ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಕೋವಿಡ್ ಕೇರ್ ಸೆಂಟರ್‍ಗಳು ತುಂಬುತ್ತಿವೆ. ಜನರಲ್ಲಿ ಆತಂಕ ಸಹ ಹೆಚ್ಚುತ್ತಿದೆ. ಮಡಿಕೇರಿ ಜಿಲ್ಲಾಸ್ಪತ್ರೆಯ ಕೋವಿಡ್ ಕೇರ್ ಸೆಂಟರ್ ಸಂತೆಯಂತಾಗಿದ್ದು, ಒಂದು ಬೆಡ್‍ನಲ್ಲಿ 3, 4 ಜನ ಮಲಗುವ ಸ್ಥಿತಿ ಎದುರಾಗಿದೆ.
Advertisement
ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ವಾರ್ಡ್ ಒಂದರ ಕಥೆ ಇದಾಗಿದ್ದು, ಇದು ಒಂದು ಬೆಡ್‍ಗೆ ನಾಲ್ಕು ಸೋಂಕಿತರನ್ನು ಹಾಕಲಾಗಿದೆ. ನಾಲ್ಕು ಸೋಂಕಿತರು ಒಂದೇ ಬೆಡ್‍ನಲ್ಲಿ ಮಲಗೋದು ಹೇಗೆ ಎಂಬುವುದು ಸೋಂಕಿತರ ಪ್ರಶ್ನೆಯಾಗಿದೆ. ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳೋದು ಹೇಗೆ? ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರು ಇದೇ ವಾರ್ಡ್ ನಲ್ಲಿ ಇದ್ದಾರೆ. ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಾದರೆ ನರಕವೇ ಫಿಕ್ಸ್ ಎನ್ನುವಂತಾಗಿದೆ ಎಂದು ಸೋಂಕಿರತರು ವೀಡಿಯೋ ಮೂಲಕ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
Advertisement
Advertisement
ಜಿಲ್ಲೆಯಲ್ಲಿ ಇಂದು 271 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಇದೀಗ ಕೋವಿಡ್ ಅಸ್ಪತ್ರೆಯಲ್ಲೇ ಒಂದು ಬೇಡ್ ನಲ್ಲಿ ಮೂವರಿಂದ ನಾಲ್ಕು ಮಂದಿ ಮಲಗುತ್ತಿದ್ದಾರೆ. ಇನ್ನೂ ಹೆಚ್ಚು ಪ್ರಕರಣಗಳು ಪತ್ತೆಯಾದರೆ ಗತಿ ಏನು ಎಂಬ ಭಯ ಜನರಲ್ಲಿ ಕಾಡುತ್ತಿದೆ. ಸರ್ಕಾರ ಹಾಗೂ ಅರೋಗ್ಯ ಇಲಾಖೆಯ ಆಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.