ಚಂಡೀಗಢ: ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ಕೆರಳಿರುವ ಹಿನ್ನೆಲೆ ಹರಿಯಾಣ ಸರ್ಕಾರ 5 ಜಿಲ್ಲೆಗಳ ಇಂಟರ್ ನೆಟ್ ಸೇವೆಗಳನ್ನು ಕಡಿತಗೊಳಿಸಿರುವ ಆದೇಶವನ್ನು ಇಂದು 5 ಗಂಟೆವರೆಗೆ ಮುಂದುಡಿದೆ.
ಈ ಹಿಂದೆ ಫಬ್ರವರಿ 2 ರವರೆಗೆ 7 ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ ನೆಟ್‍ನ್ನು ಹರಿಯಾಣ ಸರ್ಕಾರ ಸ್ಥಗಿತಗೊಳಿಸಿತ್ತು. ಇದೀಗ ಮತ್ತೆ ಮುಂದೂಡಿರುವ ಸರ್ಕಾರ ಹರಿಯಾಣದ ಕೈಥಲ್, ಜಿಂದ್, ರೋಹ್ಟಕ್, ಸೋನಿಪತ್ ಮತ್ತು ಝಜ್ಜರ್ ಜಿಲ್ಲೆಗಳಲ್ಲಿ ದೂರವಾಣಿ ಕರೆಯನ್ನು ಹೊರತುಪಡಿಸಿದಂತೆ ಇಂಟರ್ ನೆಟ್, ಒಂದೇ ಬಾರಿ ಅನೇಕ ಜನರಿಗೆ ಎಸ್‍ಎಂಎಸ್ ಮತ್ತು ಡೋಂಗಲ್ ಸೇವೆಗಳಿಗೆ ಇಂದು 5 ಗಂಟೆಯವರೆಗೆ ಸರ್ಕಾರ ನಿರ್ಬಂಧ ವಿಧಿಸಿದೆ.
ಜನವರಿ 26ರಂದು ದೆಹಲಿಯಲ್ಲಿ ನಡೆದ ಟ್ರ್ಯಾಕ್ಟರ್ ಜಾಥಾ ಹಿಂಸಾತ್ಮಕ ರೂಪಕ್ಕೆ ತಿರುಗಿತ್ತು. ದೆಹಲಿ ಗಡಿ ಭಾಗದಲ್ಲಿ ಪ್ರತಿಭಟನಾಕಾರರು ಮತ್ತು ಸ್ಥಳೀಯರ ನಡುವೆ ಕಲ್ಲು ತೂರಾಟ ನಡೆದು ಘರ್ಷಣೆ ನಡೆದಿದ್ದು.