ಶಿಖರ್ ಧವನ್ ಕೊಳಲು ನಾದ- ಪೃಥ್ವಿ ಶಾ ಗಾಯನ

Public TV
1 Min Read
SHIKHAR DHAWAN

ಕೊಲಂಬೋ: ಶ್ರೀಲಂಕಾ ಪ್ರವಾಸದಲ್ಲಿರುವ ಶಿಖರ್ ಧವನ್, ಪೃಥ್ವಿ ಶಾ ಹಾಡು ಹಾಡುತ್ತಾ, ಕೊಳಲು ನುಡಿಸುತ್ತಾ ರಿಲ್ಯಾಕ್ಸ್  ಮೂಡ್ ನಲ್ಲಿರುವ ವೀಡಿಯೋ ವೈರಲ್ ಆಗಿದೆ.

ಧವನ್ ಕೊಳಲು ನುಡಿಸಿದರೆ, ಪೃಥ್ವಿ ಶಾ ಹಾಡನ್ನು ಹಾಡುತ್ತಿದ್ದಾರೆ. ರಾಗದಲ್ಲಿ ಒಟ್ಟಿಗೆ ಸೇರಿದ್ದೇವೆ, ನಮ್ಮ ಸೂಪರ್ ಸ್ಟಾರ್ ಗಯಕ ಪೃಥ್ವಿ ಶಾ ಎಂದು ಬರೆದುಕೊಂಡು ಧವನ್ ಇನ್‍ಸ್ಟಾಗ್ರಾಮ್‍ನಲ್ಲಿ ವೀಡಿಯೋ ಶೇರ್ ಮಾಡಿದ್ದಾರೆ. ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ಸೋದರನ ಕೊಲೆ ಪ್ರಕರಣ – ಸಾವಿರ ಪುಟಗಳ ಚಾರ್ಜ್ ಶೀಟ್

ಶಿಖರ್ ಧವನ್ ಇತ್ತೀಚೆಗೆ ಕೊಳಲು ನುಡಿಸಲು ಕಲಿತಿದ್ದಾರೆ. ಸ್ವಲ್ಪ ಸಮಯದ ಹಿಂದೆ, ತಂದೆಯ ದಿನಾಚರಣೆಯ ಸಂದರ್ಭದಲ್ಲಿ, ಅವರು ತಮ್ಮ ತಂದೆಗೆ ಹಳೆಯ ಹಾಡಿನ ರಾಗವನ್ನು ನುಡಿಸಿದರು. ಆ ಸಮಯದಲ್ಲಿ ಅವರು ಹೊನ್ ಸೆ ಚು ಲೋ ತುಮ್ ಮೇರಾ ಗೀತ್ ಅಮರ್ ಕಾರ್ ದೋ ಹಾಡಿನ ರಾಗವನ್ನು ನುಡಿಸಿದರು. ಇದಲ್ಲದೆ, ಅನೇಕ ಸಂದರ್ಭಗಳಲ್ಲಿ ಅವರು ಕೊಳಲು ನುಡಿಸುವ ಕಲೆಯನ್ನು ಪ್ರದರ್ಶಿಸಿದ್ದಾರೆ.

ಶಿಖರ್ ಧವನ್ ಮತ್ತು ಪೃಥ್ವಿ ಶಾ ಈ ಮೊದಲು ಅನೇಕ ತಮಾಷೆಯ ವೀಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಐಪಿಎಲ್‍ನಲ್ಲಿ ಈ ಇಬ್ಬರೂ ದೆಹಲಿ ಪರ ಒಟ್ಟಿಗೆ ಆಡುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಇಬ್ಬರ ನಡುವೆ ಉತ್ತಮ ಬಾಂಧವ್ಯ ಏರ್ಪಟ್ಟಿದೆ. ಶ್ರೀಲಂಕಾ ಪ್ರವಾಸದಲ್ಲಿ ಈ ಜೋಡಿ ಭಾರತಕ್ಕೆ ಯಾವ ರೀತಿಯ ಆರಂಭವನ್ನು ನೀಡುತ್ತದೆ ಎಂಬುದನ್ನು ಈಗ ನೋಡಬೇಕಾಗಿದೆ. ಇಬ್ಬರೂ ಬ್ಯಾಟ್ಸ್‌ಮನ್‌ಗಳು ಇತ್ತೀಚಿನ ದಿನಗಳಲ್ಲಿ ಉತ್ತಮ ಫಾರ್ಮ್‍ನಲ್ಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *