ಪ್ರಿಯಾಂಕ ತಿಮ್ಮೇಶ್ ಬಿಗ್ ಬಾಸ್ ಮನೆಯಿಂದ ಹೊರ ಹೋಗುವ ಸಂದರ್ಭದಲ್ಲಿ ಅಶ್ಲೀಲ ಕೈ ಸನ್ನೆ ಮಾಡಿ ವೀಕ್ಷಕರ ಆಕ್ರೋಶಕ್ಕೆ ಗುರಿಯಾಗಿದ್ದ ಚಕ್ರವರ್ತಿ ಚಂದ್ರಚೂಡ್ ಅವರು ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ.
ಪ್ರಿಯಾಂಕ ತಿಮ್ಮೇಶ್ ಅವರು ಎಲಿಮಿನೇಟ್ ಆಗಿ ಮನೆಯಿಂದ ಹೊರ ಹೋಗುವಾಗ ಚಕ್ರವರ್ತಿ ತೋರಿಸಿದ ಅಶ್ಲೀಲ ಸನ್ನೆಯ ಕುರಿತು ಸಾಕಷ್ಟು ಚರ್ಚೆಯಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಅವರ ವರ್ತನೆ ಮತ್ತು ಕ್ಷಮೆ ಕೇಳದ ಬಗ್ಗೆ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದರು. ಸುದೀಪ್ ಅವರ ಶೋದಲ್ಲೂ ಅವರು ಕ್ಷಮೆ ಕೇಳದ ಬಗ್ಗೆ ಚರ್ಚೆ ಆಗಿತ್ತು. ಈಗ ಚಕ್ರವರ್ತಿ ಕ್ಷಮೆ ಕೇಳಿದ್ದಾರೆ.
Advertisement
Advertisement
ಪ್ರೀತಿಯಿಂದ ಅಭಿಮಾನದಿಂದ ನೋಡಿಕೊಡ ಹುಡುಗಿಗೆ ನಾನು ಆ ಕೈ ಸನ್ನೆ ಮಾಡಬಾರದಿತ್ತು. ಅದು ನನ್ನ ಗುಣವಲ್ಲ. ಸ್ವಲ್ಪ ಬೇಗ ಎಮೋಷನಲ್ ಆಗುತ್ತೇನೆ. ಸಿಟ್ಟಿಗೆ ಆ ರೀತಿ ಮಾಡಿದ್ದೇನೆ ಹೊರತಾಗಿ ಯಾವುದೇ ಉದ್ದೇಶವಿಲ್ಲ. ಆ ಕೈ ಸನ್ನೆಗೆ ನಾನು ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ ಎಂದು ಬಿಗ್‍ಬಾಸ್ ಕ್ಯಾಮೆರಾ ಮುಂದೆ ಬಂದು ಕ್ಷಮೆಯಾಚಿಸಿದ್ದಾರೆ.
Advertisement
ಅದು ತುಂಬಾ ಕೆಟ್ಟದಾಗಿ ಕಾಣಿಸಿತ್ತು ಮತ್ತು ಒಬ್ಬ ಹೆಣ್ಣು ಮಗಳಿಗೆ ಆ ರೀತಿ ಕೈ ಸನ್ನೆ ಮಾಡಬಾರದಿತ್ತು ಎಂದು ನನಗೆ ಅನಿಸಿದೆ. ಅದು ಯಾವುದೇ ಉದ್ದೇಶವಿಟ್ಟು ಮಾಡಿಲ್ಲ, ಸಿಟ್ಟಿನಲ್ಲಿ ಆ ರೀತಿ ಮಾಡಿದೆ ಅದಕ್ಕೆ ನಾನು ಶಿರಬಾಗಿ ಕ್ಷಮೆಯನ್ನು ಕೇಳಿಕೊಳ್ಳುತ್ತೇನೆ ದಯವಿಟ್ಟು ನನನ್ನು ಕ್ಷಮಿಸಿ ಎಂದಿದ್ದಾರೆ. ಇದನ್ನೂ ಓದಿ : ಇವತ್ತು ಹೋಗಲ್ಲ, ಈ ವಾರ ಹೋಗ್ತಾರೆ- ಬಿಗ್ ಬಾಸ್ ಎಲಿಮಿನೇಶನ್ ಟ್ವಿಸ್ಟ್
Advertisement
ವಾರದ ಕತೆ ಕಿಚ್ಚ ಜೊತೆಯಲ್ಲಿ ಮಾತನಾಡುವಾಗ ಚಕ್ರವರ್ತಿಯವರ ಬೆರಳಿನ ವಿಚಾರದ ಕುರಿತು ಪ್ರಶ್ನಿಸಿದ್ದರು. ಅಲ್ಲದೆ ಅದರ ಅರ್ಥ ಏನು ಎಂದು ಹೇಳುವವರೆಗೆ ಬಿಡುವುದಿಲ್ಲ ಎಂದಿದ್ದರು. ನಮ್ಮ ಕೈಯಲ್ಲಿನ ಐದು ಬೆರಳುಗಳ ಮೂಲಕ ಸನ್ನೆ ಮಾಡಬಹುದು ಪ್ರತಿ ಬೆರಳಿನ ಸನ್ನೆಗೂ ಅರ್ಥವಿದೆ ಎಂದು ಹೇಳಿದ ಸುದೀಪ್, ನೀವು ಮಾಡಿದ ಸನ್ನೆಯ ಅರ್ಥವೇನು ಎಂದು ಚಕ್ರವರ್ತಿಯವರನ್ನು ಕೇಳಿದ್ದರು.
