ಮುಂಬೈ: ನ್ಯಾಷನಲ್ ಕಾಂಗ್ರೆಸ್ ಪಾರ್ಟಿ (ಎನ್‍ಸಿಪಿ)ಯ ಮುಖಂಡ ಶರದ್ ಪವಾರ್ ಅವರ ಆರೋಗ್ಯದಲ್ಲಾದ ಏರುಪೇರಿನಿಂದಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಬುಧವಾರ ಶಸ್ತ್ರಚಿಕಿತ್ಸೆ ನಡೆಯಲಿದೆ ಎಂದು ವರದಿಯಾಗಿದೆ.
ಶರದ್ ಪವಾರ್ ಅವರಿಗೆ ಹೊಟ್ಟೆನೋವು ಕಾಣಿಸಿಕೊಂಡ ಪರಿಣಾಮ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದರು, ಅಲ್ಲಿನ ವೈದ್ಯರು ಪರೀಕ್ಷಿಸಿದಾಗ ಪಿತ್ತಕೋಶದಲ್ಲಿ ಸಮಸ್ಯೆ ಕಂಡುಬಂದಿದ್ದು, ಬುಧವಾರ ಶಸ್ತ್ರಚಿಕಿತ್ಸೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಈ ಕುರಿತು ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ಎನ್‍ಸಿಪಿ ಪಕ್ಷದ ಮುಖಂಡ ನವಾಬ್ ಮಲಿಕ್, ಶರದ್ ಪವಾರ್ ಅವರಿಗೆ ಹೊಟ್ಟೆನೋವು ಕಾಣಿಸಿಕೊಂಡಿತ್ತು, ಹಾಗಾಗಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಕರೆತರಲಾಗಿತ್ತು. ಅಲ್ಲಿನ ವೈದ್ಯರು ಪರೀಕ್ಷಿಸಿದಾಗ ಪಿತ್ತಕೋಶದಲ್ಲಿ ಸಮಸ್ಯೆ ಕಂಡುಬಂದಿದೆ ಎಂದು ತಿಳಿಸಿದ್ದಾರೆ.
Kind attention
Our party president Sharad Pawar saheb was feeling a little uneasy due to a pain in his abdomen last evening and was therefore taken to Breach Candy Hospital for a check up.
Upon diagnosis it came to light that he has a problem in his Gall Bladder.
— Nawab Malik نواب ملک नवाब मलिक (@nawabmalikncp) March 29, 2021
ಶರದ್ ಪವಾರ್ ಈ ಹಿಂದೆ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಹಾಗಾಗಿ ರಕ್ತಶುದ್ದೀಕರಣಕ್ಕೆ ಆಸ್ಪತ್ರೆ ಹೋಗಬೇಕಾಗಿತ್ತು ಆದರೆ ಇದೀಗ ಕಾಣಿಸಿಕೊಂಡ ಪಿತ್ತಕೋಶದ ಸಮಸ್ಯೆಯಿಂದ ರಕ್ತಶುದ್ದೀಕರಣ ಸಾಧ್ಯವಾಗುತ್ತಿಲ್ಲ. ಪವಾರ್ ಅವರ ಆರೋಗ್ಯ ಸ್ಥಿತಿ ಸರಿಹೊಂದುವ ವರೆಗೆ ಪವಾರ್ ಅವರು ಹಮ್ಮಿಕೊಂಡಿದ್ದ ಎಲ್ಲಾ ಕಾರ್ಯಕ್ರಮಗಳು ರದ್ದುಗೊಳ್ಳಲಿದೆ ಎಂದು ಮಲಿಕ್ ಸ್ಪಷ್ಟಪಡಿಸಿದ್ದಾರೆ.