ಮುಂಬೈ: ಟೀಂ ಇಂಡಿಯಾದ ವೇಗಿ ಜಸ್ಪ್ರೀತ್ ಬುಮ್ರಾ ಮದುವೆಯಾಗಿ ಇಂದಿಗೆ ಒಂದು ತಿಂಗಳಾಗಿದೆ. ಬುಮ್ರಾ ಮದುವೆಯಾಗಿ ಒಂದು ತಿಂಗಳಾಗುತ್ತಿದ್ದಂತೆ ಹೆಂಡತಿ ಸಂಜನಾ ಗಣೇಶನ್ ಅವರಿಗೆ ಮೊದಲ ತಿಂಗಳ ಶುಭಕೋರಿದ್ದಾರೆ.
ಮೇ 15 ರಂದು ಬುಮ್ರಾ ಕ್ರಿಕೆಟ್ ನಿರೂಪಕಿಯಾಗಿರುವ ಸಂಜನಾ ಗಣೇಶನ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇಂದಿಗೆ ಮದುವೆಯಾಗಿ ಒಂದು ತಿಂಗಳಾಗಿದೆ. ಇದೀಗ ಐಪಿಎಲ್‍ನಲ್ಲಿ ಬ್ಯುಸಿಯಾಗಿರುವ ಬುಮ್ರಾ ಸಾಮಾಜಿಕ ಜಾಲತಾಣದಲ್ಲಿ, ಹಲವು ದಿನಗಳ ಪ್ರೀತಿ, ಆ ನಗು, ಹಾಸ್ಯ, ಸಂಭಾಷಣೆಯೊಂದಿಗೆ ಕಳೆದ ದಿನಗಳು. ಇಂದಿಗೆ ನನ್ನ ಆತ್ಮೀಯ ಸ್ನೇಹಿತೆಯೊಂದಿಗೆ ಮದುವೆಯಾಗಿ ಒಂದು ತಿಂಗಳು ಕಳೆದಿದೆ ಎಂದು ಬರೆದುಕೊಂಡು ಇಬ್ಬರು ಜೊತೆಗಿರುವ ಫೋಟೋ ಒಂದನ್ನು ಹಾಕಿಕೊಂಡಿದ್ದಾರೆ.
One month of love, belly laughs, silly jokes, long conversations and peace. One month of being married to my best friend.❤ pic.twitter.com/yraFiVTciM
— Jasprit Bumrah (@Jaspritbumrah93) April 15, 2021
ಬುಮ್ರಾ ಮತ್ತು ಸಂಜನಾ ಗಣೇಶನ್ ಅವರು ಗೋವಾದಲ್ಲಿ ಮದುವೆಯಾಗಿದ್ದರು. ಬಳಿಕ ಬುಮ್ರಾ ಇನ್‍ಸ್ಟಾಗ್ರಾಂನಲ್ಲಿ ಮದುವೆ ಫೋಟೋ ಶೇರ್ ಮಾಡಿಕೊಂಡ ನಂತರ ಎಲ್ಲರಿಗೂ ಇವರಿಬ್ಬರು ಮದುವೆಯಾಗಿರುವ ವಿಷಯ ತಿಳಿದಿತ್ತು.
ಇದೀಗ ಬುಮ್ರಾ 14ನೇ ಅವೃತ್ತಿಯ ಐಪಿಎಲ್‍ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡುತ್ತಿದ್ದು ಉತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದಾರೆ.