವೃದ್ಧಿಗೆ ಸಹಕಾರ ನೀಡುತ್ತೇನೆ. ಸಚಿವ ಸ್ಥಾನ ಸಿಗುವವರೆಗೂ ಕಾಯುತ್ತೇನೆ. ನಾವೆಲ್ಲರೂ ಪಕ್ಷದಲ್ಲಿ ಇದ್ದಂಥವರೇ ಹೀಗಾಗಿ ಕಾಯುತ್ತೇನೆ. ಇದು ಅನಿವಾರ್ಯ ಎಂದು ನೆಹರು ಓಲೇಕಾರ ಹೇಳಿದ್ದಾರೆ. ಇದನ್ನೂ ಓದಿ: ಸಿಎಂ ಸ್ಥಾನ ಬಿಟ್ರೂ ಕೊಟ್ಟ ಮಾತನ್ನು ಬಿಎಸ್‍ವೈ ಉಳಿಸಿಕೊಂಡಿದ್ದಾರೆ: ಗೋಪಾಲಯ್ಯ
Advertisement