ದಾವಣಗೆರೆ: ಹೊನ್ನಾಳಿ ಕ್ಷೇತ್ರದ ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಮದುವೆ ಸಮಾರಂಭಕ್ಕೆಂದು ಆಗಮಿಸಿದಾಗ ಸೆಲ್ಛಿಗಾಗಿ ಜನ ಮುಗಿಬಿದ್ದ ಘಟನೆ ವರದಿಯಾಗಿದೆ.
ದಾವಣಗೆರೆಯ ಹಳೇಬಾತಿ ಗ್ರಾಮದ ಮಂಜುನಾಥಸ್ವಾಮಿ ಎಂಬವರ ಮದುವೆಗೆ ಕಳೆದ ರಾತ್ರಿ ಆಗಮಿಸಿದ್ದರು. ವಧು-ವರನಿಗೆ ಶುಭಕೋರಿ ಹಿಂದಿರುಗುವ ವೇಳೆ ಅಲ್ಲಿ ಸೇರಿದ್ದ ಜನರು ಶಾಸಕರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.
ರೇಣುಕಾಚಾರ್ಯ ಅವರು ಕೂಡ ಅಭಿಮಾನಿಗಳ ಆಸೆಗೆ ಸಹಕರಿಸಿ ಸೆಲ್ಛಿ ತೆಗೆದುಕೊಳ್ಳಲು ಸಹಕರಿಸಿದರು. ಇದೂ ಅವರೂ ಕಾರು ಹತ್ತುವವರೆಗೂ ಮುಂದುವರೆಯಿತು. ಇತ್ತ ಸೆಲ್ಫಿ ಮೋಹದಲ್ಲಿ ಜನರು ಮಾಸ್ಕ್ ಮತ್ತು ಸಾಮಾಜಿಕ ಅಂತರ ಪಾಲನೆಯನ್ನು ಮರೆತಂತಿತ್ತು.