ಬೆಂಗಳೂರು/ ವಿಜಯಪುರ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಕಾನೂನಾತ್ಮಕವಾಗಿ ಇದೀಗ ಮತ್ತಷ್ಟು ರೋಚಕತೆ ಪಡೆಯುತ್ತಿದ್ದು ಇಂದು ಯುವತಿಗೆ ನೋಟಿಸ್ ಜಾರಿ ಮಾಡಿ ನಾಳೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸೂಚಿಸಿದ್ದಾರೆ.
ಶನಿವಾರ ರಮೇಶ್ ಜಾರಕಿಹೊಳಿ ದೂರು ದಾಖಲಿಸುತ್ತಿದ್ದಂತೆ ಯುವತಿ ಕೂಡ ವಿಡಿಯೋ ಮೂಲಕ ಪ್ರತ್ಯಕ್ಷಳಾಗಿದ್ದಳು. ಕೆಲಸದ ಆಮಿಷ ಒಡ್ಡಿ ರಮೇಶ್ ಜಾರಕಿಹೊಳಿ ಅವರೇ ಮೋಸ ಮಾಡಿದ್ದಾರೆ ಅಂತ ಆರೋಪಿಸಿದ್ದಳು.
Advertisement
Advertisement
ಈ ಬೆನ್ನಲ್ಲೇ, ಕಬ್ಬನ್ ಪಾರ್ಕ್ ಪೊಲೀಸರು ಯುವತಿಗೆ ನೋಟಿಸ್ ನೀಡಿದ್ದಾರೆ. ಶೀಘ್ರವೇ ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ಸೂಚಿಸಿ, ಯುವತಿಯ ಮನೆ ಎನ್ನಲಾದ ವಿಜಯಪುರದ ಗ್ರಾಮವೊಂದರ ಮನೆಗೆ ನೋಟಿಸ್ ನೀಡಿದ್ದಾರೆ. ಜೊತೆಗೆ, ಇ-ಮೇಲ್ ಮೂಲಕವೂ ನೋಟಿಸ್ ಕೊಟ್ಟಿದ್ದಾರೆ.
Advertisement
ವಿಜಯಪುರದ ಮನೆ, ಬೆಂಗಳೂರಿನ ಪಿಜಿ, ಆಕೆಯ ಸ್ನೇಹಿತರಿಗೆ ನೋಟಿಸ್ ನೀಡಲಾಗಿದೆ. ಇ-ಮೇಲ್ ಮೂಲಕವೂ ಯುವತಿಗೆ ನೋಟಿಸ್ ನೀಡಿದ್ದು, ಇ-ಮೇಲ್ ರಿಸಿವ್ ಆಗಿರುವ ಬಗ್ಗೆ ಪೊಲೀಸರಿಗೆ ಖಾತರಿ ಸಿಕ್ಕಿದೆ.