ಮಂಗಳೂರು: ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ಬಡ್ಡಿರಹಿತ ಸಾಲ ನೀಡಲಿ. ವಿದ್ಯಾರ್ಥಿಗಳ ಹಾಗೂ ಮ್ಯಾನೇಜ್ಮೆಂಟ್ ಬಗ್ಗೆ ಕೂಡ ಸರ್ಕಾರ ಗಮನಹರಿಸಲಿ ಎಂದು ಮಾಜಿ ಸಚಿವ ಯು.ಟಿ ಖಾದರ್ ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕೋವಿಡ್‍ನಿಂದಾಗಿ ಬರಲು ಪುರುಸೋತ್ತಿಲ್ಲ. ಫೀಸ್ ಕಟ್ಟಬೇಡಿ ಅಂತ ಸರ್ಕಾರ ಹೇಳಿದೆ. ಹೀಗಾಗಿ ಫೀಸ್ ಕಟ್ಟಲು ಕೆಲವರು ತಯಾರಿದ್ದರೂ ಕಟ್ಟಲಿಲ್ಲ. ಹೀಗಾದ್ರೆ ಶಾಲೆಗಳು ಉಳಿಯೋದು ಹೇಗೆ ಎಂದು ಪ್ರಶ್ನಿಸಿದರು.
Advertisement
Advertisement
ಕೆಲ ಶಾಲಾ ಆಡಳಿತ ಮಂಡಳಿಗೆ ಕಟ್ಟಡದ ಬಾಡಿಗೆ ಕೊಡಲು ಸಾಧ್ಯವಿರುವುದಿಲ್ಲ. ಇದರಿಂದ ಶಾಲೆಗಳಲ್ಲಿ ಶಿಕ್ಷಕರು ಕೆಲಸ ಕಳೆದುಕೊಳ್ಳುತ್ತಾರೆ. ಆದ್ದರಿಂದ ಸರ್ಕಾರ ಶಿಕ್ಷಣ ಸಂಸ್ಥೆಗಳಿಗೆ ಬಡ್ಡಿರಹಿತ ಸಾಲ ನೀಡಲಿ. ಹಾಗೆಯೇ ವಿದ್ಯಾರ್ಥಿಗಳ ಬಗ್ಗೆ ಹಾಗೂ ಮ್ಯಾನೆಜ್‍ಮೆಂಟ್ ಬಗ್ಗೆ ಕೂಡ ಸರ್ಕಾರ ಗಮನಹರಿಸಲಿ ಎಂದು ಒತ್ತಾಯಿಸಿದರು.
Advertisement
ಶಿಕ್ಷಣಕ್ಕೆ ಸಂಬಂಧಿಸಿದಂತೆ ಸರ್ಕಾರದಲ್ಲಿ ಸ್ಪಷ್ಟತೆ ಇಲ್ಲ. ಸರ್ಕಾರ ಈ ವಿಚಾರದಲ್ಲಿ ಬೇಜವಬ್ದಾರಿ ತೋರುತ್ತಿದೆ. ಹೆತ್ತವರು ನೆಮ್ಮದಿಯಿಂದ ಇರುವಂತೆ ಮಾಡುವುದು ಶಿಕ್ಷಣ ಇಲಾಖೆ ಕರ್ತವ್ಯವಾಗಿದೆ. ಸರ್ಕಾರದ ಸಚಿವರು ಈ ವಿಚಾರದಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಈ ಮೂಲಕ ಪೋಷಕರು ಮತ್ತು ವಿದ್ಯಾರ್ಥಿಗಳನ್ನು ಗೊಂದಲಕ್ಕೀಡು ಮಾಡುತ್ತಿದ್ದಾರೆ ಎಂದು ಗರಂ ಆದರು.
Advertisement
ಲಾಜಿಕ್ ಇಲ್ಲದೆ ನಿಲುವುಗಳನ್ನು ತೆಗೆದುಕೊಳ್ಳುತ್ತಿದ್ದೀರಿ. ಪರೀಕ್ಷೆಯ ದಿನಾಂಕ ನಿಗದಿ ಮಾಡಲು ಗೊಂದಲ ಮಾಡಿದರು. ಪರೀಕ್ಷೆ ಮುಗಿದಿಲ್ಲ. ಆಗಲೇ ಆನ್ ಲೈನ್ ಶಿಕ್ಷಣ ಬೇಕಾ, ಬೇಡ್ವಾ ಅನ್ನೋ ಬಗ್ಗೆ ಮಾತನಾಡುತ್ತಿದ್ದೀರಿ. 5ನೇ ತರಗತಿವರೆಗೂ ಆನ್ ಲೈನ್ ಶಿಕ್ಷಣ ಬೇಡ ಅನ್ನೋದಕ್ಕೆ ನಾನು ಸಮ್ಮತಿಸುತ್ತೇನೆ. ಆದರೆ ಕಾರ್ಪೊರೇಟ್ ಆಪ್ ನ್ನು ಯಾಕೆ ಬ್ಯಾನ್ ಮಾಡಲ್ಲ ಎಂದು ಸರ್ಕಾರವನ್ನು ಮಾಜಿ ಸಚಿವರು ಪ್ರಶ್ನೆ ಮಾಡಿದರು.
ರಾಜ್ಯದ ಎಲ್ಲಾ ಮಕ್ಕಳಿಗೂ ಸ್ಮಾರ್ಟ್ ಫೋನ್ ಕೊಡಿಸುವ ಸಾಮರ್ಥ್ಯ ಇರಲ್ಲ. ಸೈಕಲ್ ಕೊಡುವ ಸ್ಕೀಮ್ ಬಿಟ್ಟು ಅದನ್ನು ಬೇರೆ ವ್ಯವಸ್ಥೆಗೆ ಬಳಸಿಕೊಳ್ಳಿ. ಎಲ್ಲದಕ್ಕೂ ಮೊದಲು ಟೆಸ್ಟ್ ಬುಕ್ ಪ್ರಿಂಟ್ ಮಾಡಿಸಿ ಎಂದು ಇದೇ ವೇಳೆ ಸರ್ಕಾರಕ್ಕೆ ಸಲಹೆ ನೀಡಿದರು.