ಮುಂಬೈ: ಖ್ಯಾತ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್ ಹಾಗೂ ಶಿಲಾದಿತ್ಯ ದಂಪತಿಗೆ ಇಂದು ಮಧ್ಯಾಹ್ನ ಗಂಡು ಮಗು ಜನಸಿದೆ.
ಈ ಕುರಿತು ಗಾಯಕಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, ದೇವರು ಇಂದು ಮಧ್ಯಾಹ್ನ ನಮಗೆ ಗಂಡು ಮಗುವನ್ನು ಆಶೀರ್ವದಿಸಿದ್ದಾನೆ. ಇಂತಹ ಭಾವನೆಯನ್ನು ಹಿಂದೆಂದೂ ಅನುಭವಿಸಿರಲಿಲ್ಲ. ನಮ್ಮ ಕುಟುಂಬಸ್ಥರೂ ಸೇರಿದಂತೆ ಶೀಲಾದಿತ್ಯ ಹಾಗೂ ನಾನು ತುಂಬಾ ಸಂತೋಷಗೊಂಡಿದ್ದೇವೆ. ಬೆಲೆ ಕಟ್ಟಲಾಗದ ನಿಮ್ಮ ಆಶೀರ್ವಾದಕ್ಕೆ ಧನ್ಯವಾದಗಳು ಎಂದು ಶ್ರೇಯಾ ಘೋಷಾಲ್ ಬರೆದುಕೊಂಡಿದ್ದಾರೆ.
Advertisement
View this post on Instagram
Advertisement
ತಮ್ಮ ಸುಮಧುರವಾದ ಕಂಠದಿಂದ ಎಲ್ಲರ ಮನವನ್ನು ಗೆದ್ದಿರುವ ಬಾಲಿವುಡ್ನ ಜನಪ್ರಿಯ ಗಾಯಕಿ ಶ್ರೇಯಾ ಘೋಷಾಲ್ ಮಾರ್ಚ್ 4ರಂದು ತಮ್ಮ ಪ್ರಗ್ನೆನ್ಸಿ ಅನೌನ್ಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದರು.
Advertisement
ಶ್ರೇಯಾ ತಾವು ತಾಯಿ ಆಗುತ್ತಿರುವ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಬೇಬಿ ಶ್ರೇಯಾದಿತ್ಯ ನಿರೀಕ್ಷೆಯಲ್ಲಿದ್ದೇವೆ. ಶಿಲಾದಿತ್ಯ ಮತ್ತು ನಾನು ಈ ಸುದ್ದಿಯನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನಾನು ರೋಮಾಂಚನಗೊಂಡಿದ್ದೇವೆ. ನಮ್ಮ ಜೀವನದಲ್ಲಿ ಹೊಸ ಅಧ್ಯಾಯಕ್ಕೆ ನಾವು ಸಿದ್ಧರಾಗಿರುವಾಗ ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದಗಳು ಬೇಕು ಎಂದು ಬರೆದುಕೊಂಡು ಬೇಬಿ ಬಂಪ್ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದರು.
Advertisement
ಶ್ರೇಯಾ ಘೋಷಾಲ್ ಕನ್ನಡ ಸೇರಿದಂತೆ ಹಲವು ಭಾಷೆಗಳ ಹಾಡುಗಳಿಗೆ ಧ್ವನಿಯಾಗಿದ್ದಾರೆ. 2015ರ ಫೆಬ್ರವರಿ ತಿಂಗಳಲ್ಲಿ ಸಾಂಪ್ರದಾಯಿಕ ಬಂಗಾಳಿ ಶೈಲಿಯಲ್ಲಿ ಶ್ರೇಯಾ ಮತ್ತು ಶಿಲಾದಿತ್ಯ ವಿವಾಹ ಮಹೋತ್ಸವ ನಡೆಯಿತು. ಇವರಿಬ್ಬರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಮದುವೆಗೂ ಮುನ್ನ ಹತ್ತು ವರ್ಷಗಳ ಕಾಲ ಶ್ರೇಯಾ ಮತ್ತು ಶಿಲಾದಿತ್ಯ ಪ್ರೀತಿಸಿದ್ದರು.