ಶಾಮನೂರು ಶಿವಶಂಕರಪ್ಪ ಮನೆಗೆ ಡಿ ಬಾಸ್ ಭೇಟಿ

Public TV
1 Min Read
DARSHAN 2 1

– ದಾವಣೆಗೆರೆಯ ಮಾಜಿ ಸಚಿವರ ಮನೆಗೆ ಭೇಟಿ

ದಾವಣಗೆರೆ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಪ್ರಾಣಿ ಪ್ರೀತಿ ಇರುವುದು ತಿಳಿದೇ ಇದೆ. ಅದೇ ರೀತಿ ಇದೀಗ ಗೋವು ಸಾಕಣೆ ಹಾಗೂ ಕುದುರೆ ಸಾಕಣೆ ಕುರಿತು ಮಾಹಿತಿ ಪಡೆಯಲು ಶಾಸಕ, ಮಾಜಿ ಸಚಿವ, ಶಾಮನೂರು ಶಿವಶಂಕರಪ್ಪನವರ ಫಾರ್ಮ್ ಹೌಸ್‍ಗೆ ಭೇಟಿ ನೀಡಿದ್ದಾರೆ.

vlcsnap 2020 08 30 22h10m38s013 e1598805881919

ಇಂದು ಮಧ್ಯಾಹ್ನದಿಂದ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ದುಗ್ಗಾವತಿಯಲ್ಲಿನ ಶಾಮನೂರ ಅವರ ತೋಟಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿನ ಗೋ ಪಾಲನೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ನಂತರ ದಾವಣಗೆರೆ ನಗರದ ಕಲ್ಲೇಶ್ವರ ರೈಸ್ ಮಿಲ್ ಬಳಿ ಕುದುರೆಗಳ ಪಾಲನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಈ ವೇಳೆ ನಟ ದರ್ಶನ್‍ಗೆ ಶಾಸಕ ಶಾಮನೂರ ಶಿವಶಂಕರಪ್ಪ ಪುತ್ರ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಸಾಥ್ ನೀಡಿದ್ದಾರೆ.

ಇಂದು ಸಂಜೆ ವರೆಗೆ ವಿವಿಧ ಫಾರ್ಮ್ ಹೌಸ್‍ಗೆ ದರ್ಶನ್ ಭೇಟಿ ನೀಡಿದ್ದು, ಮಾಹಿತಿ ಸಂಗ್ರಹಿಸಿದ್ದಾರೆ. ನಂತರ ರಾತ್ರಿ ಎಸ್‍ಎಸ್ ಮನೆಯಲ್ಲಿಯೇ ಊಟ ಮಾಡಿದ್ದಾರೆ. ಇಂದು ದಾವಣಗೆರೆಯಲ್ಲಿಯೇ ವಾಸ್ತವ್ಯ ಹೂಡಲಿದ್ದು, ಬಾಪೂಜಿ ಗೆಸ್ಟ್ ಹೌಸ್‍ನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.

vlcsnap 2020 08 30 22h10m54s791 e1598805938171

ಬೆಳಗ್ಗೆ ಮತ್ತೆ ಕೆಲ ಪ್ರಗತಿಪರ ರೈತರನ್ನು ಡಿ ಬಾಸ್ ಭೇಟಿ ಮಾಡಲಿದ್ದು, ವಿವಿಧ ವಿಚಾರಗಳ ಕುರಿತು ಚರ್ಚಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ವೇಳೆ ನಟ ದರ್ಶನ್ ನೋಡಿದ ಅಭಿಮಾನಿಗಳು ಅವರನ್ನು ನೋಡಲು ಮುಗಿಬಿದ್ದಿದ್ದರು.

Share This Article
Leave a Comment

Leave a Reply

Your email address will not be published. Required fields are marked *