– ಬಹಿರಂಗವಾಗಿಯೇ ಯುವತಿಗೆ ಜೀವ ಬೆದರಿಕೆ
ಬೆಂಗಳೂರು: ನಾವು ಈ ಪ್ರಕರಣ ದಾಖಲಾದ ನಂತರ ನ್ಯಾಯಯುತವಾಗಿ ತೀರ್ಮಾನವಾಗುತ್ತದೆ ಎಂದುಕೊಂಡಿದ್ದೇನೆ. ಆದರೆ ನಿನ್ನೆ ಯುವತಿಗೆ ಜೀವಬೆದರಿಕೆ ಹಾಗೂ ನಿನ್ನೆ ರಮೇಶ್ ಜಾರಕಿಹೊಳಿ ನೀಡಿರುವ ಕೆಲವು ಹೇಳಿಕೆಗಳನ್ನು ಕೇಳುತ್ತಿದ್ದರೆ ನನಗೆ ಈ ಪ್ರಕರಣಕ್ಕೆ ಯಾವುದೇ ರೀತಿಯ ನ್ಯಾಯ ಸಿಗುವುದಿಲ್ಲ ಎಂದು ಅನ್ನಿಸುತ್ತದೆ ಎಂದು ಯುವತಿ ಪರ ವಕೀಲ ಜಗದೀಶ್ ಹೇಳಿದ್ದಾರೆ.
ಪ್ರಕರಣದ ಆರೋಪಿ ಸರ್ಕಾರವನ್ನು ಬೀಳಿಸುತ್ತೇನೆ ಎಂದು ಹೇಳುತ್ತಾ ಪ್ರಕರಣದ ಹಾದಿಯನ್ನು ತಪ್ಪಿಸುತ್ತಿದ್ದಾರೆ. ಪ್ರಬಲವಾದ ವ್ಯಕ್ತಿ ಸಾಕ್ಷಿ ಆಧಾರಗಳನ್ನು ನಾಶ ಮಾಡುತ್ತಿದೆ. ಸಾಮಾನ್ಯ ವ್ಯಕ್ತಿಯ ಮೇಲೆ ಇಂತಹ ಒಂದು ಪ್ರಕರಣ ದಾಖಲಾಗಿದ್ದರೆ ಪೊಲೀಸರು ಆರೋಪಿಯನ್ನು ಬಂಧಿಸದೆ ಇರುತ್ತಿದ್ದರಾ? ಪ್ರಬಲ ವ್ಯಕ್ತಿಗೆ ಒಂದು ನ್ಯಾಯಾ? ಸಾಮಾನ್ಯ ವ್ಯಕ್ತಿಗೆ ಒಂದು ನ್ಯಾಯ ಎಂದು ಇದೆಯಾ? ಬಿಎಸ್‍ವೈ ಸರ್ಕಾರವನ್ನ ವಕೀಲ ಜಗದೀಶ್ ಪ್ರಶ್ನೆ ಮಾಡಿದ್ದಾರೆ.
ಯುವತಿ ಮನೆಯವರ ಜೊತೆ ಮಾತನಾಡುತ್ತಿರುವ ಆಡಿಯೋ ಕ್ಲಿಪ್ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಆರೋಪಿ ಸಾಕ್ಷಿಗಳನ್ನು ನಾಶ ಮಾಡಲು ಹೊರಟಿದ್ದಾರೆ ಎನ್ನುವುದು ಸಾಮಾನ್ಯ ಜನರಿಗೂ ಗೊತ್ತಾಗುತ್ತದೆ. ಬಿಎಸ್‍ವೈ ಸರ್ಕಾರ ಆರೋಪಿಯನ್ನು ಬಂಧಿಸಬೇಕು.
ಭದ್ರತೆ ಒದಗಿಸಬೇಕಾದ್ದು ಕಾನೂನಿನ ಒಂದು ಭಾಗ. ಆದರೆ ಯುವತಿಯ ಕುಟುಂಬಕ್ಕೆ ರಕ್ಷಣೆ ಕೊಡುವ ಕೆಲಸವನ್ನು ಪೊಲೀಸರು ಮಾಡಿಲ್ಲ. ನಾವು ರಾಜಕೀಯವಾಗಿ ಈ ಪ್ರಕರಣವನ್ನು ನೋಡುತ್ತಿಲ್ಲ. ನಾವು ಈ ಪ್ರಕರಣಕ್ಕೆ ನ್ಯಾಯ ಸಿಗಬೇಂದು ಎಂದು ಮಾತ್ರ ಕೇಳುತ್ತಿದ್ದೇವೆ. ಹೀಗಾದರೆ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಬೇಕಾಗಿದೆ.
