Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Automobile

ಶೀಘ್ರವೇ ಬರಲಿದೆ ಗುಜುರಿ ನೀತಿ – ಉದ್ದೇಶ ಏನು? ವಾಹನದ ದರ ನಿಗದಿ ಹೇಗೆ?

Public TV
Last updated: September 6, 2020 4:49 pm
Public TV
Share
4 Min Read
Vehicle scrappage policy Automobile 1
SHARE

ಮುಂಬೈ: ದೇಶದ ಅಟೋಮೊಬೈಲ್‌ ಉದ್ಯಮದ ಉತ್ತೇಜನಕ್ಕೆ ಕೇಂದ್ರ ಸರ್ಕಾರ ಶೀಘ್ರವೇ ‘ಗುಜುರಿ ನೀತಿʼಯನ್ನು ಜಾರಿಗೆ ತರಲು ಮಂದಾಗುತ್ತಿದೆ.

ವಾಹನ ಕ್ಷೇತ್ರ ಸಂಕಷ್ಟದಲ್ಲಿದೆ ಎಂಬುದು ಸರ್ಕಾರಕ್ಕೆ ತಿಳಿದಿದೆ. ಕಳೆದ ಒಂದೂವರೆ ವರ್ಷಗಳಿಂದ ನಾನು ಈ ವಿಚಾರದ ಬಗ್ಗೆ ಮಾತನಾಡುತ್ತಿದ್ದೇನೆ. ಈಗ ಇದು ಅಂತಿಮಗೊಂಡಿದ್ದು ಕೊನೆಯ ಹಂತದಲ್ಲಿದೆ. ಈ ತಿಂಗಳ ಅಂತ್ಯಕ್ಕೆ ಜಾರಿಯಾಗುವ ವಿಶ್ವಾಸವಿದೆ ಎಂದು ಕೇಂದ್ರ ಸಾರಿಗೆ ಖಾತೆಯ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.

DvL7cVFVAAUG2Q8

 

ಅಟೋಮೋಟಿವ್ ಕಾಂಪೋನೆಂಟ್ ತಯಾರಕರ ಸಂಘ ಆಯೋಜಿಸಿದ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಗಡ್ಕರಿ ಮಾಧ್ಯಮಗಳ ಜೊತೆ ‘ಗುಜುರಿ ನೀತಿ’ ಜಾರಿಯ ಬಗ್ಗೆ ಮಾತನಾಡಿದರು. ಕಳೆದ ಒಂದೂವರೆ ವರ್ಷದಿಂದ ಈ ಗುಜುರಿ ನೀತಿಯ ಬಗ್ಗೆ ಹೇಳುತ್ತಲೇ ಇದ್ದೇನೆ. ಈಗ ಅದು ಅಂತಿಮಗೊಂಡಿದೆ. ಇದರಿಂದ ಭಾರತೀಯ ಉತ್ಪಾದಕರಿಗೆ ನೆರವಾಗಲಿದೆ. ತಡವಾಗಿ ನೀತಿ ಜಾರಿಯಾಗುತ್ತಿರುವುದಕ್ಕೆ ನಾನು ಕ್ಷಮೆ ಕೋರುತ್ತೇನೆ ಎಂದು ತಿಳಿಸಿದರು.

ಮುಂದಿನ 5 ವರ್ಷದಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಅಟೋಮೊಬೈಲ್‍ ಕ್ಷೇತ್ರದ ಹಬ್‍ ಆಗಿ ಪರಿವರ್ತನೆಯಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಏನು ಮಾಡಬೇಕೋ ಅದನ್ನು ಮಾಡುತ್ತದೆ. ಕಂಪನಿಗಳು ವಿದೇಶದ ಆಮದು ಅವಲಂಬನೆ ಕಡಿಮೆ ಮಾಡಬೇಕು. ಮುಂದಿನ ದಿನಗಳಲ್ಲಿ ಆಮದು ಸುಂಕವನ್ನ ಸರ್ಕಾರ ಹೆಚ್ಚಿಸಲಿದೆ ಎಂದು ಈ ವೇಳೆ ಹೇಳಿದರು.

