ಲಕ್ನೋ: ಉತ್ತರ ಪ್ರದೇಶದ ಬಿಎಸ್‍ಪಿ ಶಾಸಕ ಮುಖ್ತರ್ ಅನ್ಸಾರಿ ಅವರಿಗೆ ಸೇರಿದ ಎರಡು ಅಕ್ರಮ ಕಟ್ಟಡಗಳನ್ನು ಸರ್ಕಾರಿ ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ.
ಯುಪಿ ಪೊಲೀಸರು ಇಂದು ಈ ಹಿಂದೆ ಗ್ಯಾಂಗ್‍ಸ್ಟಾರ್ ಆಗಿದ್ದ ಶಾಸಕ ಮುಖ್ತರ್ ಅನ್ಸಾರಿಗೆ ಸೇರಿದ್ದ ಎರಡು ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ. ಸರ್ಕಾರ ಕಟ್ಟಡ ನೆಲಸಮದ ಖರ್ಚುಗಳನ್ನು ಅವರಿಂದಲೇ ಪಡೆದುಕೊಂಡಿದೆ. ಕ್ರಿಮಿನಲ್ ಗಳು ಅಪರಾಧ ಪ್ರಕರಣಗಳಿಂದ ಹೊರ ಬರಬೇಕು ಅಥವಾ ಇಂತಕ ಕಠಿಣ ನಿರ್ಧಾರಗಳನ್ನು ಎದುರಿಸಲು ಸಿದ್ಧರಾಗಬೇಕು ಎಂದು ಸಿಎಂ ಯೋಗಿ ಆದಿತ್ಯನಾಥ್ ಮಾಧ್ಯಮ ಸಲಹೆಗಾರ ಮೃತ್ಯಂಜಯ್ ಹೇಳಿದ್ದಾರೆ.
ಲಕ್ನೋ ನಗರದ ದಾಲಿಬಾಘ ವ್ಯಾಪ್ತಿಯಲ್ಲಿರುವ ಶಾಸಕರ ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ. ಕಟ್ಟಡ ನೆಲಸಮ ಮಾಡುವ ವೇಳೆ ಮುನ್ನೇಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ನೆಲಸಮಗೊಂಡಿರುವ ಕಟ್ಟಡಕ್ಕೆ ‘ನಿಷ್ಕ್ರಾಂತ್ ಸಂಪತಿ’ ಎಂದು ಹೆಸರಿಡಲಾಗಿದ್ದು, ಇಲ್ಲಿ ಪಾಕಿಸ್ತಾನದಿಂದ ಬಂದ ವಲಸಿಗರು ವಾಸವಾಗುತ್ತಿದ್ರು ಎಂದು ಸರ್ಕಾರದ ವಕ್ತಾರರೊಬ್ಬರು ಹೇಳಿದ್ದಾರೆ.