– ಒಳಗೆ ಹೊಸ 3 ಶರ್ಟ್, ಮೇಲೆ ಪೊಲೀಸ್ ಸಮವಸ್ತ್ರ
ಲಕ್ನೋ: ಓರ್ವ ಪೊಲೀಸಪ್ಪ ಶರ್ಟ್ ಕದ್ದು ತಗ್ಲಾಕೊಂಡ ಪೊಲೀಸಪ್ಪ ಧರ್ಮದೇಟು ತಿಂದಿರುವ ಘಟನೆ ಲಕ್ನೋ ನಗರದ ಶಾಪಿಂಗ್ ಮಾಲ್ ನಲ್ಲಿ ನಡೆದಿದೆ. ಪೊಲೀಸಪ್ಪನಿಗೆ ಸ್ಥಳೀಯರು ಥಳಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಆದೇಶ್ ಕುಮಾರ್ ಶರ್ಟ್ ಕದ್ದು ಧರ್ಮದೇಟು ತಿಂದ ಪೊಲೀಸ್. ಆದೇಶ್ ಕುಮಾರ್ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಕೆಲಸ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ. ಲಕ್ನೋ ನಗರದ ಹುಸೇನಗಂಜ್ ನಲ್ಲಿರುವ ಶಾಪಿಂಗ್ ಮಾಲ್‍ಗೆ ತೆರಳಿದ್ದಾನೆ. ಶಾಪಿಂಗ್ ಮಾಲ್ ನಿಂದ ಹೊರ ಬರುವಾಗ ಪ್ರವೇಶದ್ವಾರದ ಸೈರನ್ ಆನ್ ಆಗಿದೆ. ಮಾಲ್ ಸಿಬ್ಬಂದಿ ತಡೆದು ಪರಿಶೀಲಿಸಿದಾಗ ಯುನಿಫಾರ್ಮಿನೊಳಗೆ ಮೂರು ಶರ್ಟ್ ಧರಿಸಿರೋದು ಪತ್ತೆಯಾಗಿದೆ. ಸಿಬ್ಬಂದಿ ನಕಲಿ ಪೊಲೀಸ್ ಎಂದು ನಾಲ್ಕು ಧರ್ಮದೇಟು ಸಹ ನೀಡಿದ್ದಾರೆ. ತದನಂತರ ಆತ ಅಸಲಿ ಪೊಲೀಸ್ ಅನ್ನೋದು ತಿಳಿದಿದೆ.
ಶರ್ಟ್ ಕಳ್ಳತನ ಸಿಸಿಟಿವಿಯಲ್ಲಿ ಸೆರೆ: ಆದೇಶ್ ಕುಮಾರ್ ಮೂರು ಶರ್ಟ್ ಕಳ್ಳತನ ಮಾಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಟ್ರಯಲ್ ರೂಮಿಗೆ ಶರ್ಟ್ ತೆಗೆದುಕೊಂಡ ಆದೇಶ್ ಖಾಲಿ ಕೈಯಲ್ಲಿ ಹಿಂದಿರುಗಿರೋದು ಸೆರೆಯಾಗಿದೆ.
ಆದೇಶ್ ಕುಮಾರ್ ಗೋಮತಿ ನಗರದ ಠಾಣೆಯಲ್ಲಿ ನಿಯೋಜಿಸಲಾಗಿತ್ತು. ನಂತರ ಆತನನ್ನ ಪೊಲೀಸ್ ಲೈನ್ ಸೇವೆಯಲ್ಲಿ ನಿಯುಕ್ತಿಗೊಳಿಸಲಾಗಿತ್ತು. ಕಳ್ಳತನ ಪ್ರಕರಣ ಹಿನ್ನೆಲೆಯಲ್ಲಿ ಆದೇಶ್ ಅಮಾನತುಗೊಂಡಿದ್ದಾನೆ ಎಂದು ಪೊಲೀಸ್ ಕಮೀಷನರ್ ಸಿಬ್ಬಂದಿ ಹೇಳಿದ್ದಾರೆ.