– ಎರಡು ತಂಡದ ನಾಯಕರ ಅತ್ಯುತ್ತಮ ಆಟ
– ಕೊನೆಯ ಎಸೆತದಲ್ಲಿ ಸ್ಯಾಮ್ಸನ್ ಔಟ್
ಮುಂಬೈ: ಸ್ಫೋಟಕ ಶತಕ ಸಿಡಿಸಿ ಕೊನೆಯ ಎಸೆತವನ್ನು ಸಿಕ್ಸರ್‌ಗೆ ಅಟ್ಟುವಲ್ಲಿ ನಾಯಕ ಸಂಜು ಸ್ಯಾಮ್ಸನ್ ವಿಫಲರಾದ ಕಾರಣ ರಾಜಸ್ಥಾನ ವಿರುದ್ಧದ ಪಂದ್ಯವನ್ನು ಪಂಜಾಬ್ ಕಿಂಗ್ಸ್ 4 ರನ್‍ನಿಂದ ರೋಚಕವಾಗಿ ಗೆದ್ದುಕೊಂಡಿದೆ.
ಗೆಲ್ಲಲು 222 ರನ್‍ಗಳ ಕಠಿಣ ಗುರಿಯನ್ನು ಪಡೆದಿದ್ದ ರಾಜಸ್ಥಾನ ಆರಂಭದಲ್ಲೇ ವಿಕೆಟ್ ಕಳೆದುಕೊಂಡರೂ ಸಂಜು ಸ್ಯಾಮ್ಸನ್ ಏಕಾಂಗಿ ಹೋರಾಟದಿಂದ ಗೆಲುವಿನ ಹತ್ತಿರಕ್ಕೆ ಬಂದಿತ್ತು. ಆದರೆ ಕೊನೆಯ ಎಸೆತದಲ್ಲಿ 5 ರನ್ ಬೇಕಿದ್ದಾಗ ಸಿಕ್ಸರ್‌ಗೆ ಅಟ್ಟುವ ಪ್ರಯತ್ನದಲ್ಲಿ ಸ್ಯಾಮ್ಸನ್ ವಿಫಲರಾಗಿ ಔಟ್ ಆದರು. ಈ ಮೂಲಕ ರಾಜಸ್ಥಾನ ರಾಯಲ್ಸ್ 7 ವಿಕೆಟ್ ಕಳೆದುಕೊಂಡು 217 ರನ್ ಗಳಿಸಿ ಸೋಲನ್ನು ಅನುಭವಿಸಿತು.
Advertisement
Advertisement
ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ಸ್ಯಾಮ್ಸನ್ ಅವರು ದಿಟ್ಟ ಹೋರಾಟವನ್ನು ನಡೆಸಿದ್ದರು. ಬೆನ್ ಸ್ಟೋಕ್ಸ್ 0, ಜೋಸ್ ಬಟ್ಲರ್ 25 ರನ್, ಶಿವಂ ದುಬೆ 15 ರನ್ ಗಳಿಸಿ ಔಟಾದರು.
Advertisement
12.4 ಓವರಿನಲ್ಲಿ ಶಿವಂ ದುಬೆ ಔಟಾದಾಗ ರಾಜಸ್ಥಾನ ತಂಡದ ಸ್ಕೋರ್ 4 ವಿಕೆಟ್ ನಷ್ಟಕ್ಕೆ 123 ಆಗಿತ್ತು. ನಂತರ ಜೊತೆಯಾದ ರಿಯಾನ್ ಪರಾಗ್ ಮತ್ತು ಸ್ಯಾಮ್ಸನ್ 23 ಎಸೆತಗಳಲ್ಲಿ 52 ರನ್ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು. ಉತ್ತಮವಾಗಿ ಆಡುತ್ತಿದ್ದ ಪರಾಗ್ 25 ರನ್(11 ಎಸೆತ, 1 ಬೌಂಡರಿ, 3 ಸಿಕ್ಸರ್) ಹೊಡೆದು ಕ್ಯಾಚ್ ನೀಡಿ ಔಟಾದರು.
Advertisement
ಸ್ಯಾಮ್ಸನ್ ದಾಖಲೆ: ನಾಯಕನಾಗಿ ಆಡಿದ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿ ಐಪಿಎಲ್‍ನಲ್ಲಿ ಸಂಜು ಸ್ಯಾಮ್ಸನ್ ದಾಖಲೆ ನಿರ್ಮಿಸಿದ್ದಾರೆ. ಈ ಮೊದಲು ಸ್ಟೀವ್ ಸ್ಮಿತ್ ರಾಜಸ್ಥಾನ ತಂಡವನ್ನು ಮುನ್ನಡೆಸಿದ್ದರು. ಸ್ಯಾಮ್ಸನ್ 54 ಎಸೆತದಲ್ಲಿ ಶತಕ ಸಿಡಿಸಿದರೆ ಅಂತಿಮವಾಗಿ 119 ರನ್(63 ಎಸೆತ, 12 ಬೌಂಡರಿ, 7 ಸಿಕ್ಸರ್) ಸಿಡಿಸಿ ಔಟಾದರು.
ಸೋತಿದ್ದು ಹೇಗೆ?