ಇದಕ್ಕೆ ಆರಂಭದಲ್ಲಿ ಉತ್ತರಿಸಿದ ಚಕ್ರವರ್ತಿ ಚಂದ್ರಚೂಡ್, ಸಿಟ್ಟು ಬಂತು ಹೀಗಾಗಿ ತೋರಿಸಿಬಿಟ್ಟೆ ಎನ್ನುತ್ತಾರೆ. ಬಳಿಕ ಮತ್ತೊಮ್ಮೆ ಕೇಳಿದಾಗ ಐದು ಬೆರಳುಗಳು ಪಂಚಭೂತಗಳ ಸಂಕೇತ, ಮಧ್ಯದ ಬೆರಳು ಸಮತೋಲನದ ಸಂಕೇತ, ಕಷ್ಟ, ಸುಖ ಎಲ್ಲವನ್ನೂ ಸಮತೋಲನವಾಗಿ ಸವೀಕರಿಸಲಿ ಎಂದು ಪ್ರಿಯಾಂಕಾ ಅವರಿಗೆ ಆ ಬೆರಳು ತೋರಿಸಿದೆ ಎನ್ನುತ್ತಾರೆ. ತಕ್ಷಣವೇ ಸುದೀಪ್ ಕೋಪಗೊಳ್ಳುತ್ತಾರೆ, ಮತ್ತೆ ನಿಧಾನವಾಗಿ ಪ್ರಶ್ನಿಸಿ, ಸಮತೋಲನದ ಬೆರಳು ಆಗಿದ್ದರೆ, ಹೇಗೆ ಅಪರಾಧವಾಗುತ್ತದೆ ಎಂದು ಕೇಳಿದ್ದರು.
ಅದು ಅಪರಾಧವಾಗುತ್ತದೆ, ಆ ಸನ್ನೆ ಮಾಡುವುದು ಕಾನೂನಿನ ಪ್ರಕಾರ ಸಹ ತಪ್ಪು ಎನ್ನುತ್ತಾರೆ. ಆಗ ಚಕ್ರವರ್ತಿ ಹೌದು ಸರ್ ಕೆಟ್ಟ ಸನ್ನೆ ಎನ್ನುತ್ತಾರೆ. ಅದು ಕೆಟ್ಟ ಸನ್ನೆಯೇ, ಹೊರಗಡೆ ಈ ರೀತಿ ತೋರಿಸಿದರೆ ಜಗಳವಾಗುತ್ತದೆ. ಅದೂ ಒಂದು ಹುಡುಗಿಗೆ ಅದನ್ನು ನೀವು ತೋರಿಸುವುದು ನಾಟ್ ಒಕೆ ಸರ್ ಎಂದು ಸುದೀಪ್ ಹೇಳಿದ್ದರು. ಆಗ ಎಸ್ ಸರ್ ಐ ಅಗ್ರೀ ಸರ್, ಆ ಕ್ಷಣ ಸಿಟ್ಟು ಬಂದು ಮಾಡಿದೆ. ಅಲ್ಲದೆ ಕನ್ನಡಿಯಲ್ಲಿ ಮತ್ತೆ ನೋಡಿಕೊಂಡಿದ್ದು, ಯಾವ ಮಟ್ಟಕ್ಕೆ ಕಾಣುತ್ತಿದೆ, ಏನೋ ಮಾಡಿಬಿಟ್ನಲ್ಲ ಎಂದು ನನಗೆ ನಾನೇ ನೋಡಿಕೊಂಡೆ ಎಂದು ಚಕ್ರವರ್ತಿ ಹೇಳಿದ್ದರು.