ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರನ ನಿಶ್ಚಿತಾರ್ಥ ಸಮಾರಂಭ

Public TV
1 Min Read
SMG

ಶಿವಮೊಗ್ಗ: ಇಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರನ ವಿವಾಹ ನಿಶ್ಚಿತಾರ್ಥ ಸಮಾರಂಭ ಜಿಲ್ಲೆಯಲ್ಲಿ ನಡೆಯಲಿದೆ.

ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹಾಗೂ ಡಾ. ಹಿತಾ ವಿವಾಹ ನಿಶ್ಚಿತಾರ್ಥ ಇಂದು ನಡೆಯಲಿದೆ. ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಮ್ಮಿ ಹೆಬ್ಬಾಳ್ಕರ್ ಪುತ್ರನಿಗೆ ಭದ್ರಾವತಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ಸಹೋದರ ಶಿವಕುಮಾರ್ ಪುತ್ರಿ ಜೊತೆ ನಿಶ್ಚಿತಾರ್ಥ ನಡೆಯಲಿದೆ.

SMG LAKSHMI SON AV 2 e1597634188593

ಶಿವಮೊಗ್ಗ ನಗರದ ಸವಳಂಗ ರಸ್ತೆಯ ಸರ್ಜಿ ಕನ್ವೆಂಷನ್ ಹಾಲ್‍ನಲ್ಲಿ ಗುರು-ಹಿರಿಯರು ನಿಶ್ಚಯಿಸಿರುವ ಮುಹೂರ್ತದಲ್ಲಿ ಸಮಾರಂಭ ನಡೆಯಲಿದೆ. ಕೊರೊನಾ ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡು ನಿಶ್ಚಿತಾರ್ಥ ಸಮಾರಂಭ ನಡೆಸಲಾಗುತ್ತಿದೆ.

SMG LAKSHMI SON AV 5 e1597634224240

ಈಗಾಗಲೇ ಪುತ್ರನ ನಿಶ್ಚಿತಾರ್ಥಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್ ಶಿವಮೊಗ್ಗಕ್ಕೆ ಆಗಮಿಸಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆಗೆ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಲಿದೆ. ಹೀಗಾಗಿ ನಿಶ್ಚಿತಾರ್ಥದ ತಯಾರಿ ಭರದಿಂದ ಸಾಗಿದೆ. ಈ ಮೂಲಕ ಇಬ್ಬರು ರಾಜಕೀಯ ಕುಟುಂಬದ ನಡುವೆ ಬಾಂಧವ್ಯ ಆರಂಭವಾಗಲಿದೆ.

SMG LAKSHMI SON AV 1 e1597634265513

Share This Article
Leave a Comment

Leave a Reply

Your email address will not be published. Required fields are marked *