ನೆಲಮಂಗಲ: ಲಾಕ್‍ಡೌನ್ ವೇಳೆ ಮನೆಯಲ್ಲಿ ಇರುವ ಶೂಗಳನ್ನು ಮತ್ತೆ ಧರಿಸುವಾಗ ಸ್ವಲ್ಪ ಜಾಗರೂಕತೆಯಿಂದ ಇರುವುದು ಒಳ್ಳೆಯದು. ಯಾಕೆಂದರೆ ಅದರಲ್ಲಿ ಹಾವು ಇರುವ ಸಾಧ್ಯತೆಗಳು ಇರುತ್ತದೆ.
ಲಾಕ್‍ಡೌನ್ ವೇಳೆ ಧರಿಸದೇ ನಿಮ್ಮ ಮನೆಯ ಮುಂದೆ ಬಿಟ್ಟಿರುವ ಶೂಗಳನ್ನ ಒಮ್ಮೆ ಪರೀಕ್ಷಿಸಿ ಹಾಕಿಕೊಳ್ಳಬೇಕು. ಏಕೆಂದರೆ ಬೇಸಿಗೆ ಕಾಲವಾದ್ದರಿಂದ ಶೂ ಒಳಗೆ ಹಾವುಗಳು ಬಂದು ಆಶ್ರಯ ಪಡೆದಿರುವ ಸಾಧ್ಯತೆಗಳು ಹೆಚ್ಚಾಗಿ ಇದೆ. ಇದೇ ರೀತಿಯ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಮಾದವಾರ ಗ್ರಾಮದಲ್ಲಿ ನಡೆದಿದೆ.
Advertisement
Advertisement
ಗ್ರಾಮದ ನಿವಾಸಿ ಮನೋಹರ್ ಅವರ ಮನೆಯ ಹೊರಗಿದ್ದ ಶೂ ಒಳಗೆ ಸೇರಿಕೊಂಡಿದ್ದ ನಾಗರ ಹಾವುನ್ನು ಕಂಡು ಜನ ಭಯಭೀತರಾಗಿದ್ದಾರೆ. ನಂತರ ಸ್ನೇಕ್ ಶ್ರೀನಿವಾಸ್ ಅವರು ಸ್ಥಳಕ್ಕೆ ಬಂದು ಹಾವುವನ್ನು ರಕ್ಷಣೆ ಮಾಡಿದ್ದಾರೆ. ಹಾವಿನ ರಕ್ಷಣೆಯಿಂದ ಮನೆಯವರು ನಿಟ್ಟಿಸುರು ಬಿಟ್ಟಿದ್ದಾರೆ. ಲಾಕ್‍ಡೌನ್ ವೇಳೆ ಮನೆಯಲ್ಲಿರುವ ಜನರೇ ಒಮ್ಮೆ ನಿಮ್ಮ ವಸ್ತುಗಳನ್ನ ಪರೀಕ್ಷಿಸಿ ಜಾಗರೂಕತೆಯಿಂದ ಧರಿಸಬೇಕು ಎಂಬುದಕ್ಕೆ ಈ ವರದಿ ಸಾಕ್ಷಿಯಾಗಿದೆ.