ಶ್ರೀರಾಮುಲು ಖಾತೆ ಬದಲಾವಣೆಗೆ ಕಾರಣವಾಯ್ತಾ ದಸರಾ?

Public TV
2 Min Read
Sriramulu Dasara

ಬೆಂಗಳೂರು: ಸಚಿವ ಶ್ರೀರಾಮುಲು ಖಾತೆ ಬದಲಾವಣೆಗೆ ದಸರಾ ಹಿನ್ನೆಲೆ ತೆಗೆದುಕೊಂಡ ನಿರ್ಧಾರ ಕಾರಣ ಅನ್ನೋ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಕೊರೊನಾ ವೈರಸ್ ಹಿನ್ನೆಲೆ ದಸರಾ ಆಚರಣೆ ಕುರಿತು ಸರ್ಕಾರ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಕಳೆದ ಒಂದು ತಿಂಗಳಿನಿಂದ ದಸರಾ ಸಂಬಂಧ ಸಭೆಗಳು ನಡೆಯುತ್ತಿವೆ. ಸರ್ಕಾರ ಈ ಬಾರಿ ದಸರಾದಲ್ಲಿ 2 ಸಾವಿರ ಗಣ್ಯರನ್ನ ಸೇರಿಸಿ ಜಂಬೂ ಸವಾರಿ ನಡೆಸಲು ನಿರ್ಧರಿಸಿತ್ತು. ಈ ವಿಚಾರವಾಗಿ ಸಭೆ ನಡೆಸಲು ಬಂದ ಶ್ರೀರಾಮುಲು ತಜ್ಞರ ಸಮಿತಿ ರಚಿಸಿ 24 ಗಂಟೆಯೊಳಗೆ ವರದಿ ನೀಡುವಂತೆ ಸೂಚನೆ ನೀಡಿದ್ದರು. ಜಂಬೂ ಸವಾರಿ ಕೇವಲ 300 ಜನರನ್ನ ಸೇರಿಸುವಂತೆ ತಜ್ಞರ ತಂಡ ವರದಿ ನೀಡಿತ್ತು ಎಂದು ತಿಳಿದು ಬಂದಿದೆ.

RAMULU 1

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಸಿಎಂ ಯಡಿಯೂರಪ್ಪರ ಗಮನಕ್ಕೆ ತರದೇ ವರದಿ ತರಿಸಿಕೊಂಡಿದ್ದ ಶ್ರೀರಾಮುಲು ಖಾತೆ ಬದಲಾವಣೆ ಕಾರಣ ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ. ಜನರ ಆರೋಗ್ಯ ದೃಷ್ಟಿಯಿಂದ ಶ್ರೀರಾಮುಲು ತೆಗೆದುಕೊಂಡ ನಿರ್ಧಾರವೇ ಅವರಿಗೆ ಮುಳುವಾಯ್ತಾ ಅನ್ನೋ ಪ್ರಶ್ನೆ ಹುಟ್ಟುಕೊಂಡಿದೆ. ಸಚಿವ ಶ್ರೀರಾಮುಲು ದಸರಾ ಕುರಿತ ತೆಗೆದುಕೊಂಡ ನಿರ್ಧಾರದಿಂದ ಸಿಎಂ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಬೇಸರು ಉಂಟು ಮಾಡಿದ್ದರಿಂದ ಖಾತೆ ಬದಲಾವಣೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಇದನ್ನೂ ಓದಿ: ಸಂಧಾನ ಸಕ್ಸಸ್- ಸಿಎಂ ನೀಡಿದ ಖಾತೆ ಒಪ್ಪಿಕೊಂಡ ಶ್ರೀರಾಮುಲು

Sudhakar SriRamulu CM BSY

ಸಿಎಂ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀರಾಮುಲು, ಈ ಹಿಂದೆ ನನಗೆ ಸಮಾಜ ಕಲ್ಯಾಣ ಖಾತೆ ನೀಡಬೇಕೆಂದು ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿಕೊಂಡಿದ್ದೆ. ಅದರಂತೆ ಸಿಎಂ ಆ ಖಾತೆಯನ್ನ ನೀಡಿದ್ದಾರೆ. ಮಾಧ್ಯಮಗಳಲ್ಲಿ ಬಿತ್ತರವಾಗಿರುವಂತೆ ಯಾವುದೇ ಅಸಮಾಧಾನ ಇಲ್ಲ. ಕೊರೊನಾ ಕಾಲದಲ್ಲಿ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆ ಒಬ್ಬರೇ ಬಳಿ ಇರೋದು ಉತ್ತಮ. ಹಾಗಾಗಿ ಆರೋಗ್ಯ ಇಲಾಖೆ ಖಾತೆಯನ್ನ ಸೋದರರಾಗಿರುವ ಸುಧಾಕರ್ ಅವರಿಗೆ ನೀಡಲಾಗಿದೆ. ಸುಧಾಕರ್ ವೈದ್ಯರಾಗಿದ್ದು, ಆರೋಗ್ಯ ಇಲಾಖೆಯನ್ನ ಉತ್ತಮವಾಗಿ ನಿರ್ವಹಿಸಲಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಶ್ರೀರಾಮುಲುಗೆ ಎದುರಾದ ಸಂಕಷ್ಟ ನಿವಾರಣೆಗೆ ದೇವಿ ಮೊರೆ ಹೋದ ಅರ್ಚಕ

Sudhakar 1

ಖಾತೆ ಬದಲಾವಣೆಯಿಂದ ಪಕ್ಷದಲ್ಲಿ ಉಂಟಾಗಿದ್ದ ಅಸಮಾಧಾನವನ್ನ ಶಮನಗೊಳಿಸುವಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ. ಇಂದು ಸಚಿವ ಸುಧಾಕರ್ ಮತ್ತು ಶ್ರೀರಾಮುಲು ಇಬ್ಬರನ್ನ ಕಾವೇರಿ ನಿವಾಸಕ್ಕೆ ಕರೆಸಿಕೊಂಡಿದ್ದರು. ಈ ವೇಳೆ ಇಬ್ಬರು ಸಚಿವರ ಜೊತೆಗೆ ಮಾತುಕತೆ ನಡೆಸಿ ಸಂಪುಟ ವಿಸ್ತರಣೆ ವೇಳೆ ನೋಡಿಕೊಳ್ಳೋಣ ಎಂದ ಸಿಎಂ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಸಿಎಂ ಭರವಸೆ ಹಿನ್ನೆಲೆ ಶ್ರೀರಾಮುಲು ಸಮಾಜ ಕಲ್ಯಾಣ ಇಲಾಖೆ ಖಾತೆ ಒಪ್ಪಿಕೊಂಡಿದ್ದಾರೆ ಎಂದು ಪಬ್ಲಿಕ್ ಟಿವಿಗೆ ತಿಳಿದು ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *