ಬಿಗ್ ಬಾಸ್ ಮನೆಯಲ್ಲಿ ಅರವಿಂದ್ ಹಾಗೂ ದಿವ್ಯ ಉರುಡುಗ ಜೋಡಿ ಟಾಸ್ಕ್ ಆಡಿ ಗೆದ್ದಿದ್ದರು. ಅದಾದ ಬಳಿಕದಿಂದ ಈ ಜೋಡಿ ಬಗ್ಗೆ ಮನೆಮಂದಿಯೆಲ್ಲಾ ಮಾತನಾಡಿಕೊಳ್ಳಲು ಶುರುಮಾಡಿದ್ದಾರೆ. ಈ ಕುರಿತು ಗೀತಾ ಹಾಗೂ ಪ್ರಶಾಂತ್ ಸಂಬರ್ಗಿ ಕೂಡ ಭಾರೀ ಚರ್ಚೆಯನ್ನೇ ನಡೆಸಿದ್ದಾರೆ.
ಹೌದು. ಜೋಡಿ ಟಾಸ್ಕ್‍ನಲ್ಲಿ ಆಡಲು ದಿವ್ಯ ಉರುಡುಗ ಅವರು ಅರವಿಂದ್ ಅವರನ್ನು ಆಯ್ಕೆ ಮಾಡಿಕೊಂಡಿದ್ದರು. ಆ ಬಳಿಕದಿಂದ ಇಬ್ಬರೂ ಹೆಚ್ಚು ಜೊತೆಯಾಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ದಿವ್ಯ ಹಾಗೂ ಅರವಿಂದ್ ಮಧ್ಯೆ ಏನೋ ನಡೆಯುತ್ತಿದೆ ಅಂತ ಮನೆ ಮಂದಿ ಪಿಸು ಪಿಸು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನು ಈ ಹಿಂದೆ ದಿವ್ಯ ಉರುಡುಗ ಅವರು ಪ್ರಶಾಂತ್ ಸಂಬರ್ಗಿ ಜೊತೆ ಚೆನ್ನಾಗಿಯೇ ಇದ್ದರು. ಆದರೆ ಜೋಡಿ ಟಾಸ್ಕ್ ಬಂದ ಬಳಿಕ ದಿವ್ಯ ಉರುಡುಗ ವರ್ತನೆ ಬದಲಾಗಿದೆ ಎಂದು ನಿಧಿ ಸುಬ್ಬಯ್ಯ ಹಾಗೂ ಶುಭಾ ಪೂಂಜಾ ಮಾತನಾಡಿಕೊಂಡಿದ್ದಾರೆ.
ಇತ್ತ ಗೀತಾ ಹಾಗೂ ಸಂಬರ್ಗಿ ಕೂಡ ದಿವ್ಯ, ಅರವಿಂದ್ ಜೋಡಿ ಬಗ್ಗೆ ರಾತ್ರಿ ಚರ್ಚೆ ನಡೆಸಿದ್ದಾರೆ. ಇವರು ಲವ್ ಮಾಡ್ತಿದ್ದಾರೋ ಹೇಗೆ ಎಂದು ಗೀತಾ ಅವರು ದಿವ್ಯ ಬಳಿಯೇ ಹಲವು ಬಾರಿ ಪ್ರಶ್ನೆ ಮಾಡಿದ್ದರಂತೆ. ಆಗ ದಿವ್ಯ, ಜೋಡಿ ಟಾಸ್ಕ್ ಅಂತ ಒಟ್ಟಾಗಿ ಇದ್ದೇವೆ ಎಂದು ಉತ್ತರಿಸಿರುವುದಾಗಿ ಸಂಬರ್ಗಿ ಬಳಿ ಗೀತಾ ಹೇಳಿದ್ದಾರೆ.
ಅರವಿಂದ್ ಅವರು ದಿವ್ಯಾರನ್ನು ಲವ್ ಮಾಡುವ ವಿಚಾರದ ಬಗ್ಗೆ ಯೋಚನೆ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ಅವರು ಓಪನ್ ಆಗಿದ್ದಾರೆ ಎಂದು ಸಂಬರ್ಗಿ ಹೇಳಿದ್ದಾರೆ. ಸಂಬರ್ಗಿ ಮಾತಿಗೆ ದನಿಗೂಡಿಸಿದ ಗೀತಾ, ಶುಭಾ ಪೂಂಜಾ ಮದುವೆ ನಂತರದಲ್ಲಿ ಇನ್ನೊಂದು ಮದುವೆ ಊಟ ಸಿಗಬಹುದು ಅಂತ ಹೇಳಿದ್ದಾರೆ. ಅಷ್ಟೇ ಅಲ್ಲದೆ ಜೋಡಿ ಟಾಸ್ಕ್ ಮುಗಿದು 2 ದಿನವಾದರೂ ಇವರಿಬ್ಬರು ಒಟ್ಟಾಗಿದ್ದಾರೆ ಅಂತ ಹೇಳಿಕೊಂಡು ಗೀತಾ, ಪ್ರಶಾಂತ್ ನಕ್ಕಿದ್ದಾರೆ. ಜೊತೆಗೆ ಒಳ್ಳೆಯದಾದರೆ ಆಗಲಿ, ನಾವು ಓವರ್ ಆಗಿ ಯೋಚನೆ ಮಾಡುತ್ತಿದ್ದೆವೆ ಅಂತ ಗೀತಾ ಅವರನ್ನೇ ಅವರು ಪ್ರಶ್ನೆ ಮಾಡಿಕೊಂಡಿದ್ದಾರೆ.