ಶಿವಮೊಗ್ಗ: ಜಾತಿ-ಜಾತಿಗಳ ಮೂಲಕ ಸಮಾಜ ವಿಘಟನೆಯಾಗಿದ್ದು ಇದನ್ನು ಬಿಟ್ಟು ಪ್ರತಿಯೊಬ್ಬರು ಸಂಘಟನೆಯ ಮೂಲಕ ದೇಶವನ್ನು ಒಂದು ಕೂಡಿಸುವ ಕೆಲಸ ಆಗಬೇಕು ಎಂದು ಬೆಕ್ಕಿನ ಕಲ್ಮಠದ ಡಾ||ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಇತ್ತೀಚೆಗೆ ನಡೆದ ಪ್ರಾಂತ ಬೈಠಕ್ ಗೆ ಚಾಲನೆ ಕೊಟ್ಟು ಮಾತನಾಡಿದ ಅವರು, ಸಂಘಟನೆಯಲ್ಲಿ ಬಲವಿದೆ ಎಂಬುದು ನಿರಂತರವಾಗಿ ಸಾಬೀತಾಗುತ್ತಿದೆ. ಇದರಿಂದ ಪ್ರತಿಯೊಬ್ಬರು ಸಂಘಟನೆಯ ಅಡಿಯಲ್ಲಿ ಬಂದಾಗ ಸದೃಢ ಸಮಾಜ ನಿರ್ಮಾಣವಾಗುತ್ತದೆ ಎಂದರು.
ಬೈಠಕ್ ನಲ್ಲಿ ಕಳೆದ 6 ತಿಂಗಳಲ್ಲಿ ಮಾಡಿದ ಸೇವಾ ವರದಿಯನ್ನು ಪಡೆಯಲಾಯಿತು ಮತ್ತು ಮುಂದಿನ ಕಾರ್ಯ ಯೋಚನೆ ಮಾಡಲಾಯಿತು. ವಿಶ್ವ ಹಿಂದೂ ಪರಿಷದ್ ಕೇಂದ್ರೀಯ ಸಮಿತಿಯ ಅನುಮತಿಯನ್ನು ಪಡೆದು ಲಾಂಛನ (ಲೋಗೋ)ವನ್ನು ಬಳಸಬೇಕೆಂದು ನಿರ್ಣಯಿಸಲಾಯಿತು.
ವಿಶ್ವ ಹಿಂದೂ ಪರಿಷತ್ ದಕ್ಷಿಣ ಪ್ರಾಂತ ಬೈಠಕ್ ನಲ್ಲಿ ಅಖಿಲ ಭಾರತೀಯ ಸಹ ಪ್ರಧಾನ ಕಾರ್ಯದರ್ಶಿ ಸ್ಥಾನು ಮಾಲಯನ್, ಬೆಂಗಳೂರು ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಕೇಶವ್ ಹೆಗಡೆ ಜಿ ,ದಕ್ಷಿಣ ಪ್ರಾಂತ ಸಂಘಟನಾ ಕಾರ್ಯದರ್ಶಿ ಬಸವರಾಜ್, ಸರ್ಜಿ ಕಲ್ಯಾಣ ಮಂಟಪದ ಮಾಲೀಕರು ಪುಷ್ಪ ರಮೇಶ್, ದಕ್ಷಿಣ ಪ್ರಾಂತ ಕಾರ್ಯಾಧ್ಯಕ್ಷ ಎಂ ಬಿ ಪುರಾಣಿಕ, ಪ್ರಾಂತ ಕಾರ್ಯದರ್ಶಿ ಜಗನ್ನಾಥ್ ಶಾಸ್ತ್ರಿ ಪ್ರಾಂತ ಉಪಾಧ್ಯಕ್ಷರಾದ ಕುಸುಮನರಾಯಣಾಚಾರ್, ರಾಮಪ್ಪ ಜಿ, ಟಿ.ಎ. ಪಿ. ಶೆಣೈ ಜಿ, ಶಿವಮೊಗ್ಗ ಜಿಲ್ಲಾ ಅಧ್ಯಕ್ಷ ವಾಸುದೇವ್, ಪ್ರಾಂತ ಸಹ ಕೋಶಾಧ್ಯಕ್ಷರು ದೀಪಕ್ ರಾಜ ಗೋಪಾಲ್ ಮತ್ತು ಕಾರ್ಯಕರ್ತರು ಇದ್ದರು.