– 11ನೇ ತರಗತಿಯಲ್ಲಿ ಶೇ.71 ಅಂಕ ಪಡೆದಿರುವ ಬಾಲಕಿ
– ಬಾಲಕಿ ವಿರುದ್ಧ ದೂರು ನೀಡದೆ, ಸಹಾಯ
– ದುಃಖತಪ್ತಳಾಗಿ ಮೊಬೈಲ್ ಮರಳಿಸಿದ ಬಾಲಕಿ
ಭೋಪಾಲ್: ಶಾಲೆ ಫೀ ಕಟ್ಟಲು 16 ವರ್ಷದ ಬಾಲಕಿ ಮೊಬೈಲ್ ಕದ್ದಿದ್ದಾಳೆ. ಬಾಲಕಿ ಕದ್ದಿದ್ದರ ಹಿಂದಿನ ಕಾರಣ ತಿಳಿದು, ಆಕೆಯ ವಿರುದ್ಧ ದೂರು ನೀಡದೆ, ಶಿಕ್ಷಿಸದೆ ಸಂತ್ರಸ್ತ ಮರಳಿ ಸಹಾಯ ಮಾಡಿರುವ ಅಪರೂಪದ ಘಟನೆ ನಡೆದಿದೆ.
ಮಧ್ಯಪ್ರದೇಶದ ಇಂದೋರ್ ನಲ್ಲಿ ಘಟನೆ ನಡೆದಿದ್ದು, ಫೀ ಕಟ್ಟಲು ಹಣವಿಲ್ಲದ್ದಕ್ಕೆ ಓದು ಮುಗಿಸಲು ಸಾಧ್ಯವಾಗದೆ ಹತಾಶೆಗೊಂಡ ಬಾಲಕಿ ಮೊಬೈಲ್ ಕದ್ದಿದ್ದಾಳೆ. ಸಂತ್ರಸ್ತ ಧೀರಜ್ ದುಬೆ ಡಿಟೆಕ್ಟಿವ್ ಏಜೆನ್ಸಿ ನಡೆಸುವ ಹಿನ್ನೆಲೆ ಕದ್ದ ನಂತರ ಸಂತ್ರಸ್ತ ತನ್ನ ಮೊಬೈಲ್ ಟ್ರ್ಯಾಕ್ ಮಾಡಿದ್ದು, ಈ ವೇಳೆ ಬಾಲಕಿ ಸಿಕ್ಕಿಬಿದ್ದಿದ್ದಾಳೆ. ನಂತರ ಬಾಲಕಿ ಮೊಬೈಲ್ ಯಾಕೆ ಕದ್ದಿದ್ದಾಳೆ ಎಂಬ ಕಾರಣವನ್ನು ಧೀರಜ್ ತಿಳಿದಿದ್ದಾರೆ. ಹೀಗಾಗಿ ಆಕೆಯನ್ನು ಶಿಕ್ಷಿಸದೆ, ಆಕೆಯ ವಿರುದ್ಧ ದೂರು ನೀಡಿದೆ, ಶಾಲೆಯ ಉಳಿದ ಶುಲ್ಕದ ಹಣವನ್ನು ಬಾಲಕಿಗೆ ನೀಡಿದ್ದಾರೆ.
Advertisement
Advertisement
ಖಾಸಗಿ ಡಿಟೆಕ್ಟಿವ್ ಆಗಿರುವ ಧೀರಜ್ ಪ್ರಕರಣದ ಕುರಿತು ಮಾಹಿತಿ ನೀಡಿದ್ದು, ಬಾಲಕಿ ಉತ್ತಮ ವಿದ್ಯಾರ್ಥಿನಿಯಾಗಿದ್ದಾಳೆ. 11ನೇ ತರಗತಿ ಪರೀಕ್ಷೆಯಲ್ಲಿ ಅವಳು ಶೇ.71 ಅಂಕ ಪಡೆದಿದ್ದಾಳೆ. ಅಲ್ಲದೆ 12ನೇ ತರಗತಿಗೆ ಸೇರಲು ಉತ್ಸುಕಳಾಗಿದ್ದಾಳೆ. ಆದರೆ ಅವಳ ಶಾಲೆಯ ಶುಲ್ಕ ತುಂಬಲು ಪೋಷಕರ ಬಳಿ ಅಷ್ಟು ಹಣವಿಲ್ಲ ಎಂದು ತಿಳಿಸಿದ್ದಾರೆ.
Advertisement
ಆಗಸ್ಟ್ 2ರಂದು ಯಾರೋ ನನ್ನ ಬೆಲೆ ಬಾಳುವ ಮೊಬೈಲ್ ಕದ್ದರು. ನಂತರ ದ್ವಾರಕಿಪುರ ಪೊಲೀಸ್ ಠಾಣೆಯಲ್ಲಿ ಘಟನೆ ವಿವರಿಸಿ, ದೂರು ದಾಖಲಿಸಿದೆ. ಆದರೆ ಪೊಲೀಸರು ಯಾವುದೇ ರೀತಿಯ ಮಾಹಿತಿ ಕಲೆ ಹಾಕುವಲ್ಲಿ ವಿಫಲವಾದರು. ಹೀಗಾಗಿ ನಾನೇ ತನಿಖೆ ನಡೆಸಲು ಆರಂಭಿಸಿದೆ ಎಂದು ತಿಳಿಸಿದ್ದಾರೆ.
Advertisement
ತುಂಬಾ ತಲೆ ಕೆಡಿಸಿಕೊಂಡು ಮೊಬೈಲ್ ಟ್ರೇಸ್ ಮಾಡಿದೆ. ಆ ದಿನ ತಾನು ಎಲ್ಲೆಲ್ಲಿಗೆ ಭೇಟಿ ನೀಡಿದ್ದೆ, ಏನು ಮಾಡಿದೆ, ಎಲ್ಲವನ್ನೂ ನೆನಪಿಸಿಕೊಂಡೆ. ಈ ವೇಳೆ ಹೊರಗಡೆ ಎಲ್ಲಿಯೂ ಮೊಬೈಲ್ ಕಳೆದಿಲ್ಲ ಎಂಬುದನ್ನು ಖಚಿತವಾಯಿತು. ಬಳಿಕ ಕಳ್ಳ ನಮ್ಮ ಮನೆಯಿಂದಲೇ ಮೊಬೈಲ್ ಕದ್ದಿದ್ದಾನೆ ಎಂದು ತಿಳಿದು, ಆ ದಿನ ಮನೆಗೆ ಯಾರ್ಯಾರು ಭೇಟಿ ನೀಡಿದ್ದಾರೆ ಎಲ್ಲರ ಪಟ್ಟಿ ಮಾಡಿದೆ. ಈ ವೇಳೆ ತಾಯಿ ಮಗಳ ಮೇಲೆ ಅನುಮಾನ ಬಂದಿತು. ಏಕೆಂದರೆ ಮಹಿಳೆ ಮನೆಯಲ್ಲಿ ಅವರ ಪತಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು. ಕುಟುಂಬ ಉಳಿಸಿದ ಹಣವನ್ನೆಲ್ಲ ಅವರ ವೈದ್ಯಕೀಯ ವೆಚ್ಚಕ್ಕೆ ಖರ್ಚು ಮಾಡುತ್ತಿದೆ. ಅಲ್ಲದೆ ಮಹಿಳೆಯ ಮಗಳು ತುಂಬಾ ಜಾಣೆ, ತನ್ನ ಶಿಕ್ಷಣವನ್ನು ಪೂರೈಸುವ ಕನಸು ಹೊಂದಿದ್ದಾಳೆ ಎಂಬುದನ್ನು ಅರಿತೆ ಎಂದು ವಿವರಿಸಿದ್ದಾರೆ.
ಇಷ್ಟೆಲ್ಲ ಸ್ಪಷ್ಟವಾದ ಬಳಿಕ ಬಾಲಕಿ ಜೊತೆಗೆ ನಿಧಾನವಾಗಿ ಮಾತನಾಡಿದೆ. ಈ ವೇಳೆ ಬಾಲಕಿ ನಾನು ಶೇ.71ರಷ್ಟು ಅಂಕ ಪಡೆದಿದ್ದೇನೆ. ಮುಂದೆ ಓದಬೇಕೆಂಬ ಕನಸು ಹೊಂಡಿದ್ದೇನೆ ಎಂದು ತಿಳಿಸಿದಳು. ಈ ವೇಳೆ ಬಾಲಕಿ ನಡುಗುತ್ತಿದ್ದಳು, ನನ್ನನ್ನು ಕಣ್ಣೆತ್ತಿ ನೋಡುತ್ತಿರಲಿಲ್ಲ. ನಂತರ ಕಳ್ಳತನ ಮಾಡುವುದಾಗಿ ಬಾಲಕಿ ಒಪ್ಪಿಕೊಂಡಳು ಎಂದು ತಿಳಿಸಿದ್ದಾರೆ.
ಹೆಚ್ಚು ವಿಚಾರಣೆ ನಡೆಸುತ್ತಿದ್ದಂತೆ ಬಾಲಕಿ ಕಣ್ಣೀರು ಹಾಕಿದ್ದು, ಈ ವೇಳೆ ಶಾಲಾ ಶುಲ್ಕ 2,500 ರೂ. ಕಟ್ಟಬೇಕಿತ್ತು. ಆದರೆ ಪೋಷಕರ ಬಳಿ ಹಣ ಇರಲಿಲ್ಲ. ಮೊಬೈಲ್ ಕದ್ದಿರುವುದಾಗಿ ತಿಳಿಸಿದ್ದಾಳೆ. ಈ ವೇಳೆ ಫೀ ರಿಸಿಪ್ಟ್ ಸಹ ಡಿಟೆಕ್ಟರ್‍ಗೆ ತೋರಿಸಿದ್ದಾಳೆ. ಅಲ್ಲದೆ ಬಾಲಕಿ ಮೊಬೈಲ್‍ನ್ನು ಮಾರಾಟ ಮಾಡಿಲ್ಲ, ಬದಲಿಗೆ ಓದು ಮುಗಿದ ಬಳಿಕ, ಕೆಲಸಕ್ಕೆ ಹೋಗಿ ಮೊಬೈಲ್ ಮರಳಿ ಅವರಿಗೆ ನೀಡಲು ಯೋಚಿಸಿದ್ದಾಳೆ. ಇದನ್ನು ತಿಳಿದ ಧೀರಜ್ 2,500 ರೂ. ನೀಡಿ ತಮ್ಮ ಮೊಬೈಲ್ ಮರಳಿ ಪಡೆದಿದ್ದಾರೆ. ಅಲ್ಲದೆ ಬಾಲಕಿಯ ಉಳಿದ ಶಾಲಾ ಶುಲ್ಕವನ್ನು ಸಹ ಧೀರಜ್ ಪಾವತಿಸಿದ್ದು, ಬಾಲಕಿ ವಿರುದ್ಧ ದೂರು ದಾಖಲಿಸದಿರಲು ನಿರ್ಧರಿಸಿದ್ದಾರೆ.