ಮಂಗಳೂರು: ಲಾಕ್‍ಡೌನ್ ಅಂತ್ಯಗೊಂಡು ಇಡೀ ರಾಜ್ಯದಲ್ಲಿ ದೇಗುಲಗಳು ಓಪನ್ ಆಗಿದೆ. ದೇಗುಲಗಳಲ್ಲಿ ಒಂದಷ್ಟು ರೂಲ್ಸ್‍ಗಳನ್ನು ಪಾಲಿಸಿಕೊಂಡು ಭಗವಂತ ದರ್ಶನ ನೀಡ್ತಿದ್ದಾನೆ. 77 ದಿನಗಳಿಂದ ಲಾಕ್‍ಡೌನ್ ಆಗಿದ್ದ ದೇಶ ಸೋಮವಾರ ಮೊದಲ ಹಂತವಾಗಿ ತೆರೆದುಕೊಂಡಿತು. ಸೋಮವಾರ ದೇವಾಲಯ, ಹೋಟೆಲ್, ಮಾಲ್, ಪ್ರವಾಸಿ ತಾಣಗಳು ಸಾರ್ವಜನಿಕರಿಗೆ ಮುಕ್ತವಾಗಿವೆ. ಬಹುತೇಕ ದೇವಾಲಯಗಳು ಬಾಗಿಲು ತೆರೆದಿದ್ದವು. ಆದರೆ ಭಕ್ತರ ಸಂಖ್ಯೆಯೇ ಕಡಿಮೆಯಿತ್ತು. ಇನ್ನು ಕೆಲವು ಕಡೆ ಜುಲೈ ಬಳಿಕ ದೇಗುಲ ತೆರೆಯಲು ನಿರ್ಧರಿಸಲಾಗಿದೆ.
Advertisement
ನಿನ್ನೆಯಿಂದ ರಾಜ್ಯಾದ್ಯಂತ ಧಾರ್ಮಿಕ ಕ್ಷೇತ್ರಗಳು ಓಪನ್ ಆಗಿರೋ ಹಿನ್ನೆಲೆಯಲ್ಲಿ, ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಸಾವಿರಾರು ಭಕ್ತರ ದಂಡು ಹರಿದುಬಂದಿದೆ. ಎರಡು ತಿಂಗಳ ಬಳಿಕ ಭಕ್ತರಿಗೆ ಮಂಜುನಾಥ ಸ್ವಾಮಿ ದರ್ಶನ ನೀಡಿದ್ದಾರೆ. ಕ್ಷೇತ್ರದ ಸಿಬ್ಬಂದಿ ಮತ್ತು ಅರ್ಚಕರು ದೇವಸ್ಥಾನ ಪ್ರವೇಶಕ್ಕೂ ಮುನ್ನ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಝೇಷನ್, ಮಾಸ್ಕ್, ಗ್ಲೌಸ್ ಮತ್ತು ಫೇಸ್ ಶೀಲ್ಡ್ ಕಡ್ಡಾಯವಾಗಿದೆ.
Advertisement
ಧರ್ಮಸ್ಥಳದಲ್ಲಿ ದರ್ಶನದ ಜೊತೆ ಅನ್ನಸಂತರ್ಪಣೆಯೂ ಆರಂಭವಾಗಿದೆ. ಅನ್ನಪೂರ್ಣ ಅನ್ನಛತ್ರದಲ್ಲಿ ಅನ್ನದಾನ ನಡೆದಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಕೂತು ಊಟ ಮಾಡುವ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ ಹಾಗೂ ರಾತ್ರಿ ಎರಡು ಹೊತ್ತು ಅನ್ನದಾನ ನಡೆಯಲಿದ್ದು, ನಿನ್ನೆ ಹತ್ತು ಸಾವಿರಕ್ಕೂ ಹೆಚ್ಚು ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದ್ದಾರೆ.
Advertisement
Advertisement
ಕೊರೊನಾ ಆತಂಕದಿಂದ ಕಳೆದ ಎರಡೂವರೆ ತಿಂಗಳಿಂದ ಲಾಕ್ ಆಗಿದ್ದ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದೇವಸ್ಥಾನ ಓಪನ್ ಆಗಿದೆ. ಸಾವಿರಾರು ಭಕ್ತರು ಮುಡಿಕೇಂದ್ರದಲ್ಲಿ ಮುಡಿಕೊಟ್ಟು, ನೇತ್ರಾವತಿ ನದಿಯಲ್ಲಿ ಮಿಂದು ಮಂಜುನಾಥನ ದರ್ಶನ ಪಡೆದ್ರು. ಮುಡಿಕೇಂದ್ರದ ಮಾರ್ಗದುದ್ದಕ್ಕೂ ಸಿಬ್ಬಂದಿ ಭಕ್ತರಿಗೆ ಜಾಗೃತಿ ಮೂಡಿಸುತ್ತಿದ್ದಾರೆ. ಮುಡಿಕೇಂದ್ರದಲ್ಲಿ ಆಗಾಗ್ಗೆ ಶುಚಿಮಾಡುತ್ತಿದ್ದು, ಒಬ್ಬರ ಮುಡಿ ಆದ ಬಳಿಕ ಚೇರ್ ಸುತ್ತಮುತ್ತ ಕ್ಲೀನ್ ಮಾಡಿ ಮತ್ತೊಬ್ಬರನ್ನ ಕೂರಿಸುತ್ತಿದ್ದಾರೆ.
ಇತ್ತ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಭಕ್ತರಿಗೆ ದರ್ಶನ ಸಿಗ್ತಿದೆ. ಬೆಳಗ್ಗೆ 8:30ರಿಂದ ಸಂಜೆ 5:30ರವರೆಗೆ ಸತತವಾಗಿ ದೇವರ ದರ್ಶನಕ್ಕೆ ಭಕ್ತಾದಿಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ದೇವಾಲಯಕ್ಕೆ ಬರುವ ಭಕ್ತರು ಪಾಲಿಸಬೇಕಾದ ನಿಯಮಗಳ ಬಗ್ಗೆ ದೇವಾಲಯದ ಪ್ರವೇಶ ದ್ವಾರದಲ್ಲೇ ಸೂಚನಾ ಫಲಕ ಹಾಕಲಾಗಿದೆ. ವಿಐಪಿ ಮತ್ತು ಸಾಮಾನ್ಯ ಭಕ್ತರು ಎಲ್ಲರಿಗೂ ಕೂಡ ಒಂದೇ ಪ್ರವೇಶ ದ್ವಾರದಲ್ಲಿ ದೇವಾಲಯದ ಒಳಗೆ ಹೋಗಬೇಕು.
ಕುಕ್ಕೆಸುಬ್ರಹ್ಮಣ್ಯ ಸ್ವಾಮಿ ದೇವರ ದರ್ಶನಕ್ಕೆ ಬಹಳ ದಿನಗಳ ನಂತರ ಅವಕಾಶ ಸಿಕ್ಕಿರುವುದರಿಂದ ಭಕ್ತರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ದೇವಾಲಯದ ಮುಂದೆ ಸರದಿ ಸಾಲಿನಲ್ಲಿ ಮಾಸ್ಕ್ ಹಾಕಿಕೊಂಡು ನಿಂತಿರುವ ಭಕ್ತರು ದೇವರ ದರ್ಶನಕ್ಕೆ ಒಬ್ಬೊಬ್ಬರಾಗಿ ಹೋಗುತ್ತಿದ್ದಾರೆ.