ಮುಂಬೈ: ಬಾಲಿವುಡ್ ನಟ ಸೋನು ಸೂದ್ ಶೂಟಿಂಗ್ ಸೆಟ್‍ನಲ್ಲಿ ಅಡುಗೆಯ ಬಗ್ಗೆ ಪಾಠ ಮಾಡಿದ್ದಾರೆ. ವಿಶೇಷವೆಂದರೆ ಈ ವೇಳೆ ತಮಗೆ ತಾವೇ ಕ್ರಂಚಿಯಾಗಿರುವ ದೋಸೆ ತಯಾರಿಸಿಕೊಂಡು ಚಟ್ನಿ ಜೊತೆ ಸವಿದಿದ್ದಾರೆ.
ಸದ್ಯ ಈ ವೀಡಿಯೋವನ್ನು ಸೋನು ಸೂದ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸಿನಿಮಾ ಇಂಡಸ್ಟ್ರಿಗೆ ಪಾದರ್ಪಣೆ ಮಾಡುವ ಹೊಸಬರಿಗೆ ಸಂದೇಶ ನೀಡಿದ್ದಾರೆ.
ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಸೋನು ಸೂದ್ ಅಭಿಮಾನಿಗಳು, ಸೆಲೆಬ್ರೆಟಿಗಳು ಮತ್ತು ಸ್ನೇಹಿತರು ಕಮೆಂಟ್ ಮಾಡುತ್ತಿದ್ದಾರೆ. ಅದರಲ್ಲೂ ನಿರ್ಮಾಪಕಿ ಫರ್ಹಾ ಖಾನ್ ‘ಬನ್ನಿ ಮತ್ತೆ ಮನೆಗೆ'( ಆಜಾ ಗರ್ ಫಿರ್) ಎಂಬ ಕಮೆಂಟ್ ಎಲ್ಲರ ಗಮನ ಸೆಳೆಯುತ್ತಿದೆ.
View this post on Instagram
ಹ್ಯಾಪಿ ನ್ಯೂ ಇಯರ್ ಸಿನಿಮಾದಲ್ಲಿ ಸೋನು ಸೂದ್ ಹಾಗೂ ಫರ್ಹಾ ಖಾನ್ ಒಟ್ಟಿಗೆ ಕೆಲಸ ಮಾಡಿದ್ದರು. ನಿನ್ನೆ 12ನೇ ತರಗತಿ ಪರೀಕ್ಷೆಯನ್ನು ಮುಂದೂಡಿದ ಬಳಿಕ 10ನೇ ತರಗತಿ ಸಿಬಿಎಸ್‍ಸಿ ಪರೀಕ್ಷೆಯನ್ನು ಕೋವಿಡ್-19ನಿಂದ ರದ್ದುಗೊಳಿಸಿದಕ್ಕೆ ಟ್ವಿಟ್ಟರ್ ಖಾತೆಯಲ್ಲಿ ಅಭಿನಂದನೆ ತಿಳಿಸಿದ್ದರು.