ಕೊನೆಯ 24 ಎಸೆತಗಳಲ್ಲಿ ರಾಜಸ್ಥಾನ ತಂಡಕ್ಕೆ 48 ರನ್ ಬೇಕಿತ್ತು. 17ನೇ ಓವರಿನಲ್ಲಿ 8 ರನ್, 18ನೇ ಓವರಿನಲ್ಲಿ 19 ರನ್, 19ನೇ ಓವರಿನಲ್ಲಿ 8 ರನ್ ಬಂತು. 20ನೇ ಓವರಿನ ಮೊದಲ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. ನಂತರ ಎರಡು ಎಸೆತದಲ್ಲಿ 1, 1 ರನ್ ಬಂತು. ಅರ್ಷದೀಪ್ ಎಸೆದ 4ನೇ ಎಸೆತವನ್ನು ಸ್ಯಾಮ್ಸನ್ ಸಿಕ್ಸರ್‍ಗೆ ಅಟ್ಟಿದರು. 5ನೇ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. ಕೊನೆಯ ಎಸೆತವನ್ನು ಸಿಕ್ಸರ್ ಸಿಡಿಸುವ ಪ್ರಯತ್ನ ಮಾಡಿದರೂ ಬಾಲ್ ಹೂಡಾ ಕೈ ಸೇರಿತು. ಪಂಜಾಬ್ ತಂಡ ಪಂದ್ಯವನ್ನು ಗೆದ್ದುಕೊಂಡಿತು.
ರಾಜಸ್ಥಾನ ರನ್ ಏರಿದ್ದು ಹೇಗೆ?
50 ರನ್ – 31 ಎಸೆತ
100 ರನ್ – 63 ಎಸೆತ
150 ರನ್ – 89 ಎಸೆತ
200 ರನ್ – 108 ಎಸೆತ
217 ರನ್ – 120 ಎಸೆತ
ಟಾಸ್ ಸೋತು ಬ್ಯಾಟಿಂಗ್‍ಗೆ ಇಳಿದ ಪಂಜಾಬ್ 22 ರನ್ ಗಳಿಸಿದ್ದಾಗ ಮಯಾಂಕ್ ಅಗರ್‍ವಾಲ್ ವಿಕೆಟ್ ಕಳೆದುಕೊಂಡಿತು. ನಂತರ ರಾಹುಲ್ ಜೊತೆ ಸೇರಿದ ಕ್ರಿಸ್ ಗೇಲ್ 40 ರನ್(28 ಎಸೆತ, 4 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾದರು.
ಮೂರನೇ ವಿಕೆಟ್‍ಗೆ ಒಂದಾದ ರಾಹುಲ್ ಮತ್ತು ದೀಪಕ್ ಹೂಡಾ ಸಿಕ್ಸರ್ ಮತ್ತು ಬೌಂಡರಿಗಳ ಮಳೆ ಸುರಿಸಲು ಆರಂಭಿಸಿದರು. ಮೈದಾನದ ಮೂಲೆ ಮೂಲೆಗೆ ಚೆಂಡನ್ನು ಚಚ್ಚಿದ ಈ ಜೋಡಿ ಕೇವಲ 47 ಎಸೆತದಲ್ಲಿ 105 ರನ್ ಪೇರಿಸಿತು.
ಕ್ರೀಸ್‍ಗೇಲ್ ಔಟಾದಾಗ ತಂಡದ ಮೊತ್ತ 9.5 ಓವರ್‍ಗೆ 2 ವಿಕೆಟ್ ನಷ್ಟಕ್ಕೆ 89 ರನ್ ಆಗಿತ್ತು. 17.3 ಓವರ್‍ನಲ್ಲಿ ದೀಪಕ್ ಹೂಡಾ ಔಟಾದಾಗ ಪಂಜಾಬ್ ತಂಡದ ರನ್ 194 ಆಗಿತ್ತು. ದೀಪಕ್ ಹೂಡಾ 20 ಎಸೆತಗಳಿಗೆ ಅರ್ಧಶತಕ ಹೊಡೆದು ಅಂತಿಮವಾಗಿ 64 ರನ್(28 ಎಸೆತ, 4 ಬೌಂಡರಿ, 6 ಸಿಕ್ಸರ್) ಹೊಡೆದು ಔಟಾದರು.
ಇತ್ತ ರಾಹುಲ್ 30 ಎಸೆತದಲ್ಲಿ ಅರ್ಧಶತಕ ಪೂರ್ಣಗೊಳಿಸಿದರೆ ಅಂತಿಮವಾಗಿ 91 ರನ್(50 ಎಸೆತ, 7 ಬೌಂಡರಿ, 5 ಸಿಕ್ಸರ್) ಹೊಡೆದು ತೆವಾಟಿಯಾ ಬೌಂಡರಿ ಬಳಿ ಹಿಡಿದ ಅತ್ಯುತ್ತಮ ಕ್ಯಾಚ್‍ಗೆ ಔಟಾದರು. ದೀಪಕ್ ಹೂಡಾ ಮತ್ತು ಕೆಎಲ್ ರಾಹುಲ್ ಆರ್ಭಟವನ್ನು ನಿಯಂತ್ರಿಸಲು 8 ಮಂದಿ ಬೌಲಿಂಗ್ ಮಾಡಿದ್ದು ವಿಶೇಷವಾಗಿತ್ತು.
ರನ್ ಏರಿದ್ದು ಹೇಗೆ?
50 ರನ್ – 39 ಎಸೆತ
100 ರನ್ – 65 ಎಸೆತ
150 ರನ್ – 84 ಎಸೆತ
200 ರನ್ – 107 ಎಸೆತ
221 ರನ್ – 120 ಎಸೆತ