ಶಿವಮೊಗ್ಗ: ಕೊರೊನಾ ಎರಡನೇ ಅಲೆಯ ಲಾಕ್‍ಡೌನ್ ಗೆ ಸ್ಥಗಿತಗೊಂಡಿದ್ದ ಖಾಸಗಿ ಬಸ್ ಗಳ ಸಂಚಾರ ಇಂದಿನಿಂದ ಆರಂಭಗೊಂಡಿದೆ. ಆದರೆ ಪ್ರಯಾಣಿಕರ ಸಂಖ್ಯೆಯಲ್ಲಿ ಮಾತ್ರ ವಿರಳವಾಗಿದೆ.
ಬಸ್ ಸಂಚಾರ ಆರಂಭವಾದ ಮೊದಲ ದಿನ ಸುಮಾರು 100ಕ್ಕೂ ಹೆಚ್ಚು ಬಸ್ ಗಳು ಇಂದು ರಸ್ತೆಗೆ ಇಳಿದಿವೆ. ಮಂಗಳೂರು, ಚಿತ್ರದುರ್ಗ, ದಾವಣಗೆರೆ, ಬೆಂಗಳೂರು, ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಿಂದ ಶಿವಮೊಗ್ಗಕ್ಕೆ ಖಾಸಗಿ ಬಸ್ ಗಳು ಸಂಚಾರ ನಡೆಸುತ್ತವೆ. ಅಲ್ಲದೆ ಶಿವಮೊಗ್ಗ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಹಾಗೂ ಗ್ರಾಮೀಣ ಭಾಗಗಳಿಗೆ ಖಾಸಗಿ ಬಸ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತವೆ.
ನಗರ ಸಾರಿಗೆ ಬಸ್ ಗಳು ಸಹ ರಸ್ತೆಗೆ ಇಳಿದಿದ್ದು, ಖಾಸಗಿ ಬಸ್ ಗಳು ರಸ್ತೆಗಿಳಿದ ಬೆನ್ನಲ್ಲೇ ನಗರ ಖಾಸಗಿ ಸಾರಿಗೆ ಬಸ್ ಗಳು ಸಹ ರಸ್ತೆಗಿಳಿದಿವೆ. ನಗರ ಸಾರಿಗೆಯಲ್ಲಿ 65 ಬಸ್ ಗಳಿದ್ದು, ಅವುಗಳಲ್ಲಿ ಇಂದು ಕೇವಲ 10 ರಿಂದ 15 ನಗರ ಸಾರಿಗೆ ಬಸ್ ಗಳು ರಸ್ತೆಗಿಳಿದಿವೆ. ಶನಿವಾರ ಮತ್ತು ಭಾನುವಾರ ವೀಕೆಂಡ್ ಕಫ್ರ್ಯೂ ಇರುವುದರಿಂದ ಇಂದು ಕಡಿಮೆ ಬಸ್ ಗಳು ಓಡಾಡುತ್ತಿವೆ. ಈ ತಿಂಗಳ ಕೊನೆಯೊಳಗೆ ಎಲ್ಲ ಬಸ್ ಗಳು ನಿಧಾನವಾಗಿ ರಸ್ತೆಗಿಳಿಯಲಿವೆ ಎನ್ನುತ್ತಾರೆ ಖಾಸಗಿ ಬಸ್ ಮಾಲೀಕರು.