ಬೆಂಗಳೂರು: ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಹೇಳಿದಂತೆ ರೆಸ್ಟ್ ತೆಗೆದುಕೊಳ್ಳೋಣ ಬಿಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ರೆಸ್ಟ್ ತೆಗೆದುಕೊಳ್ಳಲು ಡಿಕೆಶಿ ಆಸ್ಪತ್ರೆ ಸೇರಿಕೊಳ್ಳಲಿ ಎಂಬ ಸಂತೋಷ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಂತೋಷ್ ಯಾಕೆ ಆತ್ಮಹತ್ಯೆಗೆ ಯತ್ನ ಮಾಡಿಕೊಂಡರು ಎಂದು ಅವರ ಧರ್ಮ ಪತ್ನಿ ಹೇಳಿದ್ದಾರೆ. ತನಿಖೆ ಮಾಡಬೇಕೋ ಬೇಡವೋ ಎಂದು ಪ್ರಶ್ನಿಸಿದರು.
Advertisement
Advertisement
ಪಕ್ಷದ ಆಂತರಿಕ ವಿಚಾರ ಮುಚ್ಚಿಕೊಳ್ಳಲು ಏನು ಬೇಕಾದರೂ ಅವರ ಕೈಯಲ್ಲಿ ಹೇಳಿಸಿಕೊಳ್ಳಲಿ. ಅವರು ಕೇವಲ ಪಿಎ ಅಲ್ಲಾ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ. ಆಯ್ತು ಅವರು ಹೇಳಿದಂತೆ ರೆಸ್ಟ್ ತೆಗೆದುಕೊಳ್ಳೋಣ ಬಿಡಿ ಎಂದು ಡಿಕೆಶಿ ತಿಳಿಸಿದರು. ಇದನ್ನೂ ಓದಿ: ರೆಸ್ಟ್‌ಗಾಗಿ ಆಸ್ಪತ್ರೆ ಸೇರಿಕೊಳ್ಳಲಿ: ಡಿಕೆಶಿಗೆ ಸಂತೋಷ್ ಟಾಂಗ್
Advertisement
Advertisement
ಸಂತೋಷ್ ಹೆಳಿದ್ದೇನು..?
ಡಿಕೆಶಿ ಸೋತಿದಕ್ಕೆ ಈ ರೀತಿಯ ಹೇಳಿಕೆ ಕೊಡ್ತಾ ಇದ್ದಾರೆ. ಇದು ಮೊದಲ ಬಾರಿಗೆ ಈ ಆರೋಪ ಅಲ್ಲ. ತನಿಖಾ ಸಂಸ್ಥೆ ದಾಳಿ ಮಾಡಿದಾಗಲೂ ಇದೇ ರೀತಿ ಆರೋಪ ಮಾಡುತ್ತಾರೆ. ಡಿಕೆಶಿ ಅವರಿಗೆ ರೆಸ್ಟ್ ಕೊಟ್ಟು ಒಂದು ತಿಂಗಳು ಆಸ್ಪತ್ರೆಗೆ ಸೇರಿಕೊಳ್ಳಲಿ ಎಂದು ಸಂತೋಷ್ ವಾಗ್ದಾಳಿ ನಡೆಸಿದರು. ನಿದ್ರೆ ಬರದೆ ಇದ್ದಾಗ ಮಾತ್ರೆ ತೆಗೆದುಕೊಳ್ಳುತ್ತಾ ಇದ್ದೆ. ಈ ಮಾತ್ರೆಯಲ್ಲಿ ಬದಲಾವಣೆ ಆಗಿದ್ದರಿಂದ ಈ ರೀತಿ ಆಗೋಯ್ತು ಎಂದು ಸಂತೋಷ್ ಸ್ಪಷ್ಟಪಡಿಸಿದರು. ಇನ್ನು ಬಿಎಸ್‍ವೈ ಅವರ ಬಗ್ಗೆ ಮಾತನಾಡಬೇಡಿ. ನಾನು ಗಟ್ಟಿಯಾಗಿದ್ದೀನಿ ನನಗೆ ಯಾವುದೇ ತೊಂದರೆ ಆಗಿಲ್ಲ. ನಾನು ಮಾನಸಿಕವಾಗಿ ದೃಢವಾಗಿ ಇದ್ದೀನಿ. ಇನ್ನೆರಡು ದಿನ ಬಿಟ್ಟು ಯಡಿಯೂರಪ್ಪ ಅವರನ್ನು ಭೇಟಿ ಮಾಡ್ತೀನಿ ಎಂದರು. ಇದನ್ನೂ ಓದಿ: ಮಿಸ್ ಆಗಿ ನಿದ್ದೆ ಮಾತ್ರೆ ತೆಗೆದುಕೊಂಡಿದ್ದೆ: ಎನ್.ಆರ್. ಸಂತೋಷ್
ಡಿಕೆಶಿ ಹೇಳಿದ್ದೇನು?:
ಇತ್ತ ಕಾರವಾರದಲ್ಲಿ ಈ ವಿಚಾರವಾಗಿ ಮಾತನಾಡಿದ್ದ ಡಿಕೆಶಿ, ಸಂತೋಷ್‍ರವರು ಯಾವುದೋ ವೀಡಿಯೋ ಮಾಡಿ ಎಂಎಲ್‍ಸಿಗೆ ಮತ್ತು ಮಿನಿಸ್ಟರ್ ಕೈಗೆ ಕೊಟ್ಟಿದ್ದಾರೆ. ಅದನ್ನು ಮಿನಿಸ್ಟರ್ ಮತ್ತು ಎಂಎಲ್‍ಸಿಗೆ ಸೇರಿ ದೆಹಲಿ ನಾಯಕರಿಗೆ ತಲುಪಿಸಿದ್ದಾರೆ ಎನ್ನುವುದು ಮಾಹಿತಿ ಇದೆ. ದೆಹಲಿ ನಾಯಕರಿಗೆ 2-3 ದಿನದ ಹಿಂದೆ ಅವರ ಪರ್ಸನಲ್ ವೀಡಿಯೋ ತೋರಿಸಿದ್ದಾರೆ. ಹೀಗಾಗಿ ಬೇಸರದಿಂದ ಆತ್ಮಹತ್ಯೆಗೆ ಯತ್ನಿಸಿರಬಹುದು. ಈ ಬಗ್ಗೆ ಸರ್ಕಾರ ತನಿಖೆ ಮಾಡಿದರೆ ಅರ್ಥವಿಲ್ಲ. ಇದರಲ್ಲಿ ಗೌಪ್ಯ ವಿಚಾರ ಅಡಗಿದೆ. ಹೀಗಾಗಿ ಬೇರೆ ತನಿಖೆ ಆಗಬೇಕು. ಸತ್ಯಾಂಶ ಏನಿದೆ ಎಂಬುದರ ಬಗ್ಗೆ ತನಿಖೆಯಾಗಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದರು.
ಆಗಿದ್ದೇನು..?
ನಿದ್ದೆ ಮಾತ್ರೆ ಸೇವಿಸಿ ಸಂತೋಷ್ ಶುಕ್ರವಾರ ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಅವರನ್ನು ಎಂಎಸ್ ರಾಮಯ್ಯ ಆಸ್ಪತ್ರೆಯ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಈ ಸಂಬಂಧ ಮಾತನಾಡಿದ್ದ ಸಂತೋಷ್ ಪತ್ನಿ ಜಾಹ್ನವಿ, ರಾಜಕೀಯ ಅಸಮತೋಲನದಿಂದಾಗಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದರು. ಸದ್ಯ ಸಂತೋಷ್ ಆರೋಗ್ಯ ಸುಧಾರಿಸಿದ್ದು, ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದನ್ನೂ ಓದಿ: ಸಂತೋಷ್ ಪರ್ಸನಲ್ ವೀಡಿಯೋ ದೆಹಲಿ ತಲುಪಿರುವ ಮಾಹಿತಿ ಇತ್ತು: ಡಿಕೆಶಿ