ಮಂಗಳೂರು: ಶಿವನ ವಿಗ್ರಹದ ಪೀಠದ ಮೇಲೆ ಟಿಕ್‍ಟಾಕ್ ಮಾಡಿದ ನಾಲ್ವರನ್ನು ಪೊಲೀಸರು ಬಂಧಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನಲ್ಲಿ ನಡೆದಿದೆ.
ಈ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಂಚಿನಡ್ಕ ಗ್ರಾಮದಲ್ಲಿ ನಡೆದಿದೆ. ಬಂಧಿತರನ್ನು ಸಜೀಪ ನಿವಾಸಿಗಳಾದ ಮಸೂದ್, ಅಜೀಮ್, ಅಬ್ದುಲ್ ಲತೀಫ್ ಹಾಗೂ ಅರ್ಫಾಜ್ ಎಂದು ಗುರುತಿಸಲಾಗಿದೆ. ಈ ನಾಲ್ವರು ಕಂಚಿನಡ್ಕ ಹಿಂದೂ ರುದ್ರಭೂಮಿಯಲ್ಲಿ ಟಿಕ್‍ಟಾಕ್ ಮಾಡಿದ್ದರು.
ಆರೋಪಿಗಳು ಕಂಚಿನಡ್ಕದ ರುದ್ರಭೂಮಿಯ ಶಿವನ ವಿಗ್ರಹದ ಪೀಠದ ಮೇಲೆ ಶೂ ಧರಿಸಿ ಟಿಕ್‍ಟಾಕ್ ಮಾಡಿದ್ದರು. ಇದನ್ನು ನೋಡಿದ ರುದ್ರಭೂಮಿ ಅಧ್ಯಕ್ಷ ಹಿಂದು ಧಾರ್ಮಿಕ ಶೃದ್ಧಾ ಕೇಂದ್ರಕ್ಕೆ ಧಕ್ಕೆಯಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈಗ ವಿಡಿಯೋ ಆಧರಿಸಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.