ಹೊಸ ಗುಜುರಿ ನೀತಿ ಜಾರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಈ ನೀತಿಯ ಉದ್ದೇಶ ಏನು? ಯಾಕೆ ನರವಾಗಲಿದೆ? ಈ ನೀತಿ ವಿರೋಧಿಸುತ್ತಿರುವ ಮಂದಿ ಹೇಳುವುದು ಏನು? ಇತ್ಯಾದಿ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

Vehicle scrappage policy Automobile 1

ಏನಿದು ನೀತಿ?
ಹಳೆಯ ವಾಹನಗಳನ್ನು ಗುಜುರಿಗೆ ಹಾಕಿದರೆ ಅದಕ್ಕೆ ಹಣಕಾಸಿನ ಸಹಾಯದ ಜೊತೆಗೆ ಹೊಸ ವಾಹನದ ಖರೀದಿಗೆ ಉತ್ತೇಜನ ನೀಡುವುದು ಈ ನೀತಿಯ ಮುಖ್ಯ ಉದ್ದೇಶ. ಕಳೆದ ಎರಡು ವರ್ಷದಿಂದ ಅಟೋಮೊಬೈಲ್ ಕ್ಷೇತ್ರದ ಬೆಳವಣಿಗೆ ಕಡಿಮೆಯಾಗುತ್ತಿದೆ. ಹೀಗಾಗಿ ವಿದೇಶಗಳಲ್ಲಿ ಇರುವಂತೆ ಭಾರತದಲ್ಲೂ ಗುಜುರಿ ನೀತಿ ಜಾರಿ ಮಾಡುವಂತೆ ವಾಹನ ತಯಾರಕ ಕಂಪನಿಗಳು ಸರ್ಕಾರವನ್ನು ಒತ್ತಾಯಿಸಿದ್ದವು.

Vehicle scrappage policy Automobile 2

ದರ ನಿಗದಿ ಹೇಗೆ?
ಎಷ್ಟು ವರ್ಷದ ವಾಹನಗಳನ್ನು ಗುಜುರಿಗೆ ಹಾಕಬೇಕಾಗುತ್ತದೆ ಎಂಬುದು ಇನ್ನೂ ಅಂತಿಮಗೊಂಡಿಲ್ಲ. ಈಗಾಗಲೇ ಪ್ರಕಟವಾಗಿರುವಂತೆ ಈ ನೀತಿ ಜಾರಿಯಾದರೆ 15 ವರ್ಷಕ್ಕಿಂತ ಹಳೆಯ ವಾಹನಗಳನ್ನು ಕಡ್ಡಾಯವಾಗಿ ಗುಜುರಿಗೆ ಹಾಕಬೇಕಾಗುತ್ತದೆ. ವಾಹನದ ಬಿಡಿಭಾಗಗಳ ಕಂಡೀಷನ್‌ ನೋಡಿಕೊಂಡು ಸರ್ಕಾರ ವಾಹನವನ್ನು ಗುಜುರಿಗೆ ಹಾಕುವ ಮಾಲೀಕರಿಗೆ ಹಣ ನೀಡಲಿದೆ.

Vehicle scrappage policy Automobile 3

ಗುಜುರಿ ನೀತಿಯ ಲಾಭ ಏನು?
15 ವರ್ಷಕ್ಕಿಂತ ಹೆಚ್ಚಿನ ವರ್ಷದ ಲಕ್ಷಾಂತರ ವಾಹನಗಳು ಸಂಚರಿಸುತ್ತಿವೆ. ಇವುಗಳನ್ನು ಗುಜುರಿಗೆ ಹಾಕಿದರೆ ವಾಯ ಮಾಲಿನ್ಯ ಹಾಗೂ ಶಬ್ದ ಮಾಲಿನ್ಯ ಕಡಿಮೆಯಾಗಲಿದೆ. ಹಳೇ ವಾಹನಗಳು ಗುಜುರಿ ಸೇರುವುದರಿಂದ ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚಾಗಲಿದೆ. ಇದರಿಂದ ಆಟೋಮೊಬೈಲ್ ಕ್ಷೇತ್ರಕ್ಕೆ ಉತ್ತೇಜನ ನೀಡಿದಂತಾಗುತ್ತದೆ.

