– ಮಹಿಳೆ ಕೊಲೆ ಪ್ರಕರಣ ಭೇದಿಸಿದ ಬಟ್ಲಹಳ್ಳಿ ಪೊಲೀಸರು
ಚಿಕ್ಕಬಳ್ಳಾಪುರ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಒಂಟಿ ಮಹಿಳೆಯ ಮೇಲೆ ಕಣ್ಣು ಹಾಕಿದ್ದ ವಿಕೃತ ಕಾಮಿಯೋರ್ವ, ಅತ್ಯಾಚಾರಕ್ಕೆ ಮಹಿಳೆ ಸಹಕರಿಸಲಿಲ್ಲ ಅಂತ ಕತ್ತು ಹಿಸುಕಿ ಮಹಿಳೆಯನ್ನ ಕೊಂದು ನಂತರ ಶವದ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದನು. ಇದೀಗ ಪೊಲೀಸರು ವಿಕೃತ ಕಾಮಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆರೋಪಿಯನ್ನ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.
ಅಕ್ಟೋಬರ್ 19, ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಕೋನಾಪುರ ಗ್ರಾಮದ 27 ವರ್ಷದ ಗೃಹಿಣಿ ತಮ್ಮ ಜಮೀನಿನಲ್ಲಿ ಕಡಲೆಕಾಯಿ ಬಿಡಿಸುತ್ತಿದ್ದರು. ಇದೇ ಸಂದರ್ಭಕ್ಕೆ ಹೊಂಚು ಹಾಕಿ ಕಾಯುತ್ತಿದ್ದ ಕೆ.ಎನ್.ಶಂಕರಪ್ಪ ಜಮೀನಿನಲ್ಲಿದ್ದ ಒಂಟಿ ಮಹಿಳೆ ಬಳಿ ಬಂದು, ಪರಿಚಯದ ನೆಪದಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆಗ ಗೃಹಿಣಿ ವಿರೋಧ ವ್ಯಕ್ತಪಡಿಸಿದ್ದ ಕಾರಣ ಆಕೆಯ ಕತ್ತು ಹಿಸುಕಿ ಕೊಲೆಗೈದಿದ್ದಾನೆ. ನಂತರ ಶವದ ಮೇಲೆ ಅತ್ಯಾಚಾರವೆಸಗಿ ವಿಕೃತ ಕಾಮ ಮೆರೆದಿದ್ದನು. ಕೊಲೆ ನಡೆದು ಬರೋಬ್ಬರಿ ಒಂದು ತಿಂಗಳಲ್ಲಿ ಬಟ್ಲಹಳ್ಳಿ ಠಾಣೆ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.
ಬಂಧಿತ ಆರೋಪಿ ಕೆ.ಎನ್. ಶಂಕರಪ ಆಂಧ್ರಪ್ರದೇಶದ ಎದ್ದುಲೋಳ್ಳಪಲ್ಲಿ ನಿವಾಸಿ. ಸ್ನೇಹಿತನ ಮನೆಗೆ ಅಂತ ಕರ್ನಾಟಕ ಕೋನಾಪುರ ಗ್ರಾಮಕ್ಕೆ ಬಂದಿದ್ದನು. ಕೂಲಿ ಮಾಡಿಕೊಂಡು ಇಲ್ಲೆ ಇರ್ತೀನಿ ಅಂತ ಹೇಳಿದ್ದನು. ಆದರೆ ಕೂಲಿ ಕೆಲಸಕ್ಕೆ ಹೋಗೋದ್ರ ಬದಲು ಕೆಲಸದಲ್ಲಿ ನಿರತವಾಗಿದ್ದ ಮಹಿಳೆಯ ಮೇಲೆ ಅತ್ಯಾಚಾರ ಎಸಗಲು ಹೋಗಿ ಕೊಂದು ಅತ್ಯಾಚಾರವೆಸಗಿ ವಿಕೃತಿ ಮೆರೆದಿದ್ದನು.
ಆಂಧ್ರ ಮೂಲದ ಆರೋಪಿ ಕೆ.ಎನ್.ಶಂಕರಪ್ಪ, ಮೊದಲೇ ಕಳೆದ ಎರಡು ವರ್ಷಗಳ ಹಿಂದೆ ಹೆಂಡತಿಯನ್ನ ತೊರೆದು ಅಲ್ಲಿ ಇಲ್ಲಿ ಓಡಾಡಿಕೊಂಡಿದ್ದನು. ಈ ಪಾಪಿಯ ವಿಕೃತಿಯನ್ನ ಕೇಳಿ ಸ್ವತಃ ಪೊಲೀಸರೇ ದಂಗಾಗಿದ್ದಾರೆ. ಈ ರೀತಿ ಎಲ್ಲಾದರೂ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನಾ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.