ಬೆಂಗಳೂರು: ಶಿವರಾತ್ರಿ ಹಬ್ಬದ ಸಂಭ್ರಮಾಚರಣೆಯ ಪ್ರಯುಕ್ತ ಸ್ಯಾಂಡಲ್‍ವುಡ್ ನಟಿಮಣಿ ರಾಗಿಣಿ ದ್ವಿವೇದಿ ಅಭಿಮಾನಿಗಳೊಂದಿಗೆ 2 ಸಂತೋಷದ ವಿಚಾರವನ್ನು ಹಂಚಿಕೊಂಡಿದ್ದಾರೆ.
ಜೀವನದಲ್ಲಿ ಎಲ್ಲಾ ತರ ಸಮಯ ಮನೆಗ ಬರುತ್ತದೆ, ಒಳ್ಳೆಯ ಸಮಯ, ಕೆಟ್ಟ ಸಮಯ ಹಾಗೂ ನಮ್ಮನ್ನು ಪರೀಕ್ಷೆ ಮಾಡುವ ಎಷ್ಟೋ ಸಮಯವು ಬರುತ್ತದೆ. ಇಂದು ತುಂಬಾ ಸಂತೋಷದ ದಿನವಾಗಿದೆ. ನನ್ನನ್ನು ಕನ್ನಡದ ಅಭಿಮಾನಿಗಳು ಒಪ್ಪಿಕೊಂಡು ಹಾಗೂ ನನ್ನ ಸಿನಿ ಜರ್ನಿಯನ್ನು ಆರಂಭಿಸಿ 10 ವರ್ಷವಾಗಿದೆ. ಕೆಂಪೇಗೌಡ ಸಿನಿಮಾ ಸಿನಿಮಾ ತೆರೆ ಮೇಲೆ ಬಂದು 10 ವರ್ಷವಾಗಿದೆ ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ.
View this post on Instagram
ಸುದೀಪ್ ನೆನಪು:
ಕೆಂಪೇಗೌಡ ಜರ್ನಿ ನನಗೆ ಮರೆಯಲಾಗದ ನೆನಪು. ಶೂಟಿಂಗ್ ನಲ್ಲಿ ಕಳೆದ ಒಂದೊಂದು ದಿನನವು ನನಗೆ ಇಂದು ನೆನಪಿದೆ. ನಿಮ್ಮಿಂದ ನಾನು ತುಂಬಾ ಕಲಿತಿದ್ದೇನೆ. ಎಷ್ಟೊಂದು ಪ್ರೀತಿ, ಸಹಕಾರವನ್ನು ನನಗೆ ಕೊಟ್ಟಿದ್ದೀರಿ. ನನ್ನ ಸಿನಿಮಾ ಜರ್ನಿಯನ್ನು ನಿಮ್ಮೊಂದಿಗೆ ನಾನು ಪ್ರಾರಂಭಿಸಿದ್ದೇನೆ. ನನಗೆ ತುಂಬಾ ಪ್ರೋತ್ಸಾಹ ಕೊಟ್ಟಿದ್ದೀರಿ ಎಂದು ಹೇಳಿ ನೆನಪು ಮಾಡಿಕೊಂಡಿದ್ದಾರೆ.
View this post on Instagram
ನಾನು ನಿಮ್ಮನ್ನು ನೋಡಿ ನಟನೆಯನ್ನು ಕಲಿತಿದ್ದೇನೆ. ಕೆಂಪೇಗೌಡ ಸಿನಿನಿಮಾದಿಂದ ಎಷ್ಟೊಂದು ಜನರು ಜೀವನವನ್ನು ಕಟ್ಟಿಕೊಂಡಿದ್ದಾರೆ. ನನಗೆ ಮೊದಲು ಸಿನಿಮಾ ರಂಗಕ್ಕೆ ಬಂದಾಗ ಕನ್ನಡ ಸರಿಯಾಗಿ ಬರುತ್ತಿರಲಿಲ್ಲ. ನನಗೆ ಎಷ್ಟೊಂದು ಒಳ್ಳೆಯ ಪಾತ್ರಕೊಟ್ಟು ನನ್ನ ಸಿನಿಮಾರಂಗಕ್ಕೆ ಪರಿಚಯ ಮಾಡಿಕೊಟ್ಟಿದ್ದಿರಾ. ಸುದೀಪ್ ಅವರು ಪ್ರತಿಯೊಬ್ಬರಿಗೂ ಸಪೋರ್ಟ್ ಮಾಡುತ್ತಾರೆ. ನನ್ನ ಕಡೆಯಿಂದ ಕಿಚ್ಚಾ ಸುದೀಪ್ ಅವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.
View this post on Instagram
ಯೂಟ್ಯೂಬ್ ಚಾನೆಲ್ ಆರಂಭ
ನಟಿ ಜೈಲಿನಿಂದ ಹೊರ ಬಂದ ನಂತರ ಸಖತ್ ಸಕ್ರಿಯವಾಗಿರುವ ನಟಿ ರಾಗಿಣಿ ಮಹಿಳಾ ದಿನದಂದು ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ. ಇನ್ನು ಮುಂದೆ ತಮ್ಮ ವಿಡಿಯೋಗಳನ್ನು ಅಲ್ಲೇ ಪೋಸ್ಟ್ ಮಾಡುವುದಾಗಿಯೂ ಹೇಳಿಕೊಂಡಿದ್ದಾರೆ. ನಿನ್ನೆ ಶಿವರಾತ್ರಿ ಹಬ್ಬದಂದು ಮಾಡಿದ ವಿಶೇಷ ಪೂಜೆಯ ವಿಡಿಯೋವನ್ನು ತಮ್ಮ ಯೂಟ್ಯೂಬ್ ಚಾನೆಲ್‍ನಲ್ಲಿ ಪೋಸ್ಟ್ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಇನ್ನು ಮಂದಿನ ದಿನಗಳಲ್ಲಿ ರಾಗಿಣಿಯವರನ್ನು ನಾವು ಯೂಟ್ಯೂಬ್ ಚಾನಲ್‍ನಲ್ಲಿ ನೋಡಬಹುದಾಗಿದೆ. ಕುಟುಂಬದೊಂದಿಗೆ ಶಿವರಾತ್ರಿ ಹಬ್ಬವನ್ನು ರಾಗಿಣಿ ಸಂಭ್ರಮದಿಂದ ಆಚರಿಸಿದ್ದಾರೆ. ಕೆಲವು ಫೊಟೋಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.
ತಮ್ಮ ಇನ್‍ಸ್ಟಾಗ್ರಾಂನಲ್ಲಿ ಅಡುಗೆ ಮಾಡುವ ಹಾಗೂ ಇತರೆ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದ ನಟಿ ಈಗ ವಿಡಿಯೋಗಳನ್ನು ತಮ್ಮ ಯೂಟ್ಯೂಬ್ ಚಾನಲ್‍ನಲ್ಲಿ ಅಪ್ಲೋಡ್ ಮಾಡಲಿದ್ದಾರೆ.