ಸಂತ್ರಸ್ತೆಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಬೇಕಾದರೆ ನಾವು ಅವರ ಕುಟುಂಬಕ್ಕೆ ನ್ಯಾಯ ಕೊಡಿಸಬೇಕಾಗಿದೆ. ಸಾಕ್ಷಿ ನಾಶ ಮತ್ತು ಪ್ರಕರಣದಿಂದ ಹೊರಗೆ ಬರಬೇಕು ಎಂದು ನೋಡುತ್ತಿದ್ದಾರೆ. ಇದಕ್ಕೆ ಬೇಕಾದ ಒಂದು ಪರಿಪಕ್ವತೆಯನ್ನು ಕೊಡುತ್ತಿಲ್ಲ ಎಂದಿದ್ದಾರೆ. ಸರ್ಕಾರ, ಪೊಲೀಸರು ಆರೋಪಿಯನ್ನ ಬಂಧಿಸಿ, ಕುಟುಂಬಸ್ಥರಿಗೆ ಭದ್ರತೆ ನೀಡದಿದದ್ರೆ ನಾವು ನ್ಯಾಯಾಂಗದ ಮೋರೆ ಹೋಗುತ್ತೇವೆ ಎಂದು ತಿಳಿಸಿದರು.
ನಿನ್ನೆ ಕಬ್ಬನ್ ಪಾರ್ಕ ಪೊಲೀಸ್ ಠಾಣೆಗೆ ಹೋದಾಗ ಅವರ ಯುವತಿ ಕುಟುಂಬಕ್ಕೆ ರಕ್ಷಣೆ ಕೊಡುತ್ತೇವೆ ಎಂದು ಹೇಳಿದ್ದಾರೆ. ಆದರೆ ಹಾಗೆ ಅನ್ನಿಸುತ್ತಿಲ್ಲ. ಪೊಲೀಸರಿಗೆ ನಿರ್ಭತಿಯಿಂದ ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಅನ್ನಿಸುತ್ತಿದೆ.
ಈ ಒಂದು ಕೇಸ್‍ಗಳಲ್ಲಿ ಸಾಕ್ಷವನ್ನು ನಾಶ ಮಾಡದಂತೆ ನೋಡಿಕೊಳ್ಳಬೇಕು. ನಾವು ಪ್ರಕರಣವನ್ನು ದಾಖಲು ಮಾಡಿದಾಗ ಸಾಕ್ಷಿ ನಾಶವಾದರೆ ಪ್ರಕರಣಕ್ಕೆ ನ್ಯಾಯ ಸಿಗುವುದಿಲ್ಲ. ಈ ಪ್ರಕರಣಕ್ಕೆ ಪ್ರಮುಖವಾದ ಸಾಕ್ಷಿ, ಆಧಾರಗಳು ಸತ್ತು ಹೋದರೆ ನ್ಯಾಯ ಎಲ್ಲಿ ಸಿಗುತ್ತದೆ. ಪ್ರಕರಣದ ತೀವ್ರತೆಯನ್ನು ಗಮನಿಸಬೇಕಾಗುತ್ತದೆ. ಮಹಿಳಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಆರೋಪಿ ಎಂದ ಮೇಲೆ ಆರೋಪಿನೆ ಆಗಿರುತ್ತಾನೆ. ಪ್ರಕರಣ ದಾಖಲು ಮಾಡಿದಾಗ ಬಂಧನ ಪ್ರಕ್ರಿಯೆಯನ್ನು ಕಾನೂನಿ ಅಡಿಯಲ್ಲಿ ಇಡಲಾಗಿದೆ. ಇದೆ ಮೊದಲ ಪ್ರಕರಣವಲ್ಲ. ನಿರ್ಭಯ ಗೈಡ್‍ಲೈನ್ಸ್ ಇಟ್ಟ್ಕೊಂಡು ಬೇಕಾದರೂ ನೊಡಬಹುದು.
