ಬೆಳಗಾವಿ/ಚಿಕ್ಕೋಡಿ: ಪಬ್ಲಿಕ್ ಟಿವಿ ಹಾಗೂ ರೋಟರಿ ಕ್ಲಬ್ ಸಹಯೋಗದಲ್ಲಿ ಎಸ್‍ಎಸ್‍ಎಲ್‍ಸಿ ಓದುತ್ತಿರುವ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣಾ ಕಾರ್ಯಕ್ರಮ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಶಿರಗಾಂವ ಗ್ರಾಮದ ಸರಕಾರಿ ಪ್ರೌಡ ಶಾಲೆಯಲ್ಲಿ ಜರುಗಿತು.
ಶಿರಗಾಂವ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ 164 ಹಾಗೂ ಬಸ್ತವಾಡ ಗ್ರಾಮದ ಶ್ರೀ ಪಾಶ್ರ್ವನಾಥ ಸರ್ಕಾರಿ ಪ್ರೌಢ ಶಾಲೆಯ 28 ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಟ್ಯಾಬ್ ನೀಡಲಾಯ್ತು. ಉದ್ಯಮಿ ಪೃಥ್ವಿ ಕತ್ತಿ ದಾನಿಗಳಾದ ಶಿವಾನಂದ್ ಮುಡಶಿ, ಪ್ರಜ್ವಲ್ ನಿಲಜಗಿ ಹಾಗೂ ಹುಕ್ಕೇರಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ದಂಡಿನ್ ಟ್ಯಾಬ್ ವಿತರಿಸಿದರು.
Advertisement
Advertisement
ಈ ವೇಳೆ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ದಂಡಿನ್, ಕೊರೊನಾ ಹಿನ್ನೆಲೆ ಶಾಲೆಗಳು ಬಂದ್ ಆದ ಸಂದರ್ಭದಲ್ಲಿ ಬಡ ಮಕ್ಕಳ ಶಿಕ್ಷಣಕ್ಕೆ ಸಹಕಾರಿಯಾಗಲೆಂದು ಪಬ್ಲಿಕ್ ಟಿವಿಯವರು ಜ್ಞಾನ ದೀವಿಗೆ ಎಂಬ ಕಾರ್ಯಕ್ರಮದ ಮೂಲಕ ಟ್ಯಾಬ್ ವಿತರಣೆ ಮಾಡಿದ್ದು ಬಹಳಷ್ಟು ಶ್ಲಾಘನೀಯ. ಕೋವಿಡ್ ಹಿನ್ನಲೆ ಆನ್‍ಲೈನ್ ಶಿಕ್ಷಣ ಪಡೆಯಲು ಈ ಟ್ಯಾಬ್ ಸಹಕಾರಿಯಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಟ್ಯಾಬ್ ವಿತರಣೆ ಜ್ಞಾನ ದೀವಿಗೆ ಕಾರ್ಯಕ್ರಮ ನಡೆಸಿದ ಪಬ್ಲಿಕ್ ಟಿವಿಗೆ ಧನ್ಯವಾದ ತಿಳಿಸಿದರು.
Advertisement
Advertisement
ಟ್ಯಾಬ್ ಸ್ವೀಕರಿಸಿದ ವಿದ್ಯಾರ್ಥಿನಿ ಮಾತನಾಡಿ, ಕೋವಿಡ್ ಹಿನ್ನೆಲೆ ಬಡ ಮಕ್ಕಳ ಶಿಕ್ಷಣದಿಂದ ವಂಚಿತರಾಗಬಾರದೆಂದು ಉಚಿತ ಟ್ಯಾಬ್ ನೀಡಿದ ಪಬ್ಲಿಕ್ ಟಿ ಹಾಗೂ ಧಾನಿಗಳಿಗೆ ಧನ್ಯವಾದ ತಿಳಿಸಿದಳು. ಈ ಟ್ಯಾಬ್ ಸದುಪಯೋಗ ಪಡೆಸಿಕೊಳ್ಳುತ್ತೆವೆ ಎಂದರು.
ಟ್ಯಾಬ್ ದಾನಿಗಳು ಮಾತನಾಡಿ ಪಬ್ಲಿಕ್ ಟಿವಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಎಸ್.ಜಿ.ಯಾದವ್, ನಿಜಲಿಂಗ ಸೋನವಾನೆ, ಶಿಕ್ಷಕಿ ಪ್ರತಿಭಾ ಹೊಳೆಪ್ಪಗೋಳ ಸೇರಿದಂತೆ ಶಾಲಾ ಸಿಬ್ಬಂದಿ ಹಾಜರಿದ್ದರು.