ಬೆಂಗಳೂರು: ಕೋವಿಡ್ ಮೂರನೇ ಅಲೆಯ ಭೀತಿಯ ಹಿನ್ನೆಲೆ, ಬೆಂಗಳೂರು ಜಿಲ್ಲಾ ವ್ಯಾಪ್ತಿಗೆ ಒಳಪಡುವ ಮುಜರಾಯಿ ಇಲಾಖೆಯ ಹಾಗೂ ಖಾಸಗಿ ದೇವಾಲಯಗಳಲ್ಲಿ ಶ್ರಾವಣ ಮಾಸದ ವಾರಾಂತ್ಯ ದಿನಗಳು ಹಾಗೂ ಸಾರ್ವತ್ರಿಕ ರಜಾ ದಿನಗಳಲ್ಲಿ ಸಾರ್ವಜನಿಕರ ದೇವಾಲಯ ಪ್ರವೇಶಕ್ಕೆ ನಿಷೇಧ ಹೇರಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
Advertisement
ಈ ಹಿಂದೆ ಜುಲೈ 27 ರಂದು ದೇವಸ್ಥಾನಗಳಲ್ಲಿ ಪ್ರತಿನಿತ್ಯದ ಸೇವೆ, ಪೂಜೆಗಳನ್ನು ನಡೆಸಲು ಸೂಚಿಸಿ ಹಬ್ಬ, ಮೆರವಣಿಗೆ, ಧಾರ್ಮಿಕ ಸಭೆಗಳಿಗೆ ಮಾತ್ರನಿಷೇಧ ಹೇರಲಾಗಿತ್ತು.
Advertisement
Advertisement
ದಿನಾಂಕ 9-08-2021 ರಿಂದ 7-09-21 ರ ವರೆಗೆ ಶ್ರಾವಣ ಮಾಸದ ಹಿನ್ನೆಲೆ ವಿವಿಧ ಜಿಲ್ಲೆ, ರಾಜ್ಯಗಳಿಂದ ಭಕ್ತರು ಆಗಮಿಸಲಿದ್ದು, ಕೋವಿಡ್ ಹರಡುವ ಸಾಧ್ಯತೆ ಹೆಚ್ಚು ಇರುತ್ತದೆ. ಹೀಗಾಗಿ ದೇವಾಲಯಗಳಲ್ಲಿ ದೈನಂದಿನ ಪೂಜೆ, ಸೇವೆ ಹೊರತುಪಡಿಸಿ ಶ್ರಾವಣ ಮಾಸದ ಶನಿವಾರ, ಭಾನುವಾರ, ಸಾರ್ವತ್ರಿಕ ರಜಾ ದಿನಗಳಂದು ಭಕ್ತಾದಿಗಳಿಗೆ ಪ್ರವೇಶ ನಿಷೇಧಿಸಲಾಗಿದೆ.
Advertisement