ಬಿಗ್‍ಬಾಸ್ ಪ್ರತಿವಾರ ಒಂದು ಆಟವನ್ನು ಕೊಟ್ಟು ಸ್ಪರ್ಧಿಗಳ ನಡುವೆ ನಡೆಯುವ ಸ್ಪರ್ಧೆಯನ್ನು ನೋಡುತ್ತಿರುತ್ತಾರೆ. ಪ್ರತಿ ಬಾರಿ ಮನೆಯಲ್ಲಿ ಗೇಮ್, ಜಗಳ ನೋಡಿ ಬೇಸರವಾದ ಬಿಗ್‍ಬಾಸ್ ವೀಕ್ಷಕರಿಗೆ ಇಂದು ನೀಡಿರುವ ಚಟುವಟಿಕೆ ಮಾತ್ರ ಸಖತ್ ಮಜಾವನ್ನು ಕೊಟ್ಟಿದೆ.
ಬಿಗ್‍ಬಾಸ್‍ಮನೆಯಲ್ಲಿ ಕ್ಯೂಟ್ ಸ್ಪರ್ಧಿಯಾಗಿರುವ ಶುಭಾ, ಮಂಜುನನ್ನು ಹೆಚ್ಚಾಗಿ ಗೋಳಾಡಿಸುತ್ತಾ ಮಜಾ ತೆಗೆದುಕೊಳ್ಳುತ್ತಿರುತ್ತಾರೆ. ನಾವು ಈ ಹಿಂದೆ ಹಲವು ಸನ್ನಿವೇಶಗಳನ್ನು ನೋಡಿದ್ದೇವೆ. ಆದರೆ ಈ ಬಾರಿ ಮಂಜು ಮತ್ತು ಶುಭಾ ಅವರ ಕಿತಾಪತಿ ಮಾತ್ರ ಸಖತ್ ಕಾಮಿಡಿಯಾಗಿದೆ. ಇದನ್ನೂ ಓದಿ: ಮೂವರು ಅಡಿಕೆ ಕಳ್ಳರ ಬಂಧನ- 1,29,500 ರೂ. ಮೌಲ್ಯದ ಅಡಿಕೆ ವಶ
View this post on Instagram
ಬಿಗ್‍ಬಾಸ್ 2 ಗುಂಪುಗಳನ್ನು ಮಾಡಿದ್ದಾರೆ. ವಿಜಯಯಾತ್ರೆ, ನಿಂಗೈತೆ ಎಂದು 2 ತಂಡಗಳನ್ನು ಮಾಡಿದ್ದಾರೆ. ಶುಭಾ ವಿಜಯಯಾತ್ರೆ ತಂಡದ ಸದಸ್ಯರಾಗಿದ್ದಾರೆ. ಮಂಜು ನಿಂಗೈತೆ ತಂಡದ ಸದಸ್ಯರಾಗಿದ್ದಾರೆ. ಈ ವೇಳೆ ಬಿಗ್‍ಬಾಸ್ ಒಂದು ಟಾಸ್ಕ್ ನೀಡಿದ್ದಾರೆ. ವಿಜಯಯಾತ್ರೆ ತಂಡದ ಸದಸ್ಯ ಮನೆಯಲ್ಲಿರುವ ಬಾಗಿಲಿನ ಮೂಲಕವಾಗಿ ತೆರಳುವಾಗ ನಿಂಗೈತೆ ತಂಡದ ಸದಸ್ಯರು ಬಾಗಿಲನ್ನು ತೆರೆಯಬೇಕು ಎಂದು ಹೇಳಿದ್ದಾರೆ. ಇದನ್ನು ಲಾಭವಾಗಿ ಪಡೆದ ಶುಭಾ ಮಂಜುಗೆ ಇನ್ನಷ್ಟು ಕ್ಯೂಟ್ ಆಗಿ ಕಾಟ ಕೊಡಲು ಪ್ರಾರಂಭಿಸಿದ್ದಾರೆ. ಮಂಜು ನಾನು ಕ್ಯಾಪ್ಟನ್ ರೂಮ್ ಹೋಗಬೇಕು, ಬೆಡ್‍ರೂಮ್ ಹೋಗಬೇಕು ಎಂದು ಹೀಗೆ ಶುಭಾ ಮಂಜುಗೆ ತರತರವಾಗಿ ಕಾಟ ಕೊಟ್ಟು ತಮಾಷೆ ಮಾಡಿದ್ದಾರೆ. ಇದನ್ನು ಗಮನಿಸಿದ ಅರವಿಂದ್ ನಿನಗೆ ಮುಂದೆ ತೊಂದರೆಯಾಗಬಹುದು ಎಂದು ಶುಭಾಗೆ ಎಚ್ಚರಿಕೆಯನ್ನು ನೀಡಿದ್ದರು. ಶುಭಾ ಮಾತ್ರ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಮಂಜು ಕೈಯಲ್ಲಿ ಬಾಗಿಲು ತೆರೆಸುತ್ತಾ ತಮಾಷೆ ಮಾಡಿದ್ದಾರೆ. ಇದನ್ನೂ ಓದಿ: ಜನಸಂಖ್ಯೆ ನಿಯಂತ್ರಣಕ್ಕೆ ಉತ್ತರಪ್ರದೇಶ ತಂದಿರುವ ಕ್ರಮ ಸ್ವಾಗತಿಸುತ್ತೇನೆ: ಈಶ್ವರಪ್ಪ
ಬಿಗ್‍ಬಾಸ್ ಸ್ಪಲ್ಪ ಸಮಯದ ನಂತರ ಒಂದು ಸೂಚನೆಯನ್ನು ಕಳುಹಿಸುತ್ತಾರೆ. ವಿಜುಯಾತ್ರೆ ತಂಡದ ಸದಸ್ಯರು ಅಂಬೆಗಾಲಿನಲ್ಲಿ ಹೋಗಬೇಕು ನಡೆದಾಡುವಂತೆ ಇಲ್ಲ ಎಂದು ಸೂಚನೆ ನೀಡಿರುವುದನ್ನು ಮಂಜು ತಿಳಿಸುತ್ತಿದ್ದಂತೆ ಮನೆಮಂದಿ ಜೋರಾಗಿ ನಕ್ಕಿದ್ದಾರೆ. ಆಗ ಶುಭಾ ಅಂಬೆಗಾಲಿನಲ್ಲಿ ಬರುತ್ತಿರುವುದನ್ನು ನೋಡಿದ ಮಂಜು ಬಾ.. ಈಗ ನಿನಗೆ ಬಾಗಿಲು ತೆರೆಯುತ್ತೇನೆ. ನನ್ನ ಎದರು ಹಾಕಿಕೊಂಡವರು ತಲೆಬಗ್ಗಿಸಿ ಹೀಗೆ ಒಡಾಡಬೇಕು ಎಂದು ಹೇಳುತ್ತಾ ಮಂಜು ಶುಭಾಗೆ ಕೊಟ್ಟಿರುವ ಕಾಟವನ್ನು ನೆನೆಪಿಸಿಕೊಂಡು ತಮಾಷೆ ಮಾಡುತ್ತಿದ್ದಾರೆ. ಮಂಜು-ಶುಭಾ ಈ ಜುಗಲ್ ಬಂದಿ ಮಾತ್ರ ಸಖತ್ ಮಜಾವನ್ನು ಕೊಟ್ಟಿದೆ.