– ಶಾಲೆಗಳ ಪುನಾರಂಭ ಯಾವಾಗ?
ನವದೆಹಲಿ; ಲಾಕ್‍ಡೌನ್ ಗೂ ಮುನ್ನ ಬಂದ್ ಆಗಿದ್ದ ಶಾಲೆ-ಕಾಲೇಜುಗಳು ಎರಡು ಹಂತದಲ್ಲಿ ಅನ್‍ಲಾಕ್ ಆದರೂ ಇನ್ನು ಪುನಾರಂಭಗೊಂಡಿಲ್ಲ. ಈಗ ಮೂರನೇ ಹಂತದಲ್ಲಿ ಅನ್‍ಲಾಕ್‍ನಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ತೆರೆಯಲು ಅವಕಾಶ ನೀಡುವುದಾಗಿ ಕೇಂದ್ರ ಗೃಹ ಇಲಾಖೆ ಸುಪ್ರೀಂಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದೆ. ಯುಜಿಸಿ ಸೆಪ್ಟೆಂಬರ್ 30 ರೊಳಗೆ ಅಂತಿಮ ವರ್ಷದ ಪರೀಕ್ಷೆ ಮುಗಿಸುವಂತೆ ಸೂಚಿಸಿದ್ದು, ಇದಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ತೆರೆಯಲು ಕೇಂದ್ರ ಸರ್ಕಾರ ಮನಸ್ಸು ಮಾಡಿದೆ.
Advertisement
ಮಾಹಿತಿಗಳ ಪ್ರಕಾರ ಎರಡು ಅಥವಾ ಮೂರು ಹಂತದಲ್ಲಿ ಶೈಕ್ಷಣಿಕ ಸಂಸ್ಥೆಗಳು ಪುನಾರಂಭವಾಗಲಿದೆ. ಸೆಪ್ಟೆಂಬರ್ ಒಂದು ಮೊದಲ, ಸೆಪ್ಟೆಂಬರ್ 15 ಎರಡನೇ ಹಾಗೂ ನವೆಂಬರ್ 14 ಮೂರನೇ ಹಂತದಲ್ಲಿ ಶಾಲೆಗಳು ತೆರೆಯಲಿದೆ.
Advertisement
* 10 ರಿಂದ 12 ನೇ ತರಗತಿಗಳು ಸೆಪ್ಟೆಂಬರ್ 1 ರಿಂದ ಪ್ರಾರಂಭವಾಗಬಹುದು. ಇದರ ಜೊತೆಗೆ ಎಲ್ಲ ಮಾದರಿಯ ಕಾಲೇಜು ಶಿಕ್ಷಣ ಶುರುವಾಗಬಹುದು.
* 6 ರಿಂದ 9 ತರಗತಿಗಳು ಸೆಪ್ಟೆಂಬರ್ 15 ರಿಂದ ಪುನಾರಂಭಗೊಳ್ಳುವ ಸಾಧ್ಯತೆ ಇದೆ.
* ನವೆಂಬರ್ 14ರ ಬಳಿಕ ಪ್ರಾಥಮಿಕ ಮತ್ತು ಪೂರ್ವ ಪ್ರಾಥಮಿಕ ತರಗತಿಗಳು ಶುರುವಾಗಬಹುದು
* ಆದರೆ ಯಾವುದೇ ಕಾರಣಕ್ಕೂ ಝಿರೋ ಅಕಾಡೆಮಿ ವರ್ಷ ಮಾಡುವುದಿಲ್ಲ ಎಂದು ಕೇಂದ್ರ ಹೇಳಿದೆ.
* ಖಾಸಗಿ ಕೊಚಿಂಗ್ ಕ್ಲಾಸ್ ಗಳಿಗೂ ಅನುಮತಿ ಸಿಗುವ ನಿರೀಕ್ಷೆಗಳಿವೆ.