Vehicle scrappage policy Automobile 5

ವಿರೋಧ ಯಾಕೆ?
ಮಧ್ಯಮ ವರ್ಗದವರು ಖರೀದಿಸಿದ ವಾಹನ ಹಳೆಯಾದರೂ ಈಗಲೂ ಉತ್ತಮ ಸ್ಥಿತಿಯಲ್ಲಿದೆ. ಹೀಗಿರುವಾಗ ಈ ವಾಹನಗಳನ್ನು ಗುಜುರಿಗೆ ಹಾಕುವುದು ಎಷ್ಟು ಸರಿ ಎಂಬ ಪ್ರಶ್ನೆಯೂ ಎದ್ದಿದೆ. ಸದ್ಯದ ಸಂಚಾರಿ ನಿಯಮಗಳ ಪ್ರಕಾರ ಪ್ರತಿ ವಾಹನ 6 ತಿಂಗಳಿಗೊಮ್ಮೆ ಕಡ್ಡಾಯವಾಗಿ ಎಮಿಶನ್ ಟೆಸ್ಟ್ ಮಾಡಿಸಬೇಕು. ಎಮಿಶನ್‌ ಟೆಸ್ಟ್‌ನಲ್ಲಿ ಪಾಸಾದರೂ 15 ವರ್ಷ ಆಗಿದೆ ಎಂಬ ಕಾರಣಕ್ಕೆ ಅದನ್ನ ಗುಜುರಿಗೆ ಹಾಕುವುದು ಎಷ್ಟು ಸರಿ? ಹಾಗಾದರೆ ಎಮಿಶನ್‌ ಟೆಸ್ಟ್‌ ಸರಿ ಇಲ್ಲವೇ ಎಂಬ ಮತ್ತೊಂದು ಪ್ರಶ್ನೆಯೂ ಎದ್ದಿದೆ.

ಈಗ 10 ವರ್ಷ ಮೇಲ್ಪಟ್ಟ ವಾಹನಗಳಿಗೆ ಫಿಟ್ನೆಸ್ ಸರ್ಟಿಫಿಕೇಟ್ ಮಾಡಿಸಬೇಕಾಗುತ್ತದೆ. ಗುಜುರಿ ನೀತಿ ಜಾರಿಗೆ ಬಂದರೆ ಫಿಟ್ನೆಸ್ ಸರ್ಟಿಫಿಕೇಟ್ ಅವಶ್ಯಕತೆ ಏನು ಎಂಬ ಮೂರನೇ ಪ್ರಶ್ನೆಯೂ ಎದ್ದಿದೆ. ಈ ಎಲ್ಲ ಪ್ರಶ್ನೆಗಳಿಗೆ ಅಂತಿಮವಾಗಿ ಬರಲಿರುವ ನೀತಿಯಲ್ಲಿ ಉತ್ತರ ಸಿಗುವ ಸಾಧ್ಯತೆಯಿದೆ.

Vehicle scrappage policy Automobile 6

ಬಿಡಿ ಭಾಗಗಳು ಮರುಬಳಕೆ:
ಗುಜರಿ ನೀತಿ ಜಾರಿಗೆ ಬಂದರೆ 2020-21ರ ಹಣಕಾಸು ವರ್ಷದಲ್ಲಿ 90 ಲಕ್ಷ ವಾಹನಗಳು, 2025ರೊಳಗೆ 2.8 ಕೋಟಿ ವಾಹನಗಳು ಸಂಚಾರ ನಿಲ್ಲಿಸಬಹುದು ಎಂದು ಅಂದಾಜಿಸಲಾಗಿದೆ. ಈ ಹಳೆಯ ವಾಹನಗಳ ಬಿಡಿ ಉಪಕರಣ ಗಳನ್ನು ಮರುಬಳಕೆ ಮಾಡಲು ಅಗತ್ಯ ಘಟಕಗಳಿಗೆ ಉತ್ತೇಜನ ನೀಡಲಾಗುತ್ತದೆ. ಇದನ್ನೂ ಓದಿ: ಇಂದಿನಿಂದ ನೀವು ಕಡಿಮೆ ಬೆಲೆಗೆ‌ ಕಾರು, ಬೈಕ್ ಖರೀದಿಸಬಹುದು

car automobile showroom 1

ತಡವಾಗಿದ್ದು ಯಾಕೆ?
ಕಳೆದ ಒಂದೂವರೆ ವರ್ಷಗಳಿಂದ ನಿತಿನ್‌ ಗಡ್ಕರಿ ಈ ಬಗ್ಗೆ ಮಾತನಾಡುತ್ತಿದ್ದರು. ಆದರೆ ಆರಂಭದಲ್ಲಿ ಹಣಕಾಸು ಸಚಿವಾಲಯದಿಂದ ಗ್ರೀನ್ ಸಿಗ್ನಲ್ ಸಿಕ್ಕಿರಲಿಲ್ಲ. ಈ ವರ್ಷದ ಆರಂಭದಲ್ಲಿ ಈ ನೀತಿ ಜಾರಿಗೆ ತರಲು ಸರ್ಕಾರ ಮುಂದಾಗಿತ್ತು. ಆದರೆ ಕೋವಿಡ್‌ 19 ಲಾಕ್‌ಡೌನ್‌ನಿಂದಾಗಿ ಮುಂದಕ್ಕೆ ಹೋಗಿತ್ತು. ಸದ್ಯ ಕೇಂದ್ರ ಸರ್ಕಾರದ ‘ಆತ್ಮನಿರ್ಭರ್‌ ಭಾರತʼ ಜಪವನ್ನು ಜಪಿಸುತ್ತಿರುವ ಸಮಯದಲ್ಲಿ ಈ ಗುಜುರಿ ನೀತಿ ಜಾರಿ ಮಾಡಲು ಸಿದ್ಧತೆ ಮಾಡುತ್ತಿದೆ.

maruti car plant automobile

ಹಲವು ದೇಶಗಳಲ್ಲಿ ಜಾರಿ
ಆರ್ಥಿಕ ಹಿಂಜರಿತದಿಂದ ಚೇತರಿಸಿದ ಬಳಿಕ 2008-09ರಲ್ಲಿ ಹಲವು ದೇಶಗಳು ಈ ಗುಜುರಿ ನೀತಿಯನ್ನು ಜಾರಿ ಮಾಡಿವೆ. ಅಮೆರಿಕ, ಆಸ್ಟ್ರೀಯಾ, ಕೆನಡಾ, ಚೀನಾ, ಜರ್ಮನಿ, ಜಪಾನ್‌, ಇಂಗ್ಲೆಂಡ್‌ ಸೇರಿದಂತೆ ಹಲವು ಯುರೋಪಿಯನ್‌ ದೇಶಗಳಲ್ಲಿ ಈ ನೀತಿ ಈಗಾಗಲೇ ಜಾರಿಯಾಗಿವೆ. ಜರ್ಮನಿಯಲ್ಲಿ 9 ವರ್ಷ ಮೀರಿದ ವಾಹನಗಳಿಗೆ 2,500 ಯುರೋ(ಅಂದಾಜು2.16 ಲಕ್ಷ ರೂ.), ಇಟಲಿಯಲ್ಲಿ 10 ವರ್ಷ ಮೀರಿದ ವಾಹನಗಳಿಗೆ 3,500 ಯುರೋ( ಅಂದಾಜು 3.03 ಲಕ್ಷ ರೂ.) ನೀಡುತ್ತದೆ.

