ಬೆಂಗಳೂರು: ರಾಜ್ಯಾದ್ಯಲ್ಲಿಂದು ಸಂಡೇ ಲಾಕ್‍ಡೌನ್ ಜಾರಿಯಾಗಿದೆ. ಆದರೂ ನಗರದಲ್ಲಿ ಅನೇಕ ಕಡೆ ಜನರು ಲಾಕ್‍ಡೌನ್‍ಗೂ ಕೇರ್ ಮಾಡದೆ ಓಡಾಡುತ್ತಿದ್ದಾರೆ.
ಭಾನುವಾರದ ಲಾಕ್‍ಡೌನ್ ಇದ್ದರು ಬಳ್ಳಾರಿ ರಸ್ತೆ, ಏರ್ ಪೋರ್ಟ್ ರಸ್ತೆಯಲ್ಲಿ ವಾಹನಗಳ ಸಂಚಾರ ಇದೆ. ಎಂದಿನಂತೆ ಹೆಚ್ಚು ವಾಹನಗಳ ಸಂಚಾರ ಇಲ್ಲದೆ ಹೋದರೂ ವಿರಳವಾದ ವಾಹನಗಳ ಸಂಚಾರ ಇದೆ. ಅಲ್ಲದೇ ಬಳ್ಳಾರಿ ರಸ್ತೆಯ ಮಿನಿ ಫ್ಲೈ ಓವರ್ ಕ್ಲೋಸ್ ಮಾಡಲಾಗಿದ್ದು, ಸರ್ವಿಸ್ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಇದೆ. ಜೊತೆಗೆ ಹೊಟೇಲ್‍ಗಳು ಪ್ರಾರಂಬವಾಗಿದ್ದು, ಹೂವು, ತರಕಾರಿ ಅಂಗಡಿಗಳು ಓಪನ್ ಆಗಿವೆ.
Advertisement
Advertisement
ಇತ್ತ ಆನೇಕಲ್ ಮಾರುಕಟ್ಟೆಯಲ್ಲಿ ಅಪಾರ ಜನರು ಸೇರಿದ್ದಾರೆ. ಕೊರೊನಾ ಅರಿವೇ ಇಲ್ಲದೆ ಜನರು ಭರ್ಜರಿಯಾಗಿ ವ್ಯಾಪಾರ ಮಾಡುತ್ತಿದ್ದಾರೆ. ಸಾಮಾಜಿಕ ಅಂತರ ಇಲ್ಲದೆ, ಮಾಸ್ಕ್ ಕೂಡ ಧರಿಸದೇ ಜನರು ವ್ಯಾಪಾರ ಮಾಡುತ್ತಿದ್ದಾರೆ. ಕೆ.ಆರ್ ಮಾರ್ಕೆಟ್ ಸಂಪೂರ್ಣ ಬಂದ್ ಆಗಿದೆ. ಆದರೆ ಮೈಸೂರು ರಸ್ತೆ ಫ್ಲೈ ಓವರ್ ಕೆಳ ಭಾಗದಲ್ಲಿ ಮಿನಿ ಮಾರ್ಕೆಟ್ ಶುರುವಾಗಿದ್ದು, ವ್ಯಾಪಾರಿಗಳು, ಗ್ರಾಹಕರ ಖರೀದಿ ಮಾಡುವುದಲ್ಲಿ ಬ್ಯುಸಿಯಾಗಿದ್ದಾರೆ.
Advertisement
Advertisement
ಸಂಡೇ ಲಾಕ್‍ಡೌನ್ ಹಿನ್ನೆಲೆಯಲ್ಲಿ ಪಾರ್ಕ್ ಕ್ಲೋಸ್ ಮಾಡಿದ್ದು, ವಾಕಿಂಗ್‍ಗೆ ಅವಕಾಶ ಇಲ್ಲ. ಹೀಗಾಗಿ ಜನರು ಖಾಲಿ ಮೈದಾನಗಳಲ್ಲಿ ಓಡಾಡುತ್ತಿದ್ದಾರೆ. ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಅಪಾರ ಜನರು ವಾಕಿಂಗ್ ಮತ್ತು ಡಾಗ್ ಕರೆದುಕೊಂಡು ವಾಕ್ ಮಾಡುತ್ತಿದ್ದಾರೆ. ಮತ್ತೆ ಕೆಲವರು ಕಾಲ ಕಳೆಯಲು ಓಡಾಡುತ್ತಿದ್ದಾರೆ. ಇತ್ತ ಕ್ಲೋಸ್ ಆಗಿರುವ ಬಳ್ಳಾರಿ ರಸ್ತೆಯ ಫ್ಲೈ ಓವರ್ ಮೇಲೆ ಜನರು ವಾಕಿಂಗ್ ಮಾಡುತ್ತಿದ್ದಾರೆ. ವ್ಯಾಯಾಮ, ಶ್ವಾನಗಳನ್ನ ಹಿಡಿದು ವಾಕಿಂಗ್ ಮಾಡುತ್ತಿದ್ದಾರೆ. ಈ ಮೂಲಕ ಬಳ್ಳಾರಿ ರಸ್ತೆಯ ಫ್ಲೈ ಓವರ್ ಅನ್ನೇ ಜನರು ವಾಕಿಂಗ್ ಸ್ಥಳ ಮಾಡಿಕೊಂಡಿದ್ದಾರೆ.
ಎಂದಿನಂತೆ ಯಲಹಂಕ ಮಾರುಕಟ್ಟೆಯಲ್ಲಿ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದೆ. ಯಲಹಂಕ ಮಾರುಕಟ್ಟೆ ಬ್ಯಾಟರಾಯನಪುರಕ್ಕೆ ಶಿಫ್ಟ್ ಆಗಿದ್ದು, ಕೊರೊನಾ ಅರಿವೇ ಇಲ್ಲದೆ ಜನರು ವ್ಯಾಪಾರ ಮಾಡುತ್ತಿದ್ದಾರೆ. ಭಾನುವಾರ ಸಂತೆ ಓಪನ್ ಇಲ್ಲದೆ ಇದ್ದರು ಹೊರಗಡೆಯೇ ವ್ಯಾಪಾರ ಮಾಡಲಾಗುತ್ತಿದೆ. ರಸ್ತೆಯ ಮಧ್ಯೆ ವ್ಯಾಪಾರ ಮಾಡುತ್ತಿರುವುದರಿಂದ ವಾಹನಗಳ ಓಡಾಟಕ್ಕೂ ಕೂಡ ತೊಂದರೆಯಾಗುತ್ತಿದೆ.