Advertisement
Advertisement
ಕೇಂದ್ರ ಸರ್ಕಾರ ಇಂತಹದೊಂದು ಮನಸ್ಸು ಮಾಡುತ್ತಿದ್ದಂತೆ ಮೂರನೇ ಹಂತದ ಅನ್‍ಲಾಕ್‍ನಲ್ಲಿ ಅವಕಾಶ ಸಿಕ್ಕರೂ ಶಾಲೆ ತೆಗೆಯಬೇಕಾ ಬೇಡ್ವಾ ಅನ್ನೊ ಗೊಂದಲದಲ್ಲಿ ರಾಜ್ಯ ಸರ್ಕಾರಗಳಿವೆ. ಲಾಕ್‍ಡೌನ್ ಅವಧಿಗಿಂತಲೂ ಅತಿ ಹೆಚ್ಚು ಸೋಂಕು ಅನ್‍ಲಾಕ್ ವೇಳೆ ಪತ್ತೆಯಾಗುತ್ತಿದ್ದು ಶಾಲೆ ಕಾಲೇಜು ತೆರೆಯುವ ಬಗ್ಗೆ ಗೊಂದಲದಲ್ಲಿದೆ.
ಯಾವ ರಾಜ್ಯದ ಒಲವು ಏನಿದೆ?
* ದೆಹಲಿಯಲ್ಲಿ ಸೋಂಕು ಕಡಿಮೆ ಇದ್ದರೂ ಶಾಲೆಗಳನ್ನು ತೆರೆಯಲು ಸಿಎಂ ಅರವಿಂದ ಕೇಜ್ರಿವಾಲ್ ಮನಸ್ಸು ಮಾಡುತ್ತಿಲ್ಲ. ಪೋಷಕರ ಮಾತು ಬೆಂಬಲಿಸಿದ್ದು ಸೆಪ್ಟೆಂಬರ್ ಬಳಿಕವೂ ಮತ್ತಷ್ಟು ದಿನ ಬಂದ್ ಮುಂದುವರಿಸುವ ಸಾಧ್ಯತೆ ಇದೆ.
* ಹಿಮಾಲಯ ಪ್ರದೇಶದಲ್ಲಿ ಶೇಕಡಾ 62 ಪೋಷಕರು ಶಾಲೆ ಕಾಲೇಜು ಸದ್ಯ ತೆರೆಯುವುದು ಬೇಡ ಅಂದ್ರೆ ಬಾಕಿ ಪೋಷಕರು ಮುನ್ನೆಚ್ಚರಿಕೆ ಕ್ರಮದೊಂದಿಗೆ ಓಕೆ ಎಂದಿದ್ದಾರೆ. ಹೀಗಾಗಿ ಸೀಮಿತವಾಗಿ ಶಾಲೆ ಆರಂಭಿಸಲು ಸರ್ಕಾರ ಚಿಂತಿಸಿದೆ
* ತ್ರಿಪುರದಲ್ಲಿ 1:5 ವಿದ್ಯಾರ್ಥಿಗಳೊಂದಿಗೆ ತರಗತಿ ನಡೆಸಲು ಸರ್ಕಾರ ಸಿದ್ಧವಾಗಿದೆ.
* ಹರಿಯಾಣ, ಆಂಧ್ರಪ್ರದೇಶ, ಕರ್ನಾಟಕ, ರಾಜಸ್ಥಾನ, ಕೇರಳ, ಅಸ್ಸಾಂ, ಬಿಹಾರ ಸೇರಿದಂತೆ ಹಲವು ಪ್ರಮುಖ ರಾಜ್ಯಗಳು ಕೇಂದ್ರದ ನಿರ್ಧಾರ ಮೇಲೆ ಅವಲಂಬಿತವಾಗಿದ್ದು, ಕೇಂದ್ರ ಓಕೆ ಅಂದಲ್ಲಿ ಸೆಪ್ಟೆಂಬರ್ ಒಂದರಿಂದ ಮಾರ್ಗಸೂಚಿ ಅನ್ವಯ ಶೈಕ್ಷಣಿಕ ಸಂಸ್ಥೆಗಳನ್ನು ನಡೆಸಲು ಸಿದ್ಧವಾಗಿದೆ.
ಮೂರನೇ ಅನ್‍ಲಾಕ್ ಗೆ ಇನ್ನು ಹದಿನೈದು ದಿನ ಬಾಕಿ ಇದ್ದು ಈ ವೇಳೆಗೆ ಸೋಂಕು ಎಷ್ಟು ಪ್ರಮಾಣದಲ್ಲಿ ನಿಯಂತ್ರಣಕ್ಕೆ ಬರಲಿದೆ. ಶೈಕ್ಷಣಿಕ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿಲುವೇನು ಅನ್ನೋದು ಮತ್ತಷ್ಟು ಸ್ಪಷ್ಟವಾಗಲಿದೆ.