ಸೌರಮಂಡಲದ ಅಧಿಪತಿ ಸೂರ್ಯ ಮಕರ ರಾಶಿಗೆ ಪ್ರವೇಶಿಸುವ ಕಾಲ ಮಕರ ಸಂಕ್ರಾಂತಿ. ಸಂಕ್ರಾಂತಿ ಎಂದೊಡನೆ ದಕ್ಷಿಣ ಭಾರತದ ಮನೆಮನೆಯಲ್ಲಿ ಎಳ್ಳು ಬೆಲ್ಲದ್ದೆ ದರ್ಬಾರು. ವರ್ಷದ ಆರಂಭದಲ್ಲಿ ಬರುವ ಮೊದಲ ಹಬ್ಬ ಸಂಕ್ರಾಂತಿಯಾಗಿದ್ದು, ಈ ವಿಶೇಷ ದಿನದಂದು ಜನ ಎಳ್ಳು ಬೆಲ್ಲ ತಿಂದು ಬಾಹಿ ಸಿಹಿ ಮಾಡಿಕೊಳ್ಳುತ್ತಾರೆ. ಅಲ್ಲದೆ ಚಳಿಗಾಲದಲ್ಲಿ ಎಳ್ಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಕೂಡ ಇದು ದೇಹದ ಉಷ್ಣಾಂಶವನ್ನು ಹೆಚ್ಚಿಸುತ್ತದೆ.
Advertisement
ಈ ಬಾರಿ ಸಂಕ್ರಾಂತಿ ದಿನದಂದು ಮನೆಯಲ್ಲೇ ತಕ್ಷಣಕ್ಕೆ ಸುಲಭ ಮತ್ತು ಸರಳವಾಗಿ ಮನೆಯಲ್ಲಿಯೇ ಎಳ್ಳು ಚಿಕ್ಕಿ ಮಾಡಿ ಸವಿಯಿರಿ. ಇದು ಮುಖ್ಯವಾಗಿ ಚಿಕ್ಕ ಮಕ್ಕಳಿಗೆ ಮತ್ತು ದೊಡ್ಡವರಿಗೆ ಬಹಳ ಇಷ್ಟವಾದ ತಿನಿಸಾಗಿದೆ.
Advertisement
ಎಳ್ಳು ಚಕ್ಕಿ ಮಾಡಲು ಬೇಕಾಗುವ ಸಾಮಾಗ್ರಿಗಳು :
Advertisement
* ಬಿಳಿ ಎಳ್ಳು – ಒಂದು ಕಪ್
* ಬೆಲ್ಲ – ಒಂದು ಕಪ್
* ಏಲಕ್ಕಿ – ಎರಡು
* ತುಪ್ಪ – ಒಂದು ಟೀ ಸ್ಪೂನ್
Advertisement
ಎಳ್ಳು ಚಕ್ಕಿ ಮಾಡುವ ವಿಧಾನ:
* ಮೊದಲಿಗೆ ಒಂದು ಪ್ಯಾನ್‍ಗೆ 1 ಕಪ್ ಬಿಳಿ ಎಳ್ಳನ್ನು ಹಾಕಿ 2 ರಿಂದ 3 ನಿಮಿಷ ಹುರಿಯಬೇಕು. ಬಳಿಕ ಫ್ರೈ ಮಾಡಿದ ಎಳ್ಳನ್ನು ಒಂದು ತಟ್ಟೆಗೆ ಹಾಕಬೇಕು.
* ನಂತರ ಅದೇ ಪ್ಯಾನ್‍ಗೆ ಒಂದು ಕಪ್ ಪುಡಿ ಮಾಡಿದ ಬೆಲ್ಲವನ್ನು ಸುರಿದು ಸಣ್ಣ ಉರಿಯಲ್ಲಿ ಬೆಲ್ಲ ಕರಗುವವರೆಗೂ ಕುದಿಸಬೇಕು. ಎಷ್ಟು ಪ್ರಮಾಣದ ಎಳ್ಳನ್ನು ತೆಗೆದುಕೊಳ್ಳುತ್ತೀರೋ ಅಷ್ಟೇ ಪ್ರಮಾಣದ ಬೆಲ್ಲವನ್ನು ಎಳ್ಳು ಚಿಕ್ಕಿಗೆ ಬಳಸಬೇಕು.
* ಬೆಲ್ಲ ಕರಗಿ ಪಾಕ ತಯಾರಾದ ನಂತರ ಕುಟ್ಟಿಕೊಂಡಿರುವ 2 ಏಲಕ್ಕಿ ಬೆರಸಬೇಕು.
* ನಂತರ ಒಂದು ಟೀ ಸ್ಪೂನ್ ತುಪ್ಪವನ್ನು ಹಾಕಬೇಕು. ಬಳಿಕ ಸ್ಟವ್ ಆಫ್ ಮಾಡಿ ಹುರಿದಿಟ್ಟುಕೊಂಡಿದ್ದ ಎಳ್ಳನ್ನು ಬೆಲ್ಲದ ಪಾಕದೊಂದಿಗೆ ಚೆನ್ನಾಗಿ ಮಿಶ್ರಣ ಮಾಡಬೇಕು.
*ಬಟರ್ ಪ್ಲೇಟ್ ಅಥವಾ ಪ್ಲಾಸ್ಟಿಕ್ ಪೇಪರ್ ಮೇಲೆ ಸ್ವಲ್ಪ ತುಪ್ಪ ಅಥವಾ ಬೆಣ್ಣೆಯನ್ನು ಸವರಿ ಅದರ ಮೇಲೆ ಬಿಸಿಬಿಸಿಯಾದ ಎಳ್ಳು ಚಿಕ್ಕಿಯ ಮಿಶ್ರಣ ಹಾಕಬೇಕು.
* ಬಳಿಕ ಒಂದು ಲಟ್ಟಣೆ ತೆಗೆದುಕೊಂಡು ಅದಕ್ಕೆ ತುಪ್ಪ ಅಥವಾ ಬೆಣ್ಣೆ ಸವರಿ ಎಳ್ಳು ಚಕ್ಕಿಯನ್ನು ತೆಳ್ಳಗೆ ಲಟ್ಟಿಸಿ ಹದಮಾಡಿಕೊಳ್ಳಬೇಕು. ಚಾಕು ತೆಗೆದುಕೊಂಡು ನಿಮಗೆ ಬೇಕಾದ ಆಕಾರದಲ್ಲಿ ಎಳ್ಳು ಚಿಕ್ಕಿಯನ್ನು ಕಟ್ ಮಾಡಿ 10 ನಿಮಿಷಗಳ ನಂತರ ಅದನ್ನು ಹೊರತೆಗೆದುಕೊಂಡರೆ ಎಳ್ಳಿನ ಚಿಕ್ಕಿ ಸವಿಯಲು ಸಿದ್ದ.