ಹೊಸ ನೀತಿಯ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಕಮೆಂಟ್‌ ಮಾಡಿ ತಿಳಿಸಿ

maruti automobile

TAGGED:AutomobieCovid 19economyindianitin gadkariVehicle scrappage policyಅಟೋಮೊಬೈಲ್ಆತ್ಮ ನಿರ್ಭರ ಭಾರತಕೋವಿಡ್ 19ಗುಜುರಿ ನೀತಿನಿತಿನ್ ಗಡ್ಕರಿಭಾರತವಾಹನ
Share This Article
Facebook Whatsapp Whatsapp Telegram

Cinema Updates

namratha gowda
ರಾಜಕಾರಣಿಗಳ ಜೊತೆ ಡೇಟಿಂಗ್‌ಗೆ ಬಾ – ಟಾರ್ಚರ್ ಕೊಟ್ಟವನ ಚಳಿ ಬಿಡಿಸಿದ ನಮ್ರತಾ
12 hours ago
aamir khan
‘ಸಿತಾರೆ ಜಮೀನ್ ಪರ್’ ಬಾಯ್‌ಕಾಟ್‌ಗೆ ಆಗ್ರಹ- ಆಮೀರ್ ಖಾನ್ ವಿರುದ್ಧ ತಿರುಗಿಬಿದ್ದ ನೆಟ್ಟಿಗರು
13 hours ago
keerthy suresh 2
ಮದುವೆ ಬಳಿಕ 2ನೇ ಬಾಲಿವುಡ್ ಚಿತ್ರಕ್ಕೆ ಕೀರ್ತಿ ಸುರೇಶ್ ಗ್ರೀನ್ ಸಿಗ್ನಲ್
15 hours ago
ayush upendra
ಉಪೇಂದ್ರ ಪುತ್ರ ಚಿತ್ರರಂಗಕ್ಕೆ ಎಂಟ್ರಿ- ‘ಮೊದಲಾ ಸಲ’ ಖ್ಯಾತಿಯ ನಿರ್ದೇಶಕ ಆ್ಯಕ್ಷನ್ ಕಟ್
16 hours ago

You Might Also Like

Magaluru Suhas Shetty Case
Crime

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ – ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳು ಅರೆಸ್ಟ್

Public TV
By Public TV
6 hours ago
bharat electronics Akashteer
Latest

ಪಾಕ್‌ ಕ್ಷಿಪಣಿಯನ್ನು ಧ್ವಂಸಗೊಳಿಸಿದ್ದ AI ಆಧಾರಿತ ಆಕಾಶ್‌ತೀರ್

Public TV
By Public TV
6 hours ago
Davangere Accident
Crime

ಬೈಕ್‌ಗೆ ಡಿಕ್ಕಿ ಹೊಡೆದ ಕಾರು – ಇಬ್ಬರು ಯುವತಿಯರು ಸಾವು

Public TV
By Public TV
6 hours ago
ಚೀನಿ HQ-9 ವಾಯು ರಕ್ಷಣಾ ವ್ಯವಸ್ಥೆ
Latest

ಚೀನಿ ಏರ್‌ ಡಿಫೆನ್ಸ್‌ ಜಾಮ್‌ ಮಾಡಿ 23 ನಿಮಿಷದಲ್ಲಿ ಮುಗಿಯಿತು ಕಾರ್ಯಾಚರಣೆ – ಭಾರತದ ದಾಳಿಯ ರೋಚಕ ಕಥೆ ಓದಿ

Public TV
By Public TV
6 hours ago
Madikeri Death Sampath 1 1
Crime

Madikeri | ನಾಲ್ಕೈದು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

Public TV
By Public TV
7 hours ago
harish injadi kukke subrahmanya temple
Dakshina Kannada

ನಾನು ರೌಡಿಶೀಟರ್ ಅಲ್ಲ, ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಯಾವುದೇ ಬಾಕಿ ಇರಿಸಿಕೊಂಡಿಲ್ಲ: ಹರೀಶ್ ಇಂಜಾಡಿ ಸ್ಪಷ್ಟನೆ

Public TV
By Public TV
7 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?