ಶಿವರಾಜ್‍ಕುಮಾರ್ ಬಳಿ ಸಹಾಯಕ್ಕೆ ಅಂಗಲಾಚಿದ ನಟಿ ವಿಜಯಲಕ್ಷ್ಮಿ

Public TV
2 Min Read
Shiva Rajkumar

ಬೆಂಗಳೂರು: ಸಹೋದರಿ ಉಷಾದೇವಿ ಆರೋಗ್ಯ ಗಂಭೀರವಾದ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗದ ಗಣ್ಯರು ವಿಶೇಷವಾಗಿ ಶಿವರಾಜ್ ಕುಮಾರ್ ಬಳಿ ಸಹಾಯ ಮಾಡಿ ಎಂದು ನಟಿ ವಿಜಯಲಕ್ಷ್ಮಿ ವೀಡಿಯೋ ಮಾಡಿ ಮನವಿ ಮಾಡಿದ್ದಾರೆ.

vijayalakshmi 2

ಸಹೋದರಿ ಉಷಾದೇವಿ ಆರೋಗ್ಯ ಗಂಭೀರವಾಗಿದೆ. ಗರ್ಭಾಶಯದ ತೊಂದರೆಯಿಂದ ಚೆನ್ನೈ ಒಂದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೆ ಆ ಚಿಕಿತ್ಸೆ ಫಲಕಾರಿಯಾಗದೇ ಉಷಾರನ್ನ ಸಾವು ಬದುಕಿನ ನಡುವೆ ಹೋರಾಡುವಂತೆ ಮಾಡಿದೆ. ಹಣವೆಲ್ಲ ಈಗಾಗಲೇ ಚಿಕಿತ್ಸೆಗಾಗಿ ಖರ್ಚಾಗಿದೆ. ಜೊತೆಗೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.

ushadevi

ಸದ್ಯ ಚೆನ್ನೈನಲ್ಲಿ ಇದ್ದೇನೆ. ಲಾಕ್‍ಡೌನ್ ಆದ್ಮೇಲೆ ಬೆಂಗಳೂರಿಗೆ ಬರ್ತೀನಿ. ಮುಂದೆ ಏನು ಮಾಡಬೇಕು ಎಂದು ನನಗೆ ತಿಳಿಯುತ್ತಿಲ್ಲ. ಶಿವಣ್ಣ ಅವರು ನನಗೆ ಸಹಾಯ ಮಾಡಿ. ಉಷಾ ಅವರ ಸ್ಥಿತಿ ಗಂಭಿರವಾಗಿದೆ ಎಂದು ಈ ಬಗ್ಗೆ ವಿಡಿಯೋ ಮಾಡಿರುವ ನಟಿ ವಿಜಯಲಕ್ಷ್ಮಿ ಶಿವರಾಜ್ ಕುಮಾರ್ ಸಹಾಯ ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ನಟಿ ವಿಜಯಲಕ್ಷ್ಮಿ ಚಿಕಿತ್ಸೆಗೆ ಸಹಾಯಹಸ್ತ ಚಾಚಿದ ಕಿಚ್ಚ

vijayalakshmi

ಉಷಾರಿಗೆ ಮಾಡಲಾದ ಆಪರೇಶನ್ ಫೇಲ್ಯೂರ್ ಆಗಿ ಅದರಿಂದ ಆರೋಗ್ಯದ ತೊಡಕು ಉಂಟಾಗಿದೆ. ಮುಂದೇನು ಮಾಡುವುದು ಎಂಬುದು ತಿಳಿದಿಲ್ಲ ಎಂಬುದಾಗಿ ಹೇಳಿರುವ ವಿಜಯಲಕ್ಷ್ಮಿ ಅವರಿಗೆ ಶಿವಣ್ಣ ಸಹಾಯ ಮಾಡುತ್ತಾರಾ ಅಥವಾ ಕನ್ನಡ ಚಿತ್ರರಂಗದ ಯಾರಾದರೂ ಸಹಾಯ ಮಾಡಬಹುದೇ ಎಂಬುದನ್ನು ಕಾದು ನೋಡಬೇಕಾಗಿದೆ. ಇದನ್ನೂ ಓದಿ: ನಟಿ ವಿಜಯಲಕ್ಷ್ಮಿ ನೆರವಿಗೆ ಧಾವಿಸಿದ ಫಿಲ್ಮ್ ಚೇಂಬರ್

shivarajkumar 1

ಈ ಹಿಂದೆ ನಟಿ ವಿಜಯಲಕ್ಷ್ಮಿಗೆ ತೀವ್ರವಾದ ಸುಸ್ತು ಮತ್ತು ಹೈ ಬಿಪಿಯಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿತ್ರರಂಗದ ಸಹಾಯ ಹಸ್ತ ಚಾಚಿದ್ದರು. ತಾಯಿಗೆ ಆರೋಗ್ಯ ಸಮಸ್ಯೆ ಆಗಿತ್ತು. ಈಗ ಸಡನ್ ಆಗಿ ನನ್ನ ತಂಗಿ ವಿಜಯಲಕ್ಷ್ಮಿ ಹೀಗೆ ಆನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾರೆ. ಇದ್ದ ಹಣವೆಲ್ಲ ತಾಯಿಯ ಚಿಕಿತ್ಸೆಗೆ ಖರ್ಚು ಮಾಡಿದ್ದೇವೆ. ಈಗ ನಮಗೆ ಇಂಡಸ್ಟ್ರಿಯ ಸಹಾಯ ಬೇಕಿದೆ ಎಂದು ವಿಜಯಲಕ್ಷ್ಮಿ ಅವರ ತಂಗಿ ಉಷಾದೇವಿ ಪಬ್ಲಿಕ್ ಟಿವಿ ಮುಂದೆ ಕಣ್ಣೀರು ಹಾಕಿದ್ದರು. ಇದೀಗ ಉಷಾದೇವಿ ಅವರಿಗಾಗಿ ನಟಿ ಸಹಾಯ ಕೇಳುತ್ತಿದ್ದಾರೆ. ಇದನ್ನೂ ಓದಿ: ನಟಿ ವಿಜಯಲಕ್ಷ್ಮಿ ಆಸ್ಪತ್ರೆಗೆ ದಾಖಲು- ಸಹಾಯಕ್ಕಾಗಿ ಚಿತ್ರರಂಗದ ಮೊರೆ

SHIVARAJKUMAR

ಈ ಹಿಂದೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಸ್ಯಾಂಡಲ್‍ವುಡ್ ನಟರಾದ ಕಿಚ್ಚ ಸುದೀಪ್ ಅವರು ಸಹಾಯ ಮಾಡಿದ್ದರು. ಇದೀಗ ಶಿವಣ್ಣ ಬಳಿ ಸಹಾಯವನ್ನು ಕೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *