ಬೆಂಗಳೂರು: ಸಿನಿ ವಿತರಕ ಪ್ರಶಾಂತ್ ಸಂಬರಗಿ ವಿರುದ್ಧ ಜಮೀರ್ ಅಹಮದ್ ನೀಡಿದ ದೂರಿನ ಅನ್ವಯ ಎಫ್‌ಐಆರ್ ದಾಖಲಾಗಿದೆ.
ಸಂಬರಗಿ ಆರೋಪದ ಹಿನ್ನೆಲೆಯಲ್ಲಿ ಜಮೀರ್ ಅಹಮದ್ ಬೆಂಗಳೂರಿನ 24ನೇ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ನೀಡಿದ್ದರು.
Advertisement
ಪ್ರಶಾಂತ್ ಸಂಬರಗಿ ಎಂಬಾತನ ಸುಳ್ಳು ಆರೋಪಗಳ ಬಗ್ಗೆ ಬೆಂಗಳೂರಿನ 24ನೇ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದೇನೆ. ದೂರಿನಂತೆ ಐಪಿಸಿ ಸೆಕ್ಷನ್ 120(B), 504, 463, 465, 506 ಸೆಕ್ಷನ್ ಗಳ ಅಡಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ತನಿಖೆಗೆ ಚಾಮರಾಜಪೇಟೆ ಠಾಣೆಯ ಪೊಲೀಸರಿಗೆ ನ್ಯಾಯಾಲಯ ಆದೇಶ ನೀಡಿದೆ.2/6
— B Z Zameer Ahmed Khan (@BZZameerAhmedK) September 11, 2020
Advertisement
ಈ ದೂರಿನಂತೆ ಐಪಿಸಿ ಸೆಕ್ಷನ್ 120 ಬಿ(ಕ್ರಿಮಿನಲ್ ಪಿತೂರಿ), 504 (ಉದ್ದೇಶಪೂರ್ವಕ ತೇಜೋವಧೆ), 463 (ಫೋರ್ಜರಿ) , 465 (ಫೋರ್ಜರಿ ಬಗ್ಗೆ ಶಿಕ್ಷೆಯ ಪ್ರಮಾಣ) 506 (ಬೆದರಿಕೆ ಒಡ್ಡುವುದು) ಅಡಿಯಲ್ಲಿ ಚಾಮರಾಜಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
ಜೂನ್ 08, 2019 ರಂದು ನಾನು ಸಂಜನಾ ಅವರ ಜೊತೆ ಶ್ರೀಲಂಕಾಕ್ಕೆ ಹೋಗಿದ್ದೆ ಎಂದು ಆರೋಪಿಸಲಾಗಿದೆ. ಹಾಗಿದ್ದಲ್ಲಿ ವಿಮಾನ ಪ್ರಯಾಣದ ಟಿಕೆಟ್ ಗಳಿರಬೇಕಲ್ಲಾ? ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದರೆ ಅಲ್ಲಿಯೂ ದಾಖಲೆಗಳಿಬೇಕಲ್ಲಾ? ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ನನ್ನ ಓಡಾಟದ ಚಿತ್ರಗಳೂ ಇರಬೇಕಲ್ವಾ? ಈ ಬಗ್ಗೆಯೂ ತನಿಖೆ ನಡೆಯಲಿ. 3/6
— B Z Zameer Ahmed Khan (@BZZameerAhmedK) September 11, 2020
Advertisement
2019ರ ಜುಲೈ 8 ರಂದು ಶ್ರೀಲಂಕಾದ ಕೊಲಂಬೋದಲ್ಲಿ ಸಂಜನಾ ಮತ್ತು ಜಮೀರ್ ಇದ್ದರು. ನಾನು ಸುಳ್ಳು ಹೇಳುತ್ತಿಲ್ಲ. ನೀವು ಜೂಜು ಮತ್ತು ಡ್ರಗ್ಸ್ ನಲ್ಲಿ ಭಾಗಿಯಾಗದೇ ಇದ್ದರೆ ನಿಮಗೆ ಹೆದರಿಕೆ ಯಾಕೆ ಎಂದು ಪ್ರಶಾಂತ್ ಸಂಬರಗಿ ಪ್ರಶ್ನಿಸಿದ್ದರು. ಇದರ ಬೆನ್ನಲ್ಲೇ ಸಂಬರಗಿ ಆರೋಪಕ್ಕೆ ತಿರುಗೇಟು ನೀಡಿದ್ದ ನಟಿ ಸಂಜನಾ, ಶಾಸಕ ಜಮೀರ್ ಅವರೇ ಪ್ರಶಾಂತ್ ಸಂಬರಗಿ ಅವರನ್ನು ಸುಮ್ಮನೇ ಬಿಡಬೇಡಿ ಎಂದು ಕಣ್ಣೀರು ಹಾಕಿಕೊಂಡು ಮನವಿ ಮಾಡಿಕೊಂಡಿದ್ದರು. ಇದನ್ನೂ ಓದಿ: ನನ್ನ ವಿರುದ್ಧ ತನಿಖೆ ನಡೆಸಿ – ರಾಜ್ಯ ಸರ್ಕಾರಕ್ಕೆ ಜಮೀರ್ ಸವಾಲ್
ಡ್ರಗ್ಸ್ ಮಾಫಿಯಾದಲ್ಲಿ ಸಿಸಿಬಿ ಪೊಲೀಸರು ಬಂಧಿಸಿರುವ ನಟಿ ಸಂಜನಾ ಅವರೊಂದಿಗೆ ನಾನು ಕೊಲಂಬೋಗೆ ಹೋಗಿದ್ದು ಸಾಬೀತಾದರೆ ನನ್ನ ಆಸ್ತಿಯೆಲ್ಲ ಸರ್ಕಾರಕ್ಕೆ ಬರೆದುಕೊಡುತ್ತೇನೆ ಎಂದು ಜಮೀರ್ ಹೇಳಿದ್ದಾರೆ.
ನಾನು ಆಕೆ ಒಂದೇ ಹೋಟೆಲ್ ನಲ್ಲಿ ಉಳಿದುಕೊಂಡಿದ್ದರೆ ಅಲ್ಲಿ ಪಾಸ್‍ಪೋರ್ಟ್ ಕೊಡಬೇಕಾಗುತ್ತೆ. ಅದನ್ನು ಪರಿಶೀಲಿಸಲಿ. ನಾನು ಸಂಜನಾ ಕೊಲಂಬೋಗೆ ಹೋದರೆ ಒಂದೇ ವಿಮಾನದಲ್ಲಿ ತಾನೇ ಹೋಗಬೇಕು. ಆ ಕುರಿತಾದ ಫ್ಲೈಟ್ ಮಾಹಿತಿಗಳನ್ನು ಪರಿಶೀಲನೆ ನಡೆಸಲಿ. ವಿದೇಶಗಳ ಹೋಟೆಲ್‍ಗಳಲ್ಲಿ ಹೋಟೆಲ್ ಸಿಸಿ ಕ್ಯಾಮರಾ ದೃಶ್ಯಗಳನ್ನು 10 ವರ್ಷ ಇಡಬೇಕು. ಅದನ್ನೂ ಚೆಕ್ ಮಾಡಲಿ ಎಂದು ತಿಳಿಸಿದರು.