– ಪೊಲೀಸರಿಂದ ಪೀಠೋಪಕರಣ ಹೊರಕ್ಕೆ, ಮುಗಿಲು ಮುಟ್ಟಿದ ಮಕ್ಕಳ ಆಕ್ರಂದನ
– ಸೊಸೈಟಿ ಜಾಗ, ಕೋರ್ಟ್ ಆದೇಶವಿದೆ ಎಂದು ದಬ್ಬಾಳಿಕೆ
ಹುಬ್ಬಳ್ಳಿ: ಶಾಲೆ ಇರುವ ಜಾಗ ಸೊಸೈಟಿಗೆ ಸೇರಿದ್ದು, ಹೀಗಾಗಿ ಖಾಲಿ ಮಾಡಬೇಕು ಎಂದು ಒತ್ತಡ ಹಾಕಲಾಗಿದೆ. ಗಾಂಧಿವಾಡ ಕೋ ಆಪರೇಟಿವ್ ಸೊಸೈಟಿಯವರು ಶಾಲೆಯಲ್ಲಿನ ಪೀಠೋಪಕರಣಗಳನ್ನು ಹೊರಗೆ ಹಾಕಿ ದಬ್ಬಾಳಿಕೆ ಮಾಡುತ್ತಿದ್ದಾರೆ. ಈ ವೇಳೆ ಮಕ್ಕಳ ಆಕ್ರಂದನ ಮುಗಿಲು ಮುಟ್ಟಿದೆ.
Advertisement
ಹುಬ್ಬಳ್ಳಿಯ ಹರಿಜನ ಸರ್ಕಾರಿ ಅನುದಾನಿತ ಶಾಲೆಯ ಎದುರು ಬಿಗುವಿನ ವಾತವರಣ ನಿರ್ಮಾಣವಾಗಿದ್ದು, ಹರಿಜನ ಹೆಣ್ಣುಮಕ್ಕಳ ಕನ್ನಡ ಪ್ರಾಥಮಿಕ ಶಾಲೆ ಎದುರು ವಾಕ್ಸಮರ ನಡೆದಿದೆ. ಸೊಸೈಟಿ ಜನ ಶಾಲೆ ಖಾಲಿ ಮಾಡಿಸಲು ಬಂದಿದ್ದು, ಈ ಶಾಲೆ 1956ರಲ್ಲಿ ಆರಂಭವಾಗಿದೆ. ಆದರೆ ಗಾಂಧಿವಾಡ ಕೋ ಆಪರೇಟಿವ್ ಸೊಸೈಟಿ ಅವರು ಈ ಜಾಗ ಖರೀದಿಸಿದ್ದರು. ಬಳಿಕ ಲೇಔಟ್ ಮಾಡಿ ಮಾರಾಟ ಮಾಡಲಾಗಿತ್ತು. ಆಗ ಜಾಗವನ್ನು ಶಾಲಾ ಕಟ್ಟಡಕ್ಕೆ ನೀಡಿದ್ದರು. ಇದೀಗ ಶಾಲೆಯ ಜಾಗ ಖಾಲಿ ಮಾಡುವಂತೆ ಪಟ್ಟು ಹಿಡಿದಿದ್ದಾರೆ.
Advertisement
Advertisement
ಗಾಂಧಿವಾಡ ಸೊಸೈಟಿ ಖೊಟ್ಟಿ ದಾಖಲೆ ಸೃಷ್ಟಿಸಿ ದಾವೆ ಹೂಡಿದ್ದು, ನ್ಯಾಯಾಲಯ ಖಾಲಿ ಮಾಡುವಂತೆ ಹೇಳಿದೆ ಎಂದು ಸೊಸೈಟಿ ಕಡೆಯವರು ಹೇಳುತ್ತಿದ್ದಾರೆ. ಆದರೆ ಆದೇಶದಲ್ಲಿ ಶಾಲಾ ಕಟ್ಟಡ ಖಾಲಿ ಮಾಡುವಂತೆ ನಮೂದಿಸಿಲ್ಲ. ಒತ್ತಾಯ ಪೂರ್ವಕವಾಗಿ ಪೊಲೀಸ್ ಪಡೆ ತಂದು ಖಾಲಿ ಮಾಡಿಸಲಾಗುತ್ತಿದೆ ಎಂದು ಗಾಂಧಿವಾಡ ಕೋ ಆಪರೇಟಿವ್ ಸೊಸೈಟಿ ವಿರುದ್ಧ ಸ್ಥಳೀಯರು ಆರೋಪಿಸಿದ್ದಾರೆ.
Advertisement
ಶಾಲಾ ಆವರಣದ ಬಳಿ ಬಿಗುವಿನ ವಾತವರಣ ನಿರ್ಮಾಣವಾಗಿದ್ದು, ಸ್ಥಳದಲ್ಲಿ ಎಸಿಪಿ ನೈತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸೊಸೈಟಿಯವರು ಹಾಗೂ ಪೊಲೀಸರು ಶಾಲಾ ಪಿಠೋಪಕರಣಗಳನ್ನ ಹೊರಗಡೆ ಹಾಕುತ್ತಿದ್ದಾರೆ. ಇದನ್ನು ಕಂಡ ಪುಟ್ಟ ಮಕ್ಕಳು ಕಣ್ಣೀರು ಹಾಕಿದ್ದು, ಅಳು ಮುಗಿಲು ಮುಟ್ಟಿದೆ.