– ಅಂತ್ಯಕ್ರಿಯೆ ನಡೆದ ಸ್ಥಳದ ಬಳಿ ಸುತ್ತಾಟ
– ಸಕಲ ಗೌರವಗಳೊಂದಿಗೆ ಜಾನಿ ಅಂತ್ಯಕ್ರಿಯೆ
ಹಾವೇರಿ: ಜಿಲ್ಲಾ ಶ್ವಾನದಳದ ಏಳು ವರ್ಷದ ಜಾನಿ ಅನಾರೋಗ್ಯದಿಂದ ಮೃತಪಟ್ಟಿತ್ತು. ಜಾನಿಯ ಅಂತ್ಯಕ್ರಿಯೆಯನ್ನ ಪೊಲೀಸ್ ಇಲಾಖೆ ಶಾಸ್ತ್ರೋಕ್ತವಾಗಿ ನೆರವೇರಿಸಿತ್ತು.
ಕಳೆದ ಏಳು ವರ್ಷಗಳಿಂದ ಹಾವೇರಿ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ 60 ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವ ಮೂಲಕ ಜಾನಿ ಸೇವೆ ಸಲ್ಲಿಸಿದೆ. ಹೀಗಾಗಿ ನಾಯಿ ತೀರಿಕೊಂಡ ಬಳಿಕ ಪೊಲೀಸ್ ಇಲಾಖೆ ಸಿಬ್ಬಂದಿ ಗಾಡ್ ಆಪ್ ಹಾನರ್ ಸಲ್ಲಿಸಿ, ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಅಂತ್ಯಕ್ರಿಯೆ ನಡೆಸಿದರು. ಆದರೆ ಜಾನಿ ಸಾವನ್ನಪ್ಪಿದ ಬಳಿಕ ಆತನ ಸ್ನೇಹಿತರಾಗಿದ್ದ ಮೂರು ನಾಯಿಗಳು ಇದೀಗ ಬೇಸರ ವ್ಯಕ್ತಪಡಿಸಿವೆ.
Advertisement
Advertisement
ಜಾನಿ ಅಂತ್ಯಕ್ರಿಯೆ ನಡೆದ ಸ್ಥಳದ ಬಳಿ ಕುಳಿತು ಗೆಳೆಯನ ಅಗಲಿಕೆಗೆ ಮೂರು ಶ್ವಾನಗಳು ಮರುಕ ವ್ಯಕ್ತಪಡಿಸಿವೆ. ಒಂದು ಶ್ವಾನ ಸಮಾಧಿಯ ಮೇಲೆ ಮಲಗಿದರೆ, ಇನ್ನೂ ಎರಡು ಶ್ವಾನಗಳು ಸಮಾಧಿಯ ಮುಂದೆ ಕುಳಿತು ಬೇಸರ ವ್ಯಕ್ತಪಡಿಸಿವೆ. ಹೆಚ್ಚುವರಿ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸೇರಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಆವರಣದಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.