ಬೆಂಗಳೂರು: ಸಂಡೆ ಲಾಕ್‍ಡೌನ್ ಹಿನ್ನೆಲೆಯಲ್ಲಿ ಇಂದಿನಿಂದಲೇ ಜನರು ತಮ್ಮ ತಮ್ಮ ಸ್ವ ಗ್ರಾಮಗಳತ್ತ ಹೋಗುತ್ತಿದ್ದಾರೆ.
ಇಂದು ರಾತ್ರಿ 9 ಗಂಟೆಯಿಂದ ಸಂಡೆ ಲಾಕ್‍ಡೌನ್ ಜಾರಿಯಾಗಲಿದೆ. ಹೀಗಾಗಿ ಬೆಂಗಳೂರಿಗರು ತುಮಕೂರು ರಸ್ತೆ ನವಯುಗ ಟೋಲ್ ಮುಖಾಂತರ ಜನರು ತಮ್ಮ ತಮ್ಮ ಗ್ರಾಮಗಳತ್ತ ಪ್ರಯಾಣ ಮಾಡುತ್ತಿದ್ದಾರೆ. ಹೀಗಾಗಿ ನವಯುಗ ಟೋಲ್ ಬಳಿ ವಾಹನ ದಟ್ಟಣೆ ಹೆಚ್ಚಾಗಿದೆ.
Advertisement
Advertisement
ಕಳೆದ ಲಾಕ್‍ಡೌನ್ ವೇಳೆಯಲ್ಲೂ ಬೆಂಗಳೂರು ಬಿಟ್ಟು ಸಾವಿರಾರು ಜನರು ಹೋಗುತ್ತಿದ್ದರು. ಇಂದು ಕೂಡ ಕಾರು, ಬೈಕ್‍ಗಳ ಮೂಲಕ ಊರಿಗೆ ಹೋಗುತ್ತಿದ್ದಾರೆ. ಕೆಲವರು ಮನೆಯಲ್ಲಿರುವ ಪೀಠೋಪಕರಣಗಳ ಜೊತೆಗೆ ಬೆಂಗಳೂರು ಬಿಟ್ಟು ಹೋಗುತ್ತಿದ್ದಾರೆ. ಇದರಿಂದ ಟೋಲ್ ಬಳಿ ಟ್ರಾಫಿಕ್ ಉಂಟಾಗುತ್ತಿದೆ.
Advertisement
Advertisement
ಒಂದು ವಾರದ ಲಾಕ್‍ಡೌನ್ ಬಳಿಕ ಪ್ರತಿ ಭಾನುವಾರ ಲಾಕ್‍ಡೌನ್ ಮಾಡುವಂತೆ ಸರ್ಕಾರ ಸೂಚಿಸಿತ್ತು. ಹೀಗಾಗಿ ಸರ್ಕಾರದ ಮಾರ್ಗಸೂಚಿಯಂತೆ ಸಂಡೆ ಲಾಕ್‍ಡೌನ್‍ಗೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಆದ್ದರಿಂದ ಇಂದು ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ ಮುಂಜಾನೆ 5 ಗಂಟೆಯ ತನಕ ನಗರದ ಎಲ್ಲಾ ಪ್ರಮುಖ ರಸ್ತೆಗಳು ಬಂದ್ ಆಗಲಿವೆ.