ನವದೆಹಲಿ: 2014ರಲ್ಲಿ ದೆಹಲಿ ನನಗೆ ಹೊಸದಾಗಿತ್ತು. ಮೊದಲ ದಿನದಿಂದಲೂ ನನಗೆ ಪ್ರಣಬ್ ಮುಖರ್ಜಿಯವರ ಮಾರ್ಗದರ್ಶನ ಸಿಕ್ಕಿತ್ತು ಎಂದು ಪ್ರಧಾನಿ ನರೇಂದ್ರ ಮೋದಿಯವರು ಮಾಜಿ ರಾಷ್ಟ್ರಪತಿಗಳನ್ನು ನೆನಪಿಸಿಕೊಂಡಿದ್ದಾರೆ.
ಪ್ರಧಾನಿ ಮೋದಿಯವರು ಮೂರು ಫೋಟೋ, 4 ಟ್ವೀಟ್ ಮಾಡಿ ಪ್ರಣಬ್ ಮುಖರ್ಜಿಯವರ ಜೊತೆಗಿನ ಸಂಬಂಧವನ್ನು ಬಣ್ಣಿಸಿದ್ದಾರೆ.
Advertisement
During his political career that spanned decades, Shri Pranab Mukherjee made long-lasting contributions in key economic and strategic ministries. He was an outstanding Parliamentarian, always well-prepared, extremely articulate as well as witty.
— Narendra Modi (@narendramodi) August 31, 2020
Advertisement
ರಾಷ್ಟ್ರಪತಿ ಆಗಿದ್ದ ವೇಳೆ ಅವರ ಆಶೀರ್ವಾದವನ್ನು ಪಡೆಯುತ್ತಿರುವ ಫೋಟೋವನ್ನು ಹಾಕಿದ ಮೋದಿಯವರು, ಭಾರತ್ ರತ್ನ ಶ್ರೀ ಪ್ರಣಬ್ ಮುಖರ್ಜಿ ಅವರ ನಿಧನ ಭಾರತಕ್ಕೆ ದು:ಖ ತಂದಿದೆ. ಅವರು ನಮ್ಮ ರಾಷ್ಟ್ರದ ಅಭಿವೃದ್ಧಿ ಪಥದಲ್ಲಿ ಅಳಿಸಲಾಗದ ಗುರುತು ಹಾಕಿದ್ದಾರೆ. ಶ್ರೇಷ್ಠ ವಿದ್ವಾಂಸ, ಉನ್ನತ ರಾಜಕಾರಣಿ ಮತ್ತು ಎಲ್ಲ ವರ್ಗದ ರಾಜಕಾರಣಿಗಳು ಅವರನ್ನು ಮೆಚ್ಚಿದ್ದರು ಎಂದು ಬರೆದುಕೊಂಡಿದ್ದಾರೆ.
Advertisement
ರಾಜಕೀಯ ಜೀವನದಲ್ಲಿ ಪ್ರಮುಖವಾಗಿ ಆರ್ಥಿಕ ಮತ್ತು ವಿವಿಧ ಸಚಿವಾಲಯಗಳನ್ನು ನಿರ್ವಹಿಸಿ ಕೊಡುಗೆಗಳನ್ನು ನೀಡಿದ್ದಾರೆ. ಅವರು ಅತ್ಯುತ್ತಮ ಸಂಸದರಾಗಿದ್ದರು, ಯಾವಾಗಲೂ ಸಿದ್ಧರಾಗಿಯೇ ಬರುತ್ತಿದ್ದರು. ಅತ್ಯಂತ ಸ್ಪಷ್ಟವಾಗಿ ಹೇಳುತ್ತಿದ್ದರು ಮತ್ತು ಹಾಸ್ಯಮಯರಾಗಿದ್ದರು ಎಂದು ಮೋದಿ ನೆನಪಿಸಿಕೊಂಡಿದ್ದಾರೆ.
Advertisement
I was new to Delhi in 2014. From Day 1, I was blessed to have the guidance, support and blessings of Shri Pranab Mukherjee. I will always cherish my interactions with him. Condolences to his family, friends, admirers and supporters across India. Om Shanti. pic.twitter.com/cz9eqd4sDZ
— Narendra Modi (@narendramodi) August 31, 2020
ಪ್ರಣಬ್ ಮುಖರ್ಜಿಯವರು ಭಾರತದ ಅಧ್ಯಕ್ಷರಾಗಿದ್ದ ವೇಳೆ ರಾಷ್ಟ್ರಪತಿ ಭವನವನ್ನು ಸಾಮಾನ್ಯ ನಾಗರಿಕರು ಪ್ರವೇಶಿಸುವಂತೆ ಮಾಡಿದರು. ತಮ್ಮ ನಿವಾಸವನ್ನು ಕಲಿಕೆ, ನಾವೀನ್ಯತೆ, ಸಂಸ್ಕೃತಿ, ವಿಜ್ಞಾನ ಮತ್ತು ಸಾಹಿತ್ಯದ ಕೇಂದ್ರವನ್ನಾಗಿ ಮಾಡಿದರು. ಪ್ರಮುಖ ನೀತಿ ವಿಷಯಗಳಲ್ಲಿ ಅವರು ನೀಡಿದ ಬುದ್ಧಿವಂತ ಸಲಹೆಯನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಮೋದಿ ಸ್ಮರಿಸಿದ್ದಾರೆ.
2014 ರಲ್ಲಿ ನಾನು ದೆಹಲಿಗೆ ಹೊಸಬನಾಗಿದ್ದೆ ಮೊದಲ ದಿನದಿಂದ ಶ್ರೀ ಪ್ರಣಬ್ ಮುಖರ್ಜಿ ಅವರ ಮಾರ್ಗದರ್ಶನ, ಬೆಂಬಲ ಮತ್ತು ಆಶೀರ್ವಾದ ಸಿಕ್ಕಿತ್ತು. ಅವರೊಂದಿಗಿನ ಸಂವಹನ ನನಗೆ ಬಹಳ ಇಷ್ಟವಾಗುತ್ತಿತ್ತು. ಅವರ ಕುಟುಂಬ, ಸ್ನೇಹಿತರು, ಅಭಿಮಾನಿಗಳಿಗೆ ದು:ಖ ಭರಿಸುವ ಶಕ್ತಿ ನೀಡಲಿ. ಓಂ ಶಾಂತಿ ಎಂದು ಟ್ವೀಟ್ ಮಾಡಿ ಪ್ರಾರ್ಥಿಸಿದ್ದಾರೆ.