ಶಕ್ತಿ ಇದ್ದರೆ ಅಪ್ಪ, ಮಗ ಅಂಬಾರಿ ಹೊರುತ್ತಾರೆ: ಬಿ.ಸಿ.ಪಾಟೀಲ್

Public TV
1 Min Read
BC Patil Haveri

ಹಾವೇರಿ: ಹಳೆಯ ಮಿತ್ರರು ವಾಪಸ್ ಬರಬಹುದು ಎಂಬ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಆಹ್ವಾನಕ್ಕೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ:  ಹೆಂಡತಿಯಾಗಿದ್ದವಳು ಮಲತಾಯಿಯಾಗಿ ಬಂದಳು..!

ಹಾವೇರಿ ಜಿಲ್ಲೆ ಹಿರೇಕೆರೂರು ಪಟ್ಟಣದ ನಿವಾಸದಲ್ಲಿ ಮಾತನಾಡಿದ ಅವರು, ಟೆಂಡರ್ ಕರೆದವರ ರೀತಿ ಬೇಕಾದವರು ಅರ್ಜಿ ಹಾಕಬಹುದು ಅಂದಿದ್ದಾರೆ. ಕಾಂಗ್ರೆಸ್ ಅರ್ಜಿಗಳು ಸೇಲ್ ಆಗೋದಿಲ್ಲ. ಡಿಕೆಶಿ ಏನೋ ಕನಸು ಕಾಣುತ್ತಿದ್ದಾರೆ. ಅದು ಯಾವುದೂ ಆಗೋದಿಲ್ಲ. ಸಚಿವ ಯೋಗೇಶ್ವರ ಅವರಷ್ಟು ಬುದ್ದಿವಂತರಲ್ಲ ನಾವು. ಅವರ ಪರೋಕ್ಷವಾದ ಮಾತುಗಳು ಅರ್ಥವಾಗೋದಿಲ್ಲ ನಮಗೆ. ನೇರವಾಗಿ ಇದ್ದರೆ ಹೇಳಬಹುದು. ಅಪ್ಪ ಶಕ್ತಿ ಇದ್ದರೆ ಅಪ್ಪ ಅಂಬಾರಿ ಹೊರ್ತಾನೆ, ಮಗ ಶಕ್ತಿ ಇದ್ದರೆ ಮಗ ಅಂಬಾರಿ ಹೊರುತ್ತಾನೆ ಎಂದಿದ್ದಾರೆ.

bjp cng

ಕಾಂಗ್ರೆಸ್ ನವರು ಔಟ್ ಆಫ್ ಸೈಟ್ ಆಗಿಬಿಟ್ಟಿದ್ದಾರೆ. ಜನರು ಕಾಂಗ್ರೆಸ್ ನವರನ್ನ ಮರೆತು ಬಿಟ್ಟಿದ್ದಾರೆ. ಕಾಂಗ್ರೆಸ್ ಅರ್ಜಿಗಳನ್ನ ಯಾರೂ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ಕಾಂಗ್ರೆಸ್ ನವರು ಹೋಲ್ ಸೇಲ್ ಟೆಂಡರ್ ಕರೆದಿದ್ದಾರೆ. ಯಾರು ಬೇಕಾದರೂ ಬರಬಹುದು ಅಂತಾ ಫ್ರೀ ಟೆಂಡರ್ ಕರೆದಿದ್ದಾರೆ ಎಂದು ಬಿ.ಸಿ.ಪಾಟೀಲ್ ಕಿಡಿಕಾರಿದ್ದಾರೆ.

bjp

ಸರ್ಕಾರದಲ್ಲಿ ಆಡಳಿತ ಪಕ್ಷದವರಿಗಿಂತ ವಿರೋಧ ಪಕ್ಷದವರ ಮಾತು ಜಾಸ್ತಿ ಕೇಳ್ತಾರೆ ಎಂಬ ಸಚಿವ ಸಿ.ಪಿ.ಯೋಗಿಶ್ವರ ಹೇಳಿಕೆ ಹಾಗೇನಿಲ್ಲ, ಕೆಲವರು ನೆಮ್ಮದಿ ಇಲ್ಲದಿರೋರು, ಸಂತೋಷ ಇಲ್ಲದವರು ಹಾಗೆ ಹೇಳ್ತಾರೆ. ಅದ್ಯಾವುದಕ್ಕೂ ಮಹತ್ವ ಕೊಡೋ ಅಗತ್ಯವಿಲ್ಲ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *