ಗದಗ: ರಾಜ್ಯಾದ್ಯಂತ ವರ್ಷದ ಆರಂಭದಲ್ಲಿ ಶಾಲಾ ಕಾಲೇಜು ಮತ್ತೆ ಪ್ರಾರಂಭವಾಗಿ ಎಲ್ಲಾ ಮಕ್ಕಳಿಗೆ ಸಂತಸ ತಂದಿದೆ. ಆದ್ರೆ ಗದಗ ಜಿಲ್ಲೆಯ ಕೆಲ ಮಕ್ಕಳಿಗೆ ಮಾತ್ರ ಈ ವರ್ಷವು ಕೂಡ ಕಹಿಯಾಗಿದೆ. ಗದಗ ಜಿಲ್ಲೆಯಲ್ಲಿ ಶಾಲೆ ಆರಂಭವಾಗುತ್ತಿದ್ದಂತೆಯೇ 10 ಜನ ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, 5 ಶಾಲೆಗಳನ್ನು ಬಂದ್ ಮಾಡಲಾಗಿದೆ.
ಕೋವಿಡ್-19 ಹಿನ್ನೆಲೆ ಕಳೆದ 10 ತಿಂಗಳಿನಿಂದ ಮುಚ್ಚಲಾಗಿದ್ದ ಶಾಲಾ ಕಾಲೇಜುಗಳನ್ನು ಸರ್ಕಾರ ಹೊಸ ವರ್ಷದ ಆರಂಭದಲ್ಲಿ ಪುನಾರಂಭಿಸಲು ನಿರ್ಧರಿಸಿ ಇದೀಗ 10ನೇ ತರಗತಿ ಹಾಗೂ ಪಿಯುಸಿ ತರಗತಿಗಳನ್ನು ತೆರೆಯಲಾಗಿದೆ.
Advertisement
Advertisement
ಗದಗ ಜಿಲ್ಲೆಯಾದ್ಯಂತ 10 ಜನ ಶಿಕ್ಷಕರಿಗೆ ಕೊರೋನಾ ಪಾಸಿಟಿವ್ ಬಂದಿದೆ. ಹೀಗಾಗಿ ಐದು ಶಾಲೆಯ ವಿದ್ಯಾರ್ಥಿಗಳಿಗೆ ಸದ್ಯಕ್ಕೆ ಶಿಕ್ಷಣ ನೀಡಲಾಗುತ್ತಿಲ್ಲ. ಗದಗ ನಗರದ ಮೂರು ಹಾಗೂ ಜಿಲ್ಲೆಯ ಎರಡು ಶಾಲೆಯನ್ನು ಬಂದ್ ಮಾಡಲಾಗಿದೆ.
Advertisement
Advertisement
ಶಿಕ್ಷಕರಿಗೆ ಕೊರೊನಾ ಸೋಂಕು ಇರುವ ಹಿನ್ನೆಲೆ 2 ಬಾರಿ ಶಾಲೆಯನ್ನು ಸ್ವಚ್ಛಗೊಳಿಸಲಾಗಿದೆ. ಆದರೂ ವಿದ್ಯಾರ್ಥಿಗಳು ಶಾಲೆಗೆ ಬರುತ್ತಿಲ್ಲ. ಒಟ್ಟು 6,665 ಶಿಕ್ಷಕರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದರಲ್ಲಿ 10 ಜನರಿಗೆ ಪಾಸಿಟಿವ್ ಬಂದಿದೆ. ವೈದ್ಯರ ಸಲಹೆಯ ಮೇರೆಗೆ ಶಿಕ್ಷಕರು ಈಗ ಹೋಂ ಕ್ವಾರಂಟೈನ್‍ನಲ್ಲಿದ್ದಾರೆ ಎಂದು ಗದಗದ ಡಿಡಿಪಿಐ ಬಸವಲಿಂಗಪ್ಪ ಹೇಳಿಕೆ ನೀಡಿದ್ದಾರೆ.