ಬೆಂಗಳೂರು: ಬೆಳಗ್ಗೆಯಿಂದ ಏಳೆಂಟು ಅಸ್ಪತ್ರೆಗಳನ್ನು ಸುತ್ತಾಡಿದರೂ ಬೆಡ್ ಸಿಗದೆ ಶ್ವಾಸಕೋಶ ಸಂಬಂಧಿ ಖಾಯಿಲೆಯ ರೋಗಿ ಪರದಾಡಿದ್ದಾರೆ.
ಬೆಡ್‍ಗಾಗಿ ಬೆಳಗ್ಗೆಯಿಂದ ಏಳೆಂಟು ಅಸ್ಪತ್ರೆಗಳನ್ನು ರೋಗಿ ಸುತ್ತಾಡಿದ್ದು, ಯಾವ ಅಸ್ಪತ್ರೆಯಲ್ಲೂ ದಾಖಲಿಸಿಕೊಂಡಿಲ್ಲ. ಹೀಗಾಗಿ ಆಟೋದಲ್ಲೇ ಸಂಜೆಯವರೆಗೆ ರೋಗಿ ಹಾಗೂ ಪತ್ನಿ ಆಟೋದಲ್ಲಿ ಸುತ್ತಾಡಿದ್ದಾರೆ. ಏಳೆಂಟು ಆಸ್ಪತ್ರೆ ಸುತ್ತಾಡಿದ ಬಳಿಕ ವಿಕ್ಟೋರಿಯಾ ಅಸ್ಪತ್ರೆಗೆ ಬಂದಿದ್ದು, ಅಲ್ಲಿ ಸಹ ಇದು ಕೊರೊನಾ ರೋಗಿಗಳಿಗೆ ಮಾತ್ರ ಎಂದು ಸಬೂಬು ಹೇಳಿದ್ದಾರೆ. ಅಲ್ಲದೆ ಕೆ.ಸಿ.ಜನರಲ್ ಅಥವಾ ಜಯನಗರ ಸಾರ್ವಜನಿಕ ಅಸ್ಪತ್ರೆಗೆ ಹೋಗುವಂತೆ ಸೂಚಿಸಿದ್ದಾರೆ.
Advertisement
Advertisement
ಸೌತ್ ಎಂಡ್ ಸರ್ಕಲ್‍ನ ಖಾಸಗಿ ಅಸ್ಪತ್ರೆಯಲ್ಲಿ ಆಮ್ಲಜನಕ ಸಿಲಿಂಡರ್ ಹಾಕಿಸಿಕೊಂಡು ರೋಗಿ ಆಟೋದಲ್ಲೇ ಓಡಾಡಿದ್ದಾರೆ. ಬೆಳಗ್ಗೆ 9 ಗಂಟೆಯಿಂದ ಅಸ್ಪತ್ರೆಗಳ ಸುತ್ತಾಟ ಆರಂಭಿಸಿದ್ದು, ರಾಜೀವ್ ಗಾಂಧಿ, ಸಂಜಯಗಾಂಧಿ, ಸಾಗರ್, ಜಯನಗರ ಅಸ್ಪತ್ರೆಗಳಿಗೆ ರೋಗಿ ಮತ್ತು ಪತ್ನಿ ಅಲೆದಾಡಿದ್ದಾರೆ. ಮಧ್ಯಾಹ್ನ 3 ಗಂಟೆ ಸುಮಾರಿಗೆ ವಿಕ್ಟೋರಿಯಾ ಅಸ್ಪತ್ರೆ ಬಳಿ ಸುಮಾರು ಹೊತ್ತು ಆಟೋ ನಿಲ್ಲಿಸಿಕೊಂಡು ಬಳಿಕ ಕಿಮ್ಸ್ ಆಸ್ಪತ್ರೆಗೆ ತೆರಳಿದ್ದಾರೆ. ಅಲ್ಲಿ ರೋಗಿಯನ್ನು ದಾಖಲಿಸಿಕೊಳ್ಳಲಾಗಿದೆ.
Advertisement
Advertisement
ರೋಗಿ ಎರಡು ಸಲ ಕೊವೀಡ್-19 ಟೆಸ್ಟ್ ಮಾಡಿಸಿದ್ದು, ಎರಡು ಬಾರಿಯೂ ನೆಗೆಟಿವ್ ರಿಪೋರ್ಟ್ ಬಂದಿತ್ತು. ಇಂದು ಬೆಳಗ್ಗೆ ಏಕಾಏಕಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ಹೋಗಿದ್ದಾರೆ. ಬೆಳಗ್ಗೆಯಿಂದ ಹಲವಾರು ಅಸ್ಪತ್ರೆಗಳಿಗೆ ಸುತ್ತಾಡಿದರೂ ಬೆಡ್ ಸಿಕ್ಕಿಲ್ಲ. ಅಂಬುಲೆನ್ಸ್‍ಗೆ ಹಣವಿಲ್ಲದ್ದಕ್ಕೆ ಆಟೋದಲ್ಲೇ ಅಸ್ಪತ್ರೆಗಳಿಗೆ ಸುತ್ತಾಡಿದ್ದಾರೆ. ಆಟೋದಲ್ಲೇ ಆಕ್ಸಿಜನ್ ಸಿಲಿಂಡರ್ ಇಟ್ಟುಕೊಂಡು ಅಸ್ಪತ್ರೆಗಳಿಗೆ ಓಡಾಡಿದ್ದಾರೆ.