– ಕಚೇರಿಯ ಸ್ನೇಹಿತರು ದೂರಾ ದೂರ- ಸ್ನೇಹ ಸಂಪರ್ಕ ಕಡಿತ
– ಆಫೀಸ್ ರೊಟೀನ್ ಒಂತರಾ ಮಜಾ ಅಂತೆ
– ಜೆಎಲ್‍ಎಲ್ ಸಂಸ್ಥೆ ನಡೆಸಿದ ಸರ್ವೇಯಲ್ಲಿ ಬಹಿರಂಗ
ನವದೆಹಲಿ: ವರ್ಕ್ ಫ್ರಮ್ ಹೋಮ್ ಕ್ರೇಜ್ ಹೆಚ್ಚುತ್ತಿರುವ ಬೆನ್ನಲ್ಲೇ ಅಚ್ಚರಿಯ ಮಾಹಿತಿಯನ್ನು ಸಂಶೋಧನೆಯೊಂದು ಹೊರ ಹಾಕಿದ್ದು, ಮನೆಯಿಂದ ಕೆಲಸ ಮಾಡುತ್ತಿರುವ ಶೇ.80ರಷ್ಟು ಭಾರತೀಯರು ಆಫೀಸ್ ಫ್ರಮ್ ವರ್ಕ್ ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ.
Advertisement
ಈ ಕುರಿತು ರಿಯಲ್ ಎಸ್ಟೇಟ್ ಕನ್ಸಲ್ಟೆನ್ಸಿ ಜೆಎಲ್‍ಎಲ್ ಏಷ್ಯಾ ಫೆಸಿಫಿಕ್ ಸರ್ವೇ ನಡೆಸಿದ್ದು, ‘ಹೋಮ್ ಆ್ಯಂಡ್ ಅವೇ: ದಿ ನ್ಯೂ ವರ್ಕ್‍ಪ್ಲೇಸ್ ಹೈಬ್ರಿಡ್?’ ಎಂಬ ಶಿರ್ಷಿಕೆಯಡಿ ಸಂಶೋಧನೆ ನಡೆಸಲಾಗಿದೆ. ಭಾರತದಲ್ಲಿ ಕೆಲಸ ಮಾಡುವ ಶೇ.82ರಷ್ಟು ಜನ ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದು, ಸಂವಹನ ಕೊರತೆ ಅಥವಾ ಸಹೋದ್ಯೋಗಿಗಳೊಂದಿಗೆ ಪರಸ್ಪರ ಬೆರೆಯಲು ಆಗುತ್ತಿಲ್ಲ ಎಂಬ ಕಾರಣಕ್ಕೆ ಕಚೇರಿ ಕೆಲಸವನ್ನು ಬಹುತೇಕ ಭಾರತೀಯರು ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ.
Advertisement
ಕೋವಿಡ್-19 ಹೆಚ್ಚಿರುವ ಸಮಯದಲ್ಲಿ ಶೇ.68ರಷ್ಟು ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದು, ಈ ಪೈಕಿ ಸಿಂಗಾಪುರ ಅತಿ ಹೆಚ್ಚು ಅಂದರೆ ಶೇ.82ರಷ್ಟು ಜನ ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದಾರೆ ಎಂದು ಜೆಎಲ್‍ಎಲ್ ನಡೆಸಿದ ಸಮೀಕ್ಷೆಯಲ್ಲಿ ತಿಳಿಸಲಾಗಿದೆ.
Advertisement
Advertisement
ಈ ಪೈಕಿ ಮನೆಯಿಂದ ಕೆಲಸ ಮಾಡುವ ಶೇ.61ರಷ್ಟು ಉದ್ಯೋಗಿಗಳು ಕಚೇರಿಗೆ ತೆರಳಿ ಕೆಲಸ ಮಾಡುವುದನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ. ಈ ಸಂಖ್ಯೆ ಭಾರತದಲ್ಲಿ ಶೇ.82ರಷ್ಟಿದ್ದು, ಇಷ್ಟೂ ಜನ ಕಚೇರಿಗೆ ಹೋಗಿ ಕೆಲಸ ಮಾಡುವುದನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ. ಇದಕ್ಕೆ ಬಹುತೇಕರ ಕಾರಣ ಸಂವಹನ ಹಾಗೂ ಸಹೋದ್ಯೋಗಿಗಳೊಂದಿಗೆ ಬೆರೆಯುವುದಂತೆ.
ಈ ಕುರಿತು ಅವರೇ ಹೇಳುವಂತೆ ಸಹೋದ್ಯೋಗಿಗಳೊಂದಿಗಿನ ಸ್ನೇಹ ಹಾಗೂ ಇತರರೊಂದಿಗೆ ಬೆರೆಯುವುದು ಪ್ರಮುಖ ಕಾರಣಗಳಾಗಿವೆ. ಮಾತ್ರವಲ್ಲದೆ ಅಗತ್ಯ ಪರಿಕರಳು ಮತ್ತು ಸಾಧನಗಳ ಕೊರತೆ ಎರಡನೇ ಕಾರಣಗಳಾಗಿವೆ. ಸಮಸ್ಯೆಗಳೂ ಆಗಿವೆ. ಇನ್ನೂ ಕೆಲವರು ದೈನಂದಿನ ಕಚೇರಿ ದಿನಚರಿಯನ್ನು ತಪ್ಪಿಸಿಕೊಳ್ಳುತ್ತಿದ್ದಾರಂತೆ.
ಕೊರೊನಾ ವೈರಸ್ ಕಾರಣದಿಂದಾಗಿ ಮಾತ್ರ ವರ್ಕ್ ಫ್ರಮ್ ಹೋಮ್ ಬೆಸ್ಟ್ ಎನ್ನಿಸುತ್ತಿದೆ ಎಂದು ಸಮೀಕ್ಷೆಗೆ ಒಳಗಾದ ಕನಿಷ್ಠ ಶೇ.66ರಷ್ಟು ಜನ ತಿಳಿಸಿದ್ದಾರೆ ಎಂದು ಜೆಎಲ್‍ಎಲ್ ಸಂಸ್ಥೆ ತಿಳಿಸಿದೆ. ಏಷ್ಯಾ ಫೆಸಿಫಿಕ್ ಪ್ರದೇಶದ 5 ದೇಶಗಳ ಒಟ್ಟು 1,500 ಜನರ ಪ್ರತಿಕ್ರಿಯೆಯನ್ನಾಧರಿಸಿ ಸಮೀಕ್ಷೆ ನಡೆಸಲಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.