ಮುಂದಿನ ಖಾನೂನಿನ ಪ್ರಕ್ರಿಯೆಗಳ ಕುರಿತಾಗಿ ನಾವು ಪ್ಲ್ಯಾನ್ ಮಾಡುತ್ತೇವೆ. ಕಾರ್ನಾಟಕ ಸರ್ಕಾರ ಮೊದಲು ಆರೋಪಿಯನ್ನು ಮೊದಲು ಬಂಧಿಸಬೇಕು. ಇಲ್ಲವಾದರೆ ಈ ಪ್ರಕರಣಕ್ಕೆ ಯಾವುದೇ ನ್ಯಾಯ ಸಿಗುವದಿಲ್ಲ. ಆರೋಪಿ ತನ್ನ ರಾಜಿಕೀಯ ಪ್ರಭಾವನನ್ನು ಬಳಸುತ್ತಿದ್ದಾರೆ. ಸಂಸ್ತ್ರಸ್ತೆ ನಮ್ಮನ್ನು ನಂಬಿ ನ್ಯಾಯ ಕೊಡಿಸುವಂತೆ ಹೇಳಿದ್ದಾರೆ ಹೊರತು ಯಾವುದೇ ಪರ್ಸನಲ್ ಕಾಂಟೆಕ್ಟ್ ನಮ್ಮೊಂದಿಗೆ ಇಲ್ಲ.
ಈ ಪ್ರಕರಣದಲ್ಲಿ ಏನು ಮಾಡಬೇಕು ಎನ್ನುವುದು ಪೊಲೀಸರಿಗೆ ಏನೂ ಮಾಡಬೇಕು ಎಂದು ಗೊತ್ತು. ಆದರೆ ಪೊಲೀಸರ ಕೈಗಳನ್ನು ಸರ್ಕಾರ ಕಟ್ಟಿ ಹಾಕಿದೆ. ಸರ್ಕಾರ ಕೆಳಗೆ ಎಸ್‍ಐಟಿ, ಪೊಲೀಸ್ ಬರುತ್ತದೆ. ಈ ಪ್ರಕರಣದ ದಾರಿ ತಪ್ಪಿಸುವ ಕೆಲವಸನ್ನು ಮಾಡುತ್ತಿದೆಯಾ ಎನ್ನುವ ಅನುಮಾನ ಶುರುವಾಗಿದೆ. ರಾತ್ರೋರಾತ್ರಿ ಕೆಲವು ಘಟನೆಗಳು ನಡೆದಿವೆ. ಆರೋಪಿಗೆ ಈ ಪ್ರಕರಣ ಸಂಬಂಧ ಇಲ್ಲೆಂದ ಮೇಲೆ ಆಡಿಯೋ ರಿಲೀಸ್ ಮಾಡಿದ್ದು ಯಾರು, ಪ್ರಕರಣ ದಾಖಲಾಗುತ್ತಿದ್ದಂತೆ ಆಡಿಯೋ ರಿಲೀಸ್ ಆಗುತ್ತದೆ. ಆಕೆಗೆ ಕಾನೂನಿನ ಕುರಿತಾಗಿ ಗೊತ್ತಿಲ್ಲ. ಆಕೆಗೆ ಈ ಪ್ರಕರಣದ ಕುರಿತಾಗಿ ಹೇಗೆ ಎನ್ನುವುದನ್ನು ನಾವು ಸೂಚನೆ ನೀಡುತ್ತವೆ.
ಸಾಕ್ಷಿ ನಾಶ ಮಾಡುತ್ತಿರುವುದನ್ನು ತಡೆ ಒಡ್ಡಬೇಕು. ಸರ್ಕಾರ ಈ ಕುರಿತಾಗಿ ಗಮನ ಹರಿಸಬೇಕು. ಸಂಬಂಧ ಪಟ್ಟ ಇಲಾಖೆಗಳು ಈ ಕುರಿತಾಗಿ ಗಮನ ಹರಿಸಬೇಕು. ನಾವು ನ್ಯಾಯ ಕೇಳುತ್ತಿದ್ದೇವೆ. ಆರೋಪಿ ಅವರ ರಕ್ಷಣೆಗೆ ಎಲ್ಲಾ ರೀತಿಯ ಪ್ರಕ್ರಿಯೆಗಳನ್ನು ಮಾಡುತ್ತಿದ್ದಾರೆ. ಈ ಪ್ರಕರಣ ಕುರಿತಾಗಿ ಹೆಚ್ಚಿನ ಕ್ರಮವನ್ನು ತೆಗೆದುಳ್ಳಬೇಕು.