– ಕಾನೂನಿಗೆ ಗೌರವ ಕೊಡ್ತಾರೆ
ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಬರೋಬ್ಬರಿ ಒಂದು ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಮಾಜಿ ಮೇಯರ್ ಸಂಪತ್ ರಾಜ್ ನನ್ನು ನಿನ್ನೆ ರಾತ್ರಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆದರೆ ಸಂಪತ್ ರಾಜ್ ಓಡಿ ಹೋಗಿರಲಿಲ್ಲ. ಅವರ ಆರೋಗ್ಯ ಸರಿ ಇರಲಿಲ್ಲ ಅಷ್ಟೇ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬ್ಯಾಟ್ ಬೀಸಿದ್ದಾರೆ.
Advertisement
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಕಾನೂನಿಗೆ ಎಲ್ಲರೂ ಗೌರವ ಕೊಡಲೇಬೇಕು. ಕಾನೂನನ್ನು ದುರುಪಯೋಗ ಮಾಡಿಕೊಳ್ಳುವ ಒಂದು ವರ್ಗ ಇದೆ. ಸಂಪತ್ ರಾಜ್ ಕಾನೂನಿಗೆ ಗೌರವ ಕೊಡ್ತಾರೆ. ಕಾಂಗ್ರೆಸ್ಸಿನವರ ಮೇಲೆ ತೊಂದರೆ ಕೊಡಲು ಬಿಜೆಪಿಯವರು ಹೀಗೆ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಇದನ್ನೂ ಓದಿ: ‘ಫೈರ್’ ಸಂಪತ್ ‘ರಾಜ್’ ಬಂಧನವಾಗಿದ್ದೇಗೆ?
Advertisement
Advertisement
ಪೊಲೀಸರು ಏನು ಕ್ರಮ ತಗೆದುಕೊಳ್ತಿದ್ದಾರೆ ಅನ್ನೋದನ್ನ ನೋಡ್ತಿದ್ದೀವಿ. ಸಂಪತ್ ರಾಜ್ ಓಡಿ ಹೋಗಿರಲಿಲ್ಲ. ಅವರ ಆರೋಗ್ಯ ಸರಿ ಇರಲಿಲ್ಲ. ಪೊಲೀಸರು ಯಾವ ಕ್ರಮ ತಗೆದುಕೊಂಡಿದ್ದಾರೆ ಅನ್ನೋದು ಕೂಡ ಗೊತ್ತಿದೆ. ಅಧಿಕಾರದಲ್ಲಿ ಇರುವವರು ಅಧಿಕಾರವನ್ನ ಬಳಸಿಕೊಂಡು ಕಾಂಗ್ರೆಸ್ಸನ್ನು ಟಾರ್ಗೆಟ್ ಮಾಡ್ತಿದ್ದಾರೆ. ಕಾಂಗ್ರೆಸ್ಸಿನ ಎಲ್ಲಾ ನಾಯಕರನ್ನ ಮುಗಿಸಬೇಕು ಅಂತ ಈ ರೀತಿ ಮಾಡಲಾಗುತ್ತಿದೆ ಎಂದು ಡಿಕೆಶಿ ಕಿಡಿಕಾರಿದರು. ಇದನ್ನೂ ಓದಿ: ನನಗಾದ ಅನ್ಯಾಯಕ್ಕೆ ಕೊನೆಗೂ ನ್ಯಾಯ ಸಿಕ್ಕಿದೆ: ಅಖಂಡ
Advertisement
ಒಬ್ಬರ ವೈಯಕ್ತಿಕ ಹೇಳಿಕೆ ಮೇಲೆ ನಾನು ಕ್ರಮ ತೆಗೆದುಕೊಳ್ಳೋಕೆ ಆಗಲ್ಲ. ಅಖಂಡ ಏನೇ ಇದ್ದರೂ ಬಂದು ನನ್ನ ಬಳಿ ಮಾತಾಡಲಿ. ನನ್ನ ಮನೆ ಇದೆ, ಪಕ್ಷದ ಕಚೇರಿ ಇದೆ. ಇಲ್ಲಿ ಬಂದು ಮಾತಾಡಲಿ. ಸಂಪತ್ ರಾಜ್ ಓಡಿ ಹೋಗಿದ್ದಾರೆ ಅಂತ ಹೇಳಿದವರು ಯಾರು…? ಕಾನೂನಿಗಿಂತ ಸಂಪತ್ ರಾಜ್ ಮೇಲಲ್ಲ ಡಿಕೆಶಿಯೂ ಮೇಲಲ್ಲ. ಬಿಜೆಪಿಯವರೇ ಕಾನೂನನ್ನ ದುರುಪಯೋಗ ಮಾಡಿಕೊಳ್ತಿದ್ದಾರೆ ಎಂದು ಗರಂ ಆದರು.