ಈಗ ಎಲ್ಲಿ ನೋಡಿದ್ರೂ ಮಳೆ, ಮೋಡ ಮುಸುಕಿದ ವಾತಾವರಣ. ಸಂಜೆಯಾದ ಕೂಡಲೇ ಬಿಸಿ ಬಿಸಿ ಕಾಫೀ ಬೇಡುವ ಮನಸ್ಸು ಜೊತೆಗೆ ಸ್ನಾಕ್ಸ್ ಸಹ ಕೇಳುತ್ತೆ. ಏನಾದ್ರೂ ಹೋಟೆಲಿನಿಂದ ತರೋಣ ಅಂದ್ರೆ ಮಳೆಯ ಕಾಟದ ಕೊರೊನಾ ಭಯ. ಹಾಗಾಗಿ ಮನೆಯಲ್ಲಿ ನಾಲಿಗೆ ಹಿತ ನೀಡುವ ಅಕ್ಕಿ ಹಿಟ್ಟಿನ ಆಂಬೋಡೆ ಮಾಡಿಕೊಂಡು ತಿನ್ನಿ.
ಬೇಕಾಗುವ ಸಾಮಾಗ್ರಿಗಳು
ಅಕ್ಕಿ ಹಿಟ್ಟು- 1 ಕಪ್
ಮೈದಾಹಿಟ್ಟು- 2 ಟೀ ಸ್ಪೂನ್
ಗಟ್ಟಿ ಮೊಸರು- ಮುಕ್ಕಾಲು ಕಪ್
ಕರಿಬೇವು- ಎರಡರಿಂದ ಮೂರು ಎಲೆ
ಜೀರಿಗೆ- 1/2 ಟೀ ಸ್ಪೂನ್
ಒಣ ಮೆಣಸಿನಕಾಯಿ- 1
ಅಡುಗೆ ಸೋಡಾ- 1/2 ಟೀ ಸ್ಪೂನ್
ಎಣ್ಣೆ- ಕರಿಯಲು
ಉಪ್ಪು- ರುಚಿಗೆ ತಕ್ಕಷ್ಟು
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ಮಿಕ್ಸಿಂಗ್ ಬೌಲ್ ಗೆ ಅಕ್ಕಿ ಹಿಟ್ಟು, ಮೈದಾ ಹಿಟ್ಟು, ಗಟ್ಟಿ ಮೊಸರು ಹಾಕಿಕೊಳ್ಳಬೇಕು.
* ತದನಂತರ ಇದೇ ಬೌಲ್ ಗೆ ಸಣ್ಣದಾಗಿ ಕತ್ತರಿಸಿದ ಒಣ ಮೆಣಸಿನಕಾಯಿ, ಕರಿಬೇವು ಹಾಕಿ. ಬಳಿಕ ಜೀರಿಗೆ, ಅಡುಗೆ ಸೋಡಾ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಮೊಸರು ಹಾಕಿದ್ದರಿಂದ ಸ್ವಲ್ಪ ಪ್ರಮಾಣದಲ್ಲಿ ಹಾಕಿ ಮಿಶ್ರಣವನ್ನು ಬಜ್ಜಿ ಹಿಟ್ಟಿನ ಹದಕ್ಕೆ ಬರೋವರೆಗೆ ಮಿಕ್ಸ್ ಮಾಡಿ.
* ಒಂದು ಪ್ಯಾನ್ ನಲ್ಲಿ ಕರಿಯಲು ಬೇಕಾಗುವಷ್ಟು ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ. ಎಣ್ಣೆ ಬಿಸಿಯಾದ ನಂತ್ರ ಈಗಾಗಲೇ ರೆಡಿ ಮಾಡಿಕೊಂಡಿರುವ ಮಿಶ್ರಣದಿಂದ ಒಂದೊಂದೆ ಚಿಕ್ಕ ಉಂಡೆಗಳನ್ನಾಗಿ ಮಾಡಿ ಪ್ಯಾನ್ ಗೆ ಹಾಕಿ.
* ಆಂಬೊಡೆಯನ್ನ ಆಗಾಗ್ಗೆ ಪ್ಲಿಪ್ ಮಾಡ್ತಿರಬೇಕು. ಗೋಲ್ಡನ್ ಕಲರ್ ಬರೋವರೆಗೆ ಫ್ರೈ ಮಾಡಿ ತೆಗೆದ್ರೆ ಕ್ರಿಸ್ಪಿಯಾದ ಆಂಬೋಡೆ ರೆಡಿ.